ಇತರೆ

ಆಸ್ತಿಗಾಗಿ ಕೊಲೆ: ಹೆಂಡತಿ ಮಗ ಸೇರಿ ನಾಲ್ವರು ಅರೆಸ್ಟ್

Views: 27

ಕನ್ನಡ ಕರಾವಳಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲೆಯ ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆ ಪ್ರಕರಣವನ್ನು ಬೇದಿಸಿರುವ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

ಫೆ 20 ರಂದು ಚಂದ್ರಶೇಖರ ಬಸಪ್ಪ ಹನಮನಾಳ ಇವರ ಮೃತ ದೇಹ ಕೊಲೆಯಾದ ಸ್ಥಿಯಲ್ಲಿ ಪತ್ತೆಯಾಗಿತ್ತು.

ಕೊಲೆಯಾದ ವ್ಯಕ್ತಿಗೆ ಯಾವುದೋ ಆಯುಧದಿಂದ ಹೊಡೆದು ಕೊಲೆ ಮಾಡಿದ್ದು ಅಥವಾ ಎಲ್ಲಿಯೋ ಕೊಲೆ ಮಾಡಿ ಸಾಕ್ಷಿ ನಾಶ ಮಾಡುವ ಉದ್ದೇಶದಿಂದ ಕಿತ್ತೂರ ತಾಲೂಕಿನ ಹಿರೇನಂದಿಹಳ್ಳಿ ಗ್ರಾಮದ ಕಿತ್ತೂರು ಸಂಗೊಳ್ಳಿ ರಸ್ತೆಯ ಬಾಜು ಹಿರೇನಂದಿಹಳ್ಳಿ ಕ್ರಾಸ್ ಹತ್ತಿರ ಇರುವ ಗೋವಿನ ಜೋಳದ ಜಮೀನದಲ್ಲಿ ಮೃತ ದೇಹ ಬಿಟ್ಟು ಆರೋಪಿಗಳು ಪರಾರಿಯಾಗಿದ್ದರು.

ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಮಹೇಶ ಮಡಿವಾಳಪ್ಪ ಅಂಬಣ್ಣವರ ಮತ್ತು ಮುದಕಪ್ಪ ಪದ್ಮರಾಜ ಕೋಳೆಕರ ಕೊಲೆ ಮಾಡಿರುವುದು ತಿಳಿದು ಬಂದಿದೆ. ಈ ಕೊಲೆಗೆ ಮೃತನ ಹೆಂಡತಿ ಕಸ್ತೂರಿ ಕಲ್ಮೇಶ ಕೋಟಿ ಹಾಗೂ ಮಗ ಕಿರಣ ಕೋಟಿ ಆರೋಪಿಗಳೊಂದಿಗೆ ಸೇರಿಕೊಂಡು ಮೃತನ ಹೆಸರಿನಲ್ಲಿರುವ ಆಸ್ತಿಯನ್ನು ಕಬಳಿಸುವ ಉದ್ದೇಶದಿಂದ ಸಂಚು ಮಾಡಿ ಕೊಲೆ ಮಾಡಿರುವುದು ತಿಳಿದುಬಂದಿದೆ.

ಈ ಪ್ರಕರಣದಲ್ಲಿ 4 ಜನ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Related Articles

Back to top button
error: Content is protected !!