ಇತರೆ
ಕೋಟೇಶ್ವರ:ವಿದ್ಯಾರ್ಥಿಗಳ ಅಧ್ಯಯನ ಹಾಗೂ ಸಂಶೋಧನೆಗಾಗಿ ದೇಹದಾನ
Views: 46
ಕನ್ನಡ ಕರಾವಳಿ ಸುದ್ದಿ: ವಿದ್ಯಾರ್ಥಿಗಳ ಅಧ್ಯಯನ ಹಾಗೂ ಸಂಶೋಧನೆಗಾಗಿ ವಿದ್ಯಾಸಂಸ್ಥೆಗೆ ಕೋಟೇಶ್ವರ ಮುಖ್ಯರಸ್ತೆ ಬ್ಯಾರೀಸ್ ಗ್ರೀನ್ ಅವೆನ್ಯೂ ಜಿ-04 ರಲ್ಲಿ ವಾಸವಾಗಿರುವ ದಿ| ಅನಂತ ಪದ್ಮನಾಭ (69 ವರ್ಷ) ಅವರು ದೇಹದಾನ ಮಾಡಿರುತ್ತಾರೆ.
ಮೃತರ ಸ್ವ-ಇಚ್ಛೆಯಂತೆ ಅವರ ಕುಟುಂಬದವರು ಉದ್ಯಾವರ ಉಡುಪಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದ ಶರೀರ ರಚನಾ ವಿಭಾಗಕ್ಕೆ ದೇಹವನ್ನು ದಾನ ಮಾಡಿದ್ದಾರೆ.
ಎಸ್.ಡಿ.ಎಮ್. ವಿದ್ಯಾಸಂಸ್ಥೆಗೆ ನೀಡಿರುವ ಈ ಶ್ರೇಷ್ಠ ಕೊಡುಗೆ ಇತರರಿಗೂ ಮಾದರಿಯಾಗಿದೆ ಎಂದಿರುವ ಕಾಲೇಜಿನ ಪ್ರಾಂಶುಪಾಲರಾದ ಡಾ | ಮಮತಾ ಕೆ.ವಿ.ಯವರು ಮೃತರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸಿ, ಶರೀರ ರಚನಾ ವಿಭಾಗ ಸಂಶೋಧನೆಗಾಗಿ ವಿಭಾಗದ ಮುಖ್ಯಸ್ಥರಾದ ಡಾ| ಕೃಷ್ಣಮೂರ್ತಿ ಎನ್. ಅವರಿಗೆ ದೇಹವನ್ನು ಹಸ್ತಾಂತರಿಸಿದರು.






