ಬ್ರಹ್ಮಾವರ:ಸಾಲದ ಒತ್ತಡದಿಂದ ಮನನೊಂದು ಲಾಡ್ಜ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆ
Views: 153
ಕನ್ನಡ ಕರಾವಳಿ ಸುದ್ದಿ: ಸಾಲದ ಒತ್ತಡದಿಂದ ಮನನೊಂದು ವ್ಯಕ್ತಿಯೊಬ್ಬರು ಲಾಡ್ಜ್‌ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬ್ರಹ್ಮಾವರದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ನರಸಿಂಹ ಹೆಚ್.ಎಸ್ (66)
ಅವರು ಬೆಂಗಳೂರಿನ ನೆಲಮಂಗಲದಲ್ಲಿ “ಶ್ರೀಕೃಷ್ಣ ಎಂಟರ್‌ಪ್ರೈಸಸ್” ಎಂಬ ಲೇಬರ್ ಕಾಂಟ್ರಾಕ್ಟ್ ಸಂಸ್ಥೆಯನ್ನು ಸುಮಾರು 20 ವರ್ಷಗಳಿಂದ ನಡೆಸುತ್ತಿದ್ದರು. ಅವರು ಬಾಡಿಗೆ ಮನೆಯಲ್ಲಿ ವಾಸವಿದ್ದು, ತಿಂಗಳಿಗೊಮ್ಮೆ ಊರಿಗೆ ಬರುತ್ತಿದ್ದರು.
ವ್ಯವಹಾರದಲ್ಲಿ ಆರ್ಥಿಕ ತೊಂದರೆ ಎದುರಾದ ಹಿನ್ನೆಲೆಯಲ್ಲಿ ಕುಮಾರ್ ಕೆ.ಜೆ, ನರಸಿಂಹಣ್ಣ, ಹೊಸಕೋಟೆಯ ರಾಜಣ್ಣ, ಸೋಮಣ್ಣ ಹಾಗೂ ಕಿಶೋರ್ ಇವರಿಂದ ಬಡ್ಡಿಗೆ ಹಣ ಪಡೆದು ವ್ಯವಹಾರ ನಡೆಸುತ್ತಿದ್ದರು. ಆದರೆ ಕಳೆದ ಎರಡು ತಿಂಗಳಿಂದ ಬಡ್ಡಿ ಹಣವನ್ನು ಸಮಯಕ್ಕೆ ಪಾವತಿಸಲು ಸಾಧ್ಯವಾಗದೆ, ಸಾಲದಾತರ ಒತ್ತಡದಿಂದ ಮನಸ್ಸಿಗೆ ಬೇಸರಗೊಂಡಿದ್ದರು ಎನ್ನಲಾಗಿದೆ.
ಈ ಹಿನ್ನೆಲೆ, ಅವರು ಎ.12 ರಂದು ಬ್ರಹ್ಮಾವರದ ಲಾಡ್ಜ್‌ನಲ್ಲಿ ಕೊಠಡಿ ಪಡೆದು ತಂಗಿದ್ದರು.ಎ.13 ರಾತ್ರಿ ಕೊಠಡಿಯ ಸೀಲಿಂಗ್ ಫ್ಯಾನಿಗೆ ನೈಲಾನ್ ಹಗ್ಗ ಕಟ್ಟಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಪತ್ತೆಯಾಗಿದೆ.
ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.






