ಇತರೆ
ಕುಂದಾಪುರ: ಬ್ಯಾಂಕಿಗೆಂದು ಹೋದ ವಡೇರಹೋಬಳಿಯ ವ್ಯಕ್ತಿ ನಾಪತ್ತೆ
Views: 102
ಕನ್ನಡ ಕರಾವಳಿ ಸುದ್ದಿ: ಕುಂದಾಪುರ ವಡೇರಹೋಬಳಿಯ ರಾಯಪ್ಪನಮಠ ಎಂಬಲ್ಲಿ ಬಾಡಿಗೆ ಮನೆಯಲ್ಲಿದ್ದ ಶರತ್ ಕುಮಾರ್‌ಶೆಟ್ಟಿ (51) ಅವರು ಮಾ.4ರ ಬೆಳಗ್ಗೆ ಬ್ಯಾಂಕಿಗೆ ಹೋಗಲೆಂದು ಮನೆಯಿಂದ ಹೊರಟು ಬಂದವರು ನಾಪತ್ತೆಯಾಗಿದ್ದಾರೆ.
ಮೊಬೈಲನ್ನು ಮನೆಯಲ್ಲಿಯೇ ಬಿಟ್ಟು ಹೋಗಿದ್ದಾರೆ.ಎತ್ತರ 5 ಅಡಿ 6 ಇಂಚು , ಬೆನ್ನಿನ ಹಿಂಭಾಗ ಜಡ್ಡು [ತಿಳಿ ಕೆಂಪು] ಇರುತ್ತದೆ. ಗೋಧಿ ಮೈ ಬಣ್ಣ, ಬಟ್ಟೆ: ಬಿಳಿ ಬಣ್ಣದ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್, ಕನ್ನಡಕ, ಚಪ್ಪಲಿ ಧರಿಸಿರುತ್ತಾರೆ. ಸಾಧಾರಣ ಶರೀರ,ಬಾಷೆ: ಕನ್ನಡ, ತುಳು, ಹಿಂದಿ ಬಾಷೆ ಮಾತನಾಡುತ್ತಾರೆ.
ಪತ್ನಿ ಜಾನಕಿ ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






