ಶಿಕ್ಷಣ

PUC ಪಾಸಾಗಲು ಇನ್ಮುಂದೆ ಎರಡೇ ವರ್ಷ ಮಾತ್ರ ಪರೀಕ್ಷೆ ಬರೆಯಲು ಅವಕಾಶ…ಶಿಕ್ಷಣ ಇಲಾಖೆ ಆದೇಶ 

Views: 52

ಕನ್ನಡ ಕರಾವಳಿ ಸುದ್ದಿ: ಶಿಕ್ಷಣ ಇಲಾಖೆ ಮಹತ್ವದ ಆದೇಶವನ್ನು ಹೊರಡಿಸಿದ್ದು, ದ್ವಿತೀಯ ಪಿಯುಸಿಯಲ್ಲಿ ಅನುತ್ತೀರ್ಣರಾದ ಅಥವಾ ಫಲಿತಾಂಶ ಸುಧಾರಣೆ ಬಯಸುವ ಅಭ್ಯರ್ಥಿಗಳಿಗೆ ಇನ್ನು ಮುಂದೆ ಎರಡು ವರ್ಷ ಮಾತ್ರ ಪರೀಕ್ಷೆ ಬರೆಯಲು ಅವಕಾಶ ಸಿಗಲಿದೆ.

ಪರೀಕ್ಷೆಗೆ ನೋಂದಾಯಿಸಿಕೊಂಡ ವರ್ಷ ಮತ್ತು ಅದರ ಮುಂದಿನ ಶೈಕ್ಷಣಿಕ ವರ್ಷದಲ್ಲಿ ನಡೆಯುವ ಪರೀಕ್ಷೆಗಳಲ್ಲಿ ಮಾತ್ರ ಅವಕಾಶ ಇರುತ್ತದೆ. ಎರಡು ವರ್ಷಗಳ ಕಾಲಾವಧಿ ಮೀರಿದ ಬಳಿಕ ಹೆಚ್ಚುವರಿ ಅವಕಾಶ ಇರುವುದಿಲ್ಲ ಎಂದು ಶಿಕ್ಷಣ ಇಲಾಖೆ ಸ್ಪಷ್ಟನೆ ನೀಡಿದೆ.

2024ರ ದ್ವಿತೀಯ ಪಿಯು ಪರೀಕ್ಷೆ 1, 2 ಮತ್ತು 3ಕ್ಕೆ ನೋಂದಾಯಿಸಿಕೊಂಡ ರೆಗ್ಯುಲರ್‌ (ಖಾಯಂ), ಖಾಸಗಿ ಹಾಗೂ ಪುನರಾವರ್ತಿತ ವಿದ್ಯಾರ್ಥಿಗಳಿಗೆ ಮುಂದಿನ ವರ್ಷಗಳಿಗೂ ಫಲಿತಾಂಶ ಸುಧಾರಣೆಗೆ ಅವಕಾಶ ನೀಡಲಾಗಿತ್ತು. ಆದರೆ, ವಿದ್ಯಾರ್ಥಿಗಳು ತಮ್ಮ ಫಲಿತಾಂಶ ಸುಧಾರಿಸಿಕೊಳ್ಳಲು ಎಷ್ಟು ಬಾರಿ ಪರೀಕ್ಷೆ ಬರೆಯಬಹುದು ಮತ್ತು ಕಾಲಮಿತಿ ಎಷ್ಟು ಎಂಬ ಬಗ್ಗೆ ನಿಯಮಗಳು ಇರಲಿಲ್ಲ. ಆದರೆ ಇದೀಗ ನೋಂದಣಿ ಮಾಡಿಸಿಕೊಂಡ ವರ್ಷ ಮತ್ತು ಅದರ ಮರುವರ್ಷದೊಳಗೆ ಆರೂ ಪರೀಕ್ಷೆ ಬರೆಯಬೇಕು. ಆ ನಂತರ ಅವಕಾಶ ಇರುವುದಿಲ್ಲ.

ಈ ಮೊದಲು 20-30 ವರ್ಷ ವಯಸ್ಸಾದಧಿರೂ ಅಭ್ಯರ್ಥಿಗಳು ಫಲಿತಾಂಶ ಸುಧಾರಣೆಗೆ ಪರೀಕ್ಷೆ ಬರೆಯುತ್ತಿದ್ದರು. ಈಗ ಪಠ್ಯಕ್ರಮ ಬದಲಾವಣೆ ಸೇರಿ ಹಲವು ಕಾರಣಗಳಿಂದ ಸರಕಾರ ಎರಡು ವರ್ಷಕ್ಕೆ ಮಾತ್ರ ಅವಕಾಶ ನೀಡಿ ಆದೇಶ ಹೊರಡಿಸಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಅಧ್ಯಕ್ಷರು ತಿಳಿಸಿದ್ದಾರೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಪ್ರತಿ ವರ್ಷ ಪರೀಕ್ಷೆಗೆ ನೋಂದಣಿ ಪ್ರಕ್ರಿಯೆ ನಡೆಸುವಾಗ, ಹಿಂದಿನ ವರ್ಷಗಳಲ್ಲಿ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳ ಹಾಗೂ ಎಲ್ಲಾವಿಷಯಗಳ ವರದಿಯನ್ನು ಕಾಲೇಜು ಲಾಗಿನ್‌ನಲ್ಲಿ ಕಡ್ಡಾಯವಾಗಿ ನಮೂದಿಸಬೇಕಾಗುತ್ತಿತ್ತು. ಅತಿ ಹೆಚ್ಚು ಅಭ್ಯರ್ಥಿಗಳ ಮಾಹಿತಿಗಳನ್ನು ನಿರ್ವಹಣೆ ಮಾಡುವ ವೇಳೆ ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿದ್ದವು.

ಅನುತ್ತೀರ್ಣರಾದವರು ಫಲಿತಾಂಶ ಸುಧಾರಣೆ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ, ಮತ್ತೆ ಹೊಸ ಅಂಕಪಟ್ಟಿ ಮುದ್ರಿಸಿ, ಹಳೆ ಅಂಕಪಟ್ಟಿಯನ್ನು ವಾಪಸ್‌ ಪಡೆಯಬೇಕಿತ್ತು. ಈ ಎಲ್ಲಾ ಕಾರಣಗಳಿಂದ ಕೇವಲ ಎರಡು ವರ್ಷಗಳ ಮಿತಿ ಹೇರುವಂತೆ ಮಂಡಳಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಇದರಿಂದಾಗಿ ಈ ವರ್ಷದಿಂದ ಹೊಸ ನಿಯಮವನ್ನು ಜಾರಿಗೊಳಿಸಲಾಗಿದೆ.

Related Articles

Back to top button
error: Content is protected !!