ಇತರೆ
ಫೇಸ್ ಬುಕ್ ನಲ್ಲಿ ಅವಾಚ್ಯ ಕಮೆಂಟ್: ಕುಂದಾಪುರ ಪೊಲೀಸರಿಂದ ಆರೋಪಿ ಅರೆಸ್ಟ್
Views: 131
ಕನ್ನಡ ಕರಾವಳಿ ಸುದ್ದಿ: ಸಾಮಾಜಿಕ ಜಾಲತಾಣ ಫೇಸ್ ಬುಕ್ ನ ಪೇಜ್ ಒಂದರಲ್ಲಿ ಪ್ರಕಟವಾದ ಸಂದರ್ಶನಕ್ಕೆ ಅವಾಚ್ಯವಾಗಿ ಕಮೆಂಟ್ ಮಾಡಿದ ಆರೋಪಿಯನ್ನು ಕುಂದಾಪುರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಮತ್ತಿಕೆರೆ ನಿವಾಸಿ 45 ವರ್ಷ ಪ್ರಾಯದ ಪ್ರಕಾಶ್ ಎಸ್.ಬಂಧಿತ ಆರೋಪಿಯಾಗಿದ್ದಾನೆ.
ಸಂದರ್ಶನ ಲೇಖನವನ್ನು ಒಳಗೊಂಡ ಪೇಜ್ ಗೆ ಫೇಸ್ ಬುಕ್ ನಲ್ಲಿ ‘ಹೆಮ್ಮೆಯ ಕಾರ್ಯಕರ್ತ’ ಎಂಬ ಖಾತೆಯಿಂದ ಅವಾಚ್ಯವಾಗಿ ಕಮೆಂಟ್ ಹಾಕಿದ್ದ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿತ್ತು.
ಕುಂದಾಪುರ ಉಪವಿಭಾಗದ ಡಿ.ವೈ.ಎಸ್.ಪಿ. ಎಚ್ ಡಿ ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ ಕುಂದಾಪುರ ಪೊಲೀಸ್ ಠಾಣೆಯ ನಿರೀಕ್ಷಕ ಜಯರಾಮ್ ಡಿ. ಗೌಡ ನೇತೃತ್ವದ ಕುಂದಾಪುರ ಠಾಣೆಯ ಪಿ.ಎಸ್.ಐ. ಗಳಾದ ನಂಜಾ ನಾಯ್ ಎನ್. ಮತ್ತು ಪುಷ್ಪಾ ಹಾಗೂ ಸಿಬಂದಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.






