ಶ್ರೀ ಶಾರದಾ ಆಂಗ್ಲ ಮಾಧ್ಯಮ ಪ್ರಾಥಮಿಕ-ಪ್ರೌಢಶಾಲೆ, ಬಸ್ರೂರು: ಉತ್ಕೃಷ್ಟ ಶೈಕ್ಷಣಿಕ ಸಾಧನೆಯೊಂದಿಗೆ ಭರದಿಂದ ಪ್ರವೇಶಾತಿ
Views: 0
ಕನ್ನಡ ಕರಾವಳಿ ಸುದ್ದಿ: ಶಿಕ್ಷಣದ ಬೆಳಕಿನೊಂದಿಗೆ ಸಂಸ್ಕಾರ, ಸಾಧನೆ ಮತ್ತು ಸೃಜನಶೀಲತೆಯ ಸುಂದರ ಸಂಗಮವಾಗಿರುವ ಶಾಲೆಯಲ್ಲಿ ಕಳೆದ ಶೈಕ್ಷಣಿಕ ವರ್ಷವು ಅನೇಕ ಅದ್ಭುತ ಕ್ಷಣಗಳಿಗೆ ಸಾಕ್ಷಿಯಾಯಿತು.
ವರ್ಷಪೂರ್ತಿ ನಡೆದ ವೈವಿಧ್ಯಮಯ ಕಾರ್ಯಕ್ರಮಗಳು ಶಾಲಾ ಆವರಣವನ್ನು ಸಂತೋಷ, ಸಂಭ್ರಮ, ಉತ್ಸಾಹ ಹಾಗೂ ಪ್ರತಿಭೆಗಳ ಹೊನಲಿನಿಂದ ಕಂಗೊಳಿಸುವಂತೆ ಮಾಡಿತು. ಪ್ರತಿಯೊಂದು ಕಾರ್ಯಕ್ರಮವೂ ವಿದ್ಯಾರ್ಥಿಗಳ ಕನಸುಗಳಿಗೆ ಹೊಸ ರೆಕ್ಕೆಗಳನ್ನು ನೀಡಿದಂತಾಗಿದ್ದು, ಶಾಲೆಯ ಗೌರವವನ್ನು ಮತ್ತಷ್ಟು ಎತ್ತರಕ್ಕೆ ಏರಿಸಿತು.

ಪುಟಾಣಿ ಮಕ್ಕಳ ಮುದ್ದಾದ ಕೈಗಳಿಂದ ನಡೆದ “ಹಸಿರಿನ ನವಜೀವನ” ಕಾರ್ಯಕ್ರಮವು ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರುವುದರೊಂದಿಗೆ ಪ್ರಕೃತಿಯ ಮೇಲಿನ ಪ್ರೀತಿಯನ್ನು ಎಲ್ಲರ ಹೃದಯದಲ್ಲಿ ಅರಳಿಸಿತು. ಪುಟ್ಟ ಮಕ್ಕಳ ಕೈಯಲ್ಲಿ ಹಸಿರು ಗಿಡಗಳು ನಗುತಿದ್ದ ದೃಶ್ಯಗಳು ಎಲ್ಲರ ಮನವನ್ನು ಭಾವಪರವಶಗೊಳಿಸಿತು.

ಬಕ್ರೀದ್, ದೀಪಾವಳಿ, ಕ್ರಿಸ್ಮಸ್ ಹಾಗೂ ಹೊಸ ವರ್ಷದ ಸಂಭ್ರಮಾಚರಣೆಗಳು ಶಾಲಾ ಆವರಣದಲ್ಲಿ ಸೌಹಾರ್ದತೆ, ಸಹೋದರತ್ವ ಮತ್ತು ಏಕತೆಯ ಸಿಹಿ ಸಂದೇಶವನ್ನು ಸಾರಿದವು. ವಿವಿಧ ಧರ್ಮಗಳ ಹಬ್ಬಗಳನ್ನು ಒಂದೇ ಕುಟುಂಬದಂತೆ ಆಚರಿಸಿದ ವಿದ್ಯಾರ್ಥಿಗಳ ಸಂಭ್ರಮ ಎಲ್ಲರ ಮನಸೆಳೆಯಿತು. ಗಾಂಧಿ ಜಯಂತಿ, ವಿಶ್ವ ಬಾಹ್ಯಾಕಾಶ ದಿನಾಚರಣೆ ಹಾಗೂ ಅಂತರಾಷ್ಟ್ರೀಯ ಯೋಗ ದಿನಾಚರಣೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ಜ್ಞಾನ, ದೇಶಭಕ್ತಿ ಹಾಗೂ ಆರೋಗ್ಯದ ಮಹತ್ವದ ಅರಿವು ಮೂಡಿಸಲಾಯಿತು.
ಶಿಕ್ಷಕ–ಪೋಷಕರ ಸಭೆಗಳು ಹಾಗೂ ಕಿಂಡರ್ ಗಾರ್ಟನ್ ಶಿಕ್ಷಕ–ರಕ್ಷಕರ ಸಭೆಗಳು “ಮಕ್ಕಳ ಭವಿಷ್ಯಕ್ಕಾಗಿ ಒಂದಾದ ಹೃದಯಗಳ ಸಂಗಮ” ಎಂಬಂತೆ ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಯಿತು. ಶಾಲೆ ಮತ್ತು ಪೋಷಕರ ನಡುವಿನ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಿ, ಮಕ್ಕಳ ಭವಿಷ್ಯದ ಕನಸುಗಳಿಗೆ ಬಲವಾದ ಅಡಿಪಾಯ ನಿರ್ಮಾಣವಾಯಿತು.

ಕಿಂಡರ್ ಗಾರ್ಟನ್ ವಿಭಾಗದಲ್ಲಿ ನಡೆದ ಹಳದಿ ದಿನಾಚರಣೆ, ನೀಲಿ ದಿನಾಚರಣೆ, ಕೇಸರಿ ದಿನಾಚರಣೆ, ಹಣ್ಣಿನ ದಿನಾಚರಣೆ, ರೈನಿ ಡೇ ಸಂಭ್ರಮ ಹಾಗೂ ಮುದ್ದು ಕೃಷ್ಣ ಸ್ಪರ್ಧೆಗಳು ಪುಟ್ಟ ಮಕ್ಕಳ ಮುಗ್ಧ ನಗುವಿನಿಂದ ಶಾಲಾ ಆವರಣವನ್ನು ಸ್ವರ್ಗದಂತೆ ಕಂಗೊಳಿಸಿತು. ಮುದ್ದು ಕೃಷ್ಣರು ಮತ್ತು ರಾಧೆಯರಾಗಿ ಮಿಂಚಿದ ಪುಟಾಣಿಗಳು ಎಲ್ಲರ ಹೃದಯ ಗೆದ್ದರು.

ಶಾಲಾ ಚುನಾವಣೆ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ಪಾಠ ಕಲಿಸಿದರೆ, ರಸಪ್ರಶ್ನೆ, ಚಿತ್ರಕಲಾ ಹಾಗೂ ವಿವಿಧ ಸ್ಪರ್ಧೆಗಳು ವಿದ್ಯಾರ್ಥಿಗಳ ಪ್ರತಿಭೆಯ ಹೊಳಪನ್ನು ಜಗತ್ತಿಗೆ ಪರಿಚಯಿಸಿತು. ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಾಚಿ ಸಿಂಗ್ (6ನೇ ತರಗತಿ), ನಿಶಾಂತ್ (8ನೇ ತರಗತಿ) ಹಾಗೂ ತ್ರಿವಾರಿ (10ನೇ ತರಗತಿ) ಮುಂದಿನ ಹಂತಕ್ಕೆ ಆಯ್ಕೆಯಾಗಿರುವುದು ಶಾಲೆಯ ಹೆಮ್ಮೆಯ ಕ್ಷಣವಾಗಿ ಉಳಿಯಿತು.
ಕರಾಟೆ ಕ್ಷೇತ್ರದಲ್ಲಿಯೂ ಶಾಲಾ ವಿದ್ಯಾರ್ಥಿಗಳು ಅಪೂರ್ವ ಸಾಧನೆ ಮಾಡಿ ಶಾಲೆಯ ಕೀರ್ತಿಯನ್ನು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಪಸರಿಸಿದರು. ತಾಲೂಕು ಮಟ್ಟದ ಕರಾಟೆ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಾದ ಪೃಥ್ವಿರಾಜ್ (10ನೇ ತರಗತಿ), ಸಾನಿಯಾ (9ನೇ ತರಗತಿ), ನಿಜಾಫ್ (8ನೇ ತರಗತಿ), ಮಧೀಹಾ ಹೀನಾ (8ನೇ ತರಗತಿ) ಹಾಗೂ ಉಜೈರ್ (8ನೇ ತರಗತಿ) ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದು ಶಾಲೆಗೆ ಅಪಾರ ಹೆಮ್ಮೆ ತಂದಿತು. ಹಾಗೆಯೇ ನಿಶಾಂತ್ (9ನೇ ತರಗತಿ) ದ್ವಿತೀಯ ಸ್ಥಾನ ಹಾಗೂ ದಿಗಂತ್ (9ನೇ ತರಗತಿ) ತೃತೀಯ ಸ್ಥಾನವನ್ನು ಪಡೆದು ತಮ್ಮ ಪ್ರತಿಭೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರಿಸಿದರು.ಇದೇ ಸಂದರ್ಭದಲ್ಲಿ 10ನೇ ತರಗತಿಯ ಮಾಸ್ಟರ್ ಪೃಥ್ವಿರಾಜ್ ಅವರು 74 ಕೆಜಿ ವಿಭಾಗದಲ್ಲಿ ಅದ್ಭುತ ಪ್ರದರ್ಶನ ನೀಡಿ ಚಿನ್ನದ ಪದಕ ಗೆದ್ದು ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ಶಿಪ್ಗೆ ಆಯ್ಕೆಯಾಗಿರುವುದು ಶಾಲೆಯ ಇತಿಹಾಸದಲ್ಲಿ ಸುವರ್ಣ ಕ್ಷಣವಾಗಿ ದಾಖಲಾಗಿತು.

8ನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿ ನೌಮನ್ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿದ್ದು, ತನ್ನ ಸಾಧನೆಯ ಮೂಲಕ ಶಾಲೆಯ ಕೀರ್ತಿಯನ್ನು ರಾಷ್ಟ್ರಮಟ್ಟದಲ್ಲಿ ಮತ್ತಷ್ಟು ಎತ್ತರಕ್ಕೆ ಏರಿಸಿದ್ದಾನೆ. ವಿದ್ಯಾರ್ಥಿಗಳ ಈ ಅದ್ವಿತೀಯ ಸಾಧನೆ ಶಿಕ್ಷಕರು, ಪೋಷಕರು ಹಾಗೂ ಶಾಲಾ ಆಡಳಿತ ಮಂಡಳಿಯ ಮನಗಳಲ್ಲಿ ಸಂತಸದ ಸಂಭ್ರಮ ಸೃಷ್ಟಿಸಿತು.

ವಾರ್ಷಿಕ ಕ್ರೀಡೋತ್ಸವ, ಪೋಷಕರ ಕ್ರೀಡಾ ಉತ್ಸವ, ಶಿಕ್ಷಕರ ಹಾಗೂ ಸಿಬ್ಬಂದಿ ವರ್ಗದವರ ಕ್ರೀಡಾಕೂಟ ಮತ್ತು SPPL 2K26 ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟಗಳು ಕ್ರೀಡಾಸ್ಫೂರ್ತಿ ಹಾಗೂ ಉತ್ಸಾಹದ ಹೊಸ ಚೈತನ್ಯ ಮೂಡಿಸಿತು. ಕ್ರೀಡಾಂಗಣದಲ್ಲಿ ವಿದ್ಯಾರ್ಥಿಗಳ ಹುರುಪು , ಆತ್ಮವಿಶ್ವಾಸ ಮತ್ತು ಸಹ ಅವಲಂಬನೆ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ವಾರ್ಷಿಕೋತ್ಸವ ಹಾಗೂ ವಾರ್ಷಿಕ ಬಹುಮಾನ ವಿತರಣಾ ಕಾರ್ಯಕ್ರಮಗಳು ಪ್ರತಿಭೆಗೆ ಸನ್ಮಾನ ಸಲ್ಲಿಸಿದ ಅದ್ಭುತ ವೇದಿಕೆಯಾಗಿದ್ದು, ಸಾಂಸ್ಕೃತಿಕ ವೈಭವ, ಸಂಗೀತ, ನೃತ್ಯ ಹಾಗೂ ಮನರಂಜನಾ ಕಾರ್ಯಕ್ರಮಗಳು ಸಭಿಕರ ಮನಸೆಳೆಯಿತು. ಪ್ರತಿಯೊಂದು ಪ್ರದರ್ಶನವೂ ವಿದ್ಯಾರ್ಥಿಗಳ ಪರಿಶ್ರಮ ಮತ್ತು ಶಿಕ್ಷಕರ ಸಮರ್ಪಣೆಯ ಪ್ರತಿಬಿಂಬವಾಗಿತ್ತು.

ಕಿಂಡರ್ ಗಾರ್ಟನ್ ವಿದ್ಯಾರ್ಥಿಗಳ ಪೊಲೀಸ್ ಠಾಣೆ ಭೇಟಿ ಕಾರ್ಯಕ್ರಮ ಹಾಗೂ ಪ್ರಾಣಿಗಳ ದಿನಾಚರಣೆಗಳು ಮಕ್ಕಳಲ್ಲಿ ಸಾಮಾಜಿಕ ಜವಾಬ್ದಾರಿ, ಪ್ರೀತಿ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಿದವು. ಶಾಲೆಯಲ್ಲಿ ನಡೆದ ಪ್ರತಿಯೊಂದು ಕಾರ್ಯಕ್ರಮವೂ ವಿದ್ಯಾರ್ಥಿಗಳ ಜೀವನದಲ್ಲಿ ಹೊಸ ಕನಸು, ಹೊಸ ಆತ್ಮವಿಶ್ವಾಸ ಮತ್ತು ಹೊಸ ಸ್ಪೂರ್ತಿಯನ್ನು ತುಂಬಿತು.
ವರ್ಷಪೂರ್ತಿ ನಡೆದ ಈ ಸುವರ್ಣ ಕ್ಷಣಗಳು ಶಾಲೆಯ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ವೈಭವಕ್ಕೆ ಮತ್ತಷ್ಟು ಮೆರುಗು ನೀಡಿದ್ದು, ವಿದ್ಯಾರ್ಥಿಗಳ ಜೀವನದಲ್ಲಿ ಮರೆಯಲಾಗದ ನೆನಪುಗಳಾಗಿ ಶಾಶ್ವತವಾಗಿ ಉಳಿದಿವೆ.
“ಪ್ರತಿಭೆಗೆ ಪ್ರೋತ್ಸಾಹ, ಸಂಸ್ಕಾರಕ್ಕೆ ಮಹತ್ವ ಮತ್ತು ಸಾಧನೆಗೆ ಸ್ಪೂರ್ತಿ ನೀಡುವ ಶಿಕ್ಷಣ ಮಂದಿರವೇ ಶ್ರೀ ಶಾರದಾ ಶಾಲೆ” ಎಂಬುದನ್ನು ಶಾಲೆಯ ಪ್ರತಿಯೊಂದು ಕಾರ್ಯಕ್ರಮವೂ ಹೆಮ್ಮೆಯಿಂದ ಸಾರಿತು.
ಜ್ಞಾನದಿಂದ ಭವಿಷ್ಯ ನಿರ್ಮಿಸುತ್ತಿರುವ ಶಾರದಾ ವಿದ್ಯಾಸಂಸ್ಥೆ.ಬಾಲ್ಯದ ಕನಸುಗಳಿಗೆ ಬಣ್ಣ ತುಂಬಿ…ಭವಿಷ್ಯದ ಗುರಿಗಳಿಗೆ ಬಲ ತುಂಬಿ…ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ಹೊಸ ಬೆಳಕಾಗಿರುವಶ್ರೀ ಶಾರದಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ, ಬಸ್ರೂರು ಪ್ರಸ್ತುತ ಸಾಲಿನಲ್ಲಿಯೂ ಶಿಕ್ಷಣ ಕ್ಷೇತ್ರದಲ್ಲಿತನ್ನದೇಆದ ಹೆಮ್ಮೆಯ
ಸಾಧನೆಯೊಂದಿಗೆ ಕಂಗೊಳಿಸುತ್ತಿದೆ. “ಪ್ರತಿ ಮಗು ಅಮೂಲ್ಯ ಪ್ರತಿಭೆ” ಎಂಬ ಮಹತ್ತರ ಧ್ಯೇಯದೊಂದಿಗೆ ಅನುಭವ ಸಂಪನ್ನ ಹಾಗೂ ನುರಿತ ಶಿಕ್ಷಕರ ಬಳಗ ಪ್ರತಿಯೊಬ್ಬ ವಿದ್ಯಾರ್ಥಿಗೂ ವೈಯಕ್ತಿಕ ಗಮನ ನೀಡಿಅವರ ಕನಸುಗಳಿಗೆ ಆತ್ಮವಿಶ್ವಾಸದ ರೆಕ್ಕೆಗಳನ್ನುನೀಡುತ್ತಿದೆ.

ಅತ್ಯಾಧುನಿಕ ಕಂಪ್ಯೂಟರ್ ಶಿಕ್ಷಣ,
AI ಆಧಾರಿತ ಕಲಿಕಾ ವಿಧಾನ,
ವಿಜ್ಞಾನ ಲೋಕವನ್ನು ಪರಿಚಯಿಸುವ ಆಧುನಿಕ ಪ್ರಯೋಗಾಲಯಗಳು,
ಜ್ಞಾನವನ್ನು ವಿಸ್ತರಿಸುವ ಸಮೃದ್ಧ ಗ್ರಂಥಾಲಯವಿದ್ಯಾರ್ಥಿಗಳಲ್ಲಿ ಹೊಸ ಚಿಂತನೆ ಮತ್ತು ಸೃಜನಶೀಲತೆಯನ್ನು ಬೆಳೆಸುತ್ತಿದೆ.
ಕಿಂಡರ್ ಗಾರ್ಟನ್ ಪುಟಾಣಿಗಳಿಗಾಗಿ ಬಣ್ಣಬಣ್ಣದ ಆಕರ್ಷಣೀಯ ತರಗತಿಗಳು,ಚಟುವಟಿಕೆ ಆಧಾರಿತ ಕಲಿಕಾ ವಿಧಾನ,ಆಕರ್ಷಣೀಯ ಒಳಾಂಗಣ ಹಾಗೂ ಹೊರಾಂಗಣ ಕ್ರೀಡಾ ವ್ಯವಸ್ಥೆಗಳುಮಕ್ಕಳ ಕಲಿಕೆಗೆ ಉಲ್ಲಾಸವನ್ನು ನೀಡಿದೆ.ವಿಶಾಲವಾದ ಆಟದ ಮೈದಾನ,ಶಾಂತಿಯುತ ಹಾಗೂ ಸುಂದರ ಕ್ಯಾಂಪಸ್,ಸ್ವಚ್ಛ ಹಾಗೂ ಆರೋಗ್ಯಕರ ವಾತಾವರಣ ಶಾಲೆಯ ವಿಶೇಷ ಆಕರ್ಷಣೆಯಾಗಿದೆ.

ವಿದ್ಯಾರ್ಥಿಗಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿ24/7 ಸಿಸಿಟಿವಿ ಕಣ್ಗಾವಲು ಹಾಗೂ ಸುರಕ್ಷಿತ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದ್ದು, ಇವೆಲ್ಲ ಪೋಷಕರ ವಿಶ್ವಾಸವನ್ನು ಮತ್ತಷ್ಟು ಗಟ್ಟಿಗೊಳಿಸಿದೆ.ನಿಯಮಿತ ಪರೀಕ್ಷೆಗಳು,ಪ್ರಗತಿಪರಿಶೀಲನೆ,ವಿಶೇಷ ಪುನರವಲೋಕನತರಗತಿಗಳು,
ಆತ್ಮವಿಶ್ವಾಸ ಹಾಗೂ ವ್ಯಕ್ತಿತ್ವ ವಿಕಸನ ತರಬೇತಿಗಳುವಿದ್ಯಾರ್ಥಿಗಳ ಯಶಸ್ಸಿನ ಭದ್ರ ಅಡಿಪಾಯವಾಗಿವೆ.
ಪಠ್ಯ ಶಿಕ್ಷಣದ ಜೊತೆಗೆ ಸಂಗೀತ, ಯಕ್ಷಗಾನ, ಕರಾಟೆ, ನೃತ್ಯ, ಅಬಾಕಾಸ್, ಶ್ಲೋಕ, ಭಜನೆ ಹಾಗೂ ಭಗವದ್ಗೀತೆ ತರಬೇತಿಗಳ ಮೂಲಕ
ವಿದ್ಯಾರ್ಥಿಗಳ ಅಡಗಿರುವ ಪ್ರತಿಭೆಗಳಿಗೆ ಹೊಸ ದಿಕ್ಕು ನೀಡಲಾಗುತ್ತಿದೆ.
“ಇಲ್ಲಿ ಕೇವಲ ಅಕ್ಷರ ಜ್ಞಾನವಲ್ಲ…
ಜೀವನವನ್ನು ಗೆಲ್ಲುವ ನಿರೂಪಿಸಿಕೊಳ್ಳುವ ಜ್ಞಾನವನ್ನು ತುಂಬಿಸುತ್ತದೆ.
“ ಇದು ಕೇವಲ ಶಾಲೆಯಲ್ಲ…
ಪ್ರತಿ ಮಗುವಿನ ಭವಿಷ್ಯವನ್ನು ರೂಪಿಸುವ ಜ್ಞಾನ ಮಂದಿರ
ಕಳೆದ ಮೂರು ವರುಷದಿಂದ ಸತತವಾಗಿ 100% ಫಲಿತಾಂಶ, ಸಂಸ್ಥೆಯ ನೂತನ ಆಡಳಿತ ಮಂಡಳಿಯ ಮಹತ್ತರ ಸಾಧನೆಯಾಗಿದೆ. ಕಲಿಕೆಯಲ್ಲಿ ಹಿಂದುಳಿದ ಎಲ್ಲಾ ಮಕ್ಕಳನ್ನು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣಗೊಳಿಸುತ್ತಿರುವುದು ಕೂಡ ವಿಶೇಷವಾಗಿದೆ. ಅದರಂತೆ ಈ ವರುಷ ಶಿಕ್ಷಣ ಕ್ಷೇತ್ರದಲ್ಲಿ ದಾಖಲೆಯನ್ನು ನಿರ್ಮಿಸಲು ಈಗಾಗಲೇ ಅವಿರತ ಶ್ರಮವನ್ನು ಶಿಕ್ಷಕ ಸಿಬ್ಬಂದಿಗಳು ಹಾಕುತ್ತಿರುವುದು ಸಂಸ್ಥೆಯ ಮೇಲಿನ ಪೋಷಕರ ನಂಬಿಕೆಗೆ ಸಾಕ್ಷಿಯಾಗಿದೆ. ಈ ವರ್ಷ ಕನಿಷ್ಠ 15 ವಿದ್ಯಾರ್ಥಿಗಳನ್ನು 600 ಅಂಕಗಳ ಗಳಿಕೆಗೆ ಪಣತೊಡಲಾಗಿದೆ. ಸುಮಾರು 30 ವಿದ್ಯಾರ್ಥಿಗಳಲ್ಲಿ 25 ವಿದ್ಯಾರ್ಥಿಗಳನ್ನು ಉನ್ನತ ಶ್ರೇಣಿಯಲ್ಲಿ ಅಂಕವನ್ನು ಗಳಿಸುವತ್ತ ದಾಪುಗಾಲು ಹಾಕುತ್ತಿರುವುದು ಸಂಸ್ಥೆಯ ವೈಶಿಷ್ಟ್ಯತೆ ಕೈಗನ್ನಡಿಯಾಗಿದೆ.

ಪೋಷಕರ ನಂಬಿಕೆ,ಶಿಕ್ಷಕರ ಸಮರ್ಪಣೆ,ವಿದ್ಯಾರ್ಥಿಗಳ ಸಾಧನೆಇವೆಲ್ಲವೂ ಒಂದಾಗಿ ಶ್ರೀ ಶಾರದಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ, ಬಸ್ರೂರು ಇಂದು ಶಿಕ್ಷಣ ಕ್ಷೇತ್ರದಲ್ಲಿ ಆಕಾಶದಲ್ಲಿ ಕಂಗೊಳಿಸುವ ನಕ್ಷತ್ರದಂತೆ ಹೊಳೆಯುತ್ತಿದೆ
“ಪ್ರತಿ ಮನೆಯ ಹೆಮ್ಮೆ,ಪ್ರತಿ ಮಗುವಿನ ಭವಿಷ್ಯದ ಬೆಳಕು ಶಾರದಾ ವಿದ್ಯಾಸಂಸ್ಥೆ”
ಬಸ್ರೂರಿನ ಶ್ರೀ ಶಾರದಾ ಆಂಗ್ಲ ಮಾಧ್ಯಮ ಹಾಗೂ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಅಭಿವೃದ್ಧಿಯಲ್ಲಿ ಶಾಲಾ ಸಂಚಾಲಕರಾದ ಶ್ರೀ ಸಂತೋಷ್ ಶೆಟ್ಟಿ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ದೂರದೃಷ್ಟಿಯ ಆಡಳಿತ, ಶಿಸ್ತುಬದ್ಧ ಕಾರ್ಯವೈಖರಿ ಹಾಗೂ ವಿದ್ಯಾರ್ಥಿಗಳ ಉಜ್ವಲ ಭವಿಷ್ಯದ ಮೇಲಿನ ಕಾಳಜಿಯಿಂದ ಅವರು ಶಾಲೆಯನ್ನು ಶಿಕ್ಷಣ ಕ್ಷೇತ್ರದಲ್ಲಿ ಮಾದರಿ ಸಂಸ್ಥೆಯಾಗಿ ರೂಪಿಸುತ್ತಿದ್ದಾರೆ.

ಪೋಷಕರೊಂದಿಗೆ ಆತ್ಮೀಯ ಬಾಂಧವ್ಯ ಬೆಳೆಸಿಕೊಂಡಿರುವ ಅವರು ಶಿಕ್ಷಕರಿಗೆ ಸದಾ ಪ್ರೋತ್ಸಾಹ ಮತ್ತು ಬೆಂಬಲ ನೀಡುತ್ತಾ ಶಾಲೆಯಲ್ಲಿ ಸಕಾರಾತ್ಮಕ ವಾತಾವರಣ ನಿರ್ಮಾಣಕ್ಕೆ ಕಾರಣರಾಗಿದ್ದಾರೆ. ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಶ್ರೀ ಸಂತೋಷ್ ಶೆಟ್ಟಿ ಅವರ ಶಿಕ್ಷಣ ಸೇವೆ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.“ಶಾಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಾ, ಪ್ರತಿ ಮಗುವಿನ ಪ್ರತಿಭೆ ಅರಳಬೇಕು ಎಂಬ ಮಹತ್ತರ ಕನಸಿನೊಂದಿಗೆ ಶಿಕ್ಷಣ, ಸಂಸ್ಕಾರ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಸಮಾನ ಆದ್ಯತೆ ನೀಡುತ್ತಿರುವ ಸಂಚಾಲಕರಾದ ಶ್ರೀ ಸಂತೋಷ್ ಶೆಟ್ಟಿ ಅವರು ಸಂಸ್ಥೆಯ ನಿಜವಾದ ಬೆನ್ನೆಲುಬಾಗಿ ಗುರುತಿಸಿಕೊಂಡಿದ್ದಾರೆ.”

ಸಂಚಾಲಕರಾದ ಶ್ರೀ ಸಂತೋಷ್ ಶೆಟ್ಟಿ
“ಶೈಕ್ಷಣಿಕ ಕ್ಷೇತ್ರದಲ್ಲಿ ಅಪಾರ ಅನುಭವ ಹಾಗೂ ಆಡಳಿತಾತ್ಮಕ ಕಾರ್ಯಗಳಲ್ಲಿ ವಿಶಿಷ್ಟ ಪರಿಣತಿಯನ್ನು ಹೊಂದಿರುವ ಪ್ರಾಂಶುಪಾಲರಾದ ಶ್ರೀಮತಿ ಸುಪ್ರೀತಾ ಪೂಜಾರಿ ಅವರ ಆಗಮನದಿಂದ ಶಾಲೆಯ ಪ್ರತಿಯೊಬ್ಬರ ಹೃದಯದಲ್ಲೂ ಹೊಸ ಚೈತನ್ಯ, ಹೊಸ ಭರವಸೆ ಹಾಗೂ ಸಾವಿರ ಕನಸುಗಳ ಹೊಳಪು ಮೂಡಿದಂತಾಯಿತು.”
ಪ್ರಾಂಶುಪಾಲರಾದ ಶ್ರೀಮತಿ ಸುಪ್ರೀತಾ ಪೂಜಾರಿ
“‘ಪ್ರೀತಿಯಿಂದ ಮಾರ್ಗದರ್ಶನ… ಶಿಸ್ತಿನಿಂದ ಬೆಳವಣಿಗೆ… ಯಶಸ್ಸಿನತ್ತ ಮಕ್ಕಳ ಪಯಣ’ ಎಂಬ ಮಹತ್ತರ ಕನಸನ್ನು ಹೃದಯದಲ್ಲಿ ಹೊತ್ತು, ಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಗಾಗಿ ಶ್ರಮಿಸುತ್ತಿರುವ ಪ್ರಾಂಶುಪಾಲರಾದ ಶ್ರೀಮತಿ ಸುಪ್ರೀತಾ ಪೂಜಾರಿ ಅವರ ಆತ್ಮೀಯ ನಾಯಕತ್ವ, ಮಮತೆಯ ಮಾತುಗಳು ಹಾಗೂ ದೂರದೃಷ್ಟಿಯ ಚಿಂತನೆಗಳು ಈ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳ ಉಜ್ವಲ ಭವಿಷ್ಯವನ್ನು ರೂಪಿಸುವ ವಿಶ್ವಾಸವನ್ನು ಮೂಡಿಸಿದವು.”







