ತೈಲ ಟ್ಯಾಂಕರ್ ಮೇಲೆ ಇರಾನ್ ದಾಳಿ ಭಾರತೀಯ ಮೂಲದ ಇಬ್ಬರು ಸಾವು
Views: 54
ಕನ್ನಡ ಕರಾವಳಿ ಸುದ್ದಿ: ತೈಲ ಟ್ಯಾಂಕರ್ ಇರಾನ್ ದಾಳಿ ನಡೆಸಿದ ಪರಿಣಾಮ ಭಾರತೀಯ ಮೂಲದ ಇಬ್ಬರು ಸಾವನ್ನಪ್ಪಿದ ಮಾಹಿತಿ ತಿಳಿದು ಬಂದಿದೆ.
ಮೃತ ಭಾರತೀಯರನ್ನು ಬಿಹಾರದ ಕ್ಯಾಪ್ಟನ್ ಅಶೀಶ್ ಕುಮಾರ್ ಮತ್ತು ರಾಜಸ್ಥಾನದ ದಿಲೀಪ್ ಸಿಂಗ್ ಎಂದು ಗುರುತಿಸಲಾಗಿದೆ. ಈ ಟ್ಯಾಂಕರ್ ಫೆಬ್ರುವರಿ 22 ರಂದು ಹಾರ್ಮುಜ್ ಜಲಸಂಧಿ ಹತ್ತಿರ ತಲುಪಿದ್ದು, ಇರಾನ್ ಜಲಸಂಧಿಯನ್ನು ಬಂದ್ ಮಾಡಿದ ನಂತರ ಅಲ್ಲಿಯೇ ನಿಂತಿದೆ.
ರಿಪಬ್ಲಿಕ್ ಆಫ್ ಪಲಾವ್ ನ ಬಾವುಟ ಹಾರಿಸಿಕೊಂಡು ನಿಂತಿದ್ದ ಟ್ಯಾಂಕರ್ ಮೇಲೆ ಇರಾನಿನ ಮಿಸೈಲ್ ಬಡಿದ ಪರಿಣಾಮ ಈ ಸಾವು-ನೋವು ಸಂಭವಿಸಿದೆ ಎಂದು ತಿಳಿದು ಬಂದಿದೆ. ಈ ಟ್ಯಾಂಕರ್‌ನಲ್ಲಿದ್ದ 20 ಜನರಲ್ಲಿ 15 ಜನ ಭಾರತೀಯ ಮೂಲದವರಾಗಿದ್ದು, 5 ಜನ ಇರಾನಿನ ಪ್ರಜೆಗಳೆಂದು ತಿಳಿದು ಬಂದಿದೆ. ಇರಾನಿನ ಈ ದಾಳಿ ಮಾರ್ಚ್. 1 ರಂದು ನಡೆದಿದೆ ಎಂದು ಓಮನ್ ಕಡಲ ಭದ್ರತಾ ಕೇಂದ್ರ ಮಾಹಿತಿ ಹಂಚಿಕೊಂಡಿತ್ತು.
ಇರಾನ್ ಮತ್ತು ಅಮೆರಿಕ, ಇಸ್ರೇಲ್ ನಡುವಿನ ಈ ಸಂಘರ್ಷವು ಐದನೇ ದಿನ ತಲುಪಿದ್ದು, ಇರಾನ್ ಹಾರ್ಮುಜ್ ಜಲಸಂಧಿಯನ್ನು ಬಂದ್ ಮಾಡಿ ಜಾಗತಿಕ ತೈಲ ಮಾರುಕಟ್ಟೆಯನ್ನು ಬುಡಮೇಲು ಮಾಡುವ ಯೋಜನೆ ರೂಪಿಸಿ ಕುಳಿತಿದೆ. ತನ್ನ ಮಿತ್ರ ದೇಶ ಚೀನಾದ ಹಡಗುಗಳನ್ನು ಹೊರತು ಪಡಿಸಿ ಬೇರೇ ಯಾವುದೇ ದೇಶದ ಸಾಗಣಾ ವಾಹನಗಳು ಹಾರ್ಮುಜ್ ಜಲಸಂಧಿಯನ್ನು ದಾಟದಂತೆ ಇರಾನ್ ತಾಕೀತು ಮಾಡಿದ್ದು, ಇದನ್ನು ಉಲ್ಲಂಘಿಸುವ ದೇಶದ ವಾಹಕಗಳನ್ನು ಹೊಡೆದುರಳಿಸುವುದಾಗಿ ಇರಾನ್ ಎಚ್ಚರಿಕೆ ನೀಡಿದೆ.






