ಕುಂದಾಪುರ: ಸಿದ್ದಾಪುರದಲ್ಲಿ ಅಡಿಕೆ ವ್ಯಾಪಾರಿ ನೇಣು ಬಿಗಿದುಕೊಂಡು ಆತ್ಮಹತ್ಯೆ
Views: 288
ಕನ್ನಡ ಕರಾವಳಿ ಸುದ್ದಿ: ಸಿದ್ದಾಪುರ ಗ್ರಾಮದ ಐರಬೈಲು ನಿವಾಸಿ, ಅಡಿಕೆ ವ್ಯಾಪಾರಿ ಗಣೇಶ ನಾಯಕ್ (62) ಅವರು ಖಿನ್ನತೆಗೆ ಒಳಗಾಗಿ ಫೆ. 25ರಂದು ಮನೆಯ ಹಿಂಭಾಗದ ಶೆಡ್ ನಲ್ಲಿ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗಣೇಶ ನಾಯಕ್ ಅವರು ಐರಬೈಲಿನಲ್ಲಿ ಅಡಿಕೆ ವ್ಯಾಪಾರ ಮಾಡಿಕೊಂಡಿದ್ದರು. ಫೆ. 25ರಂದು ಬ್ರಹ್ಮಾವರದಲ್ಲಿ ನಡೆದ ಮದುವೆ ಸಮಾರಂಭವನ್ನು ಮುಗಿಸಿಕೊಂಡು ಪತ್ನಿ ಜತೆಯಲ್ಲಿ ಮನೆಗೆ ವಾಪಾಸು ಬಂದಿದ್ದರು ನಂತರ ಅವರು ಕಾಣೆಯಾಗಿದ್ದನ್ನು ಗಮನಿಸಿದ ಪತ್ನಿ ಸವಿತಾ ನಾಯಕ್ ಅವರು ಸಾಕಷ್ಟು ಹುಡುಕಾಡಿದಾಗ ಮನೆಯ ಹಿಂಬದಿ ಜೀಪ್ ನಿಲ್ಲಿಸಲು ಮಾಡಿದ ಸಿಮೆಂಟ್ ತಗಡಿನ ಶೇಡ್ ನ ಬಳಿ ಹೋದಾಗ ಅಲ್ಲಿ ಸಿಮೆಂಟ್ ತಗಡಿನ ಶೇಡ್ ನ ಮಾಡಿಗೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ನೇತಾಡುತ್ತಿರುವವರನ್ನು ಕಂಡ ಸವಿತಾ ನಾಯಕ್ ರವರು ಬೊಬ್ಬೆ ಹಾಕಿಕೊಂಡಾಗ ಸ್ಥಳಕ್ಕೆ ಹೋಗಿ ನೋಡಿದ್ದು, ಗಣೇಶ ನಾಯಕ್ ರವರು ಜೀಪ್ ನಿಲ್ಲಿಸಲು ಮಾಡಿದ ಸಿಮೆಂಟ್ ಶೆಡ್ ತಗಡಿನ ಮಾಡಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.
ಅವರ ಪುತ್ರ ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






