“ಸುಣ್ಣಾರಿ ಶಾಲಾ ವಿವೇಕೋತ್ಸವ” ಸಂಸ್ಥಾಪಕ ಕಾಪು ಸಂಜೀವ ಶೆಟ್ಟರ ಜನುಮ ದಿನ, ದಿನಕರ ಶೆಟ್ಟರ ಪುಣ್ಯಸ್ಮರಣೆ
Views: 131
ಕನ್ನಡ ಕರಾವಳಿ ಸುದ್ದಿ: ವಿವೇಕೋದಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಹೊಂಬಾಡಿ-ಮಂಡಾಡಿ (ಸುಣ್ಣಾರಿ) ಇದರ ಆಡಳಿತ ಮಂಡಳಿ ಹಾಗೂ ಹಳೆ ವಿದ್ಯಾರ್ಥಿ ಸಂಘದ ಸಹಯೋಗದೊಂದಿಗೆ ಶಾಲಾ ವಿವೇಕೋತ್ಸವ ಹಾಗೂ ಶಾಲಾ ಸಂಸ್ಥಾಪಕರಾದ ಕಾಪು ಸಂಜೀವ ಶೆಟ್ಟರ 110 ನೇ ಜನುಮ ದಿನದ ಆರದ ನೆನಪು ಹಾಗೂ ಶಾಲಾ ಸಂಚಾಲಕರಾದ ಸುಣ್ಣಾರಿ ದಿನಕರ ಶೆಟ್ಟರ 5 ನೇ ಪುಣ್ಯ ಸ್ಮರಣೆ ಆಚರಣೆಯು ಕುಂದಾಪುರ ವಿಧಾನ ಸಭಾ ಸದಸ್ಯರಾದ ಕಿರಣ ಕುಮಾರ ಕೊಡ್ಗಿ ದೀಪ ಬೆಳಗಿಸಿ ಉದ್ಘಾಟಿಸಿ, ಮಾತನಾಡಿದ ಅವರು ಅನುದಾನಿತ ಶಾಲೆಯ ಸಮಸ್ಯೆಯ ಕುರಿತು ಹೇಳಿದರು.
ಪ್ರಾರಂಭದಲ್ಲಿ ದಿ. ಕಾಪು ಸಂಜೀವ ಶೆಟ್ಟರ 110 ನೇ ಆರದ ನೆನಪಿನ ಪ್ರಯುಕ್ತ ಅವರ ಭಾವಚಿತ್ರಕ್ಕೆ ಮಗ ಕಿಶೋರ ಕುಮಾರ ಶೆಟ್ಟಿ ದೀಪ ಬೆಳಗಿಸಿದರು. ಹಾಗೂ ದಿ. ಸುಣ್ಣಾರಿ ದಿನಕರ ಶೆಟ್ರ 5 ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಅವರ ಮಡದಿ ಮಂಜುಳ ಡಿ. ಶೆಟ್ಟಿಯವರು ಅವರ ಭಾವಚಿತ್ರಕ್ಕೆ ದೀಪ ಬೆಳಗಿಸಿ ಪುಷ್ಪ ನಮನ ಸಲ್ಲಿಸಿದರು. ನಂತರ ಇಬ್ಬರ ಭಾವಚಿತ್ರಕ್ಕೆ ಕಿರಣ ಕುಮಾರ ಕೊಡಿ, ಶಾಸಕರು, ಎಲ್ಲಾ ಮುಖ್ಯ ಅತಿಥಿಗಳು, ಆಡಳಿತ ಮಂಡಳಿ ಸದಸ್ಯರು, ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಸಂಚಾಲಕರ ಮನೆಯವರು ಪುಷ್ಪ ನಮನ ಸಲ್ಲಿಸಿದರು.
ಶಾಲಾ ವಿದ್ಯಾರ್ಥಿಗಳಿಂದ ಪ್ರಾರ್ಥನೆ ನೆರವೇರಿತು. ಶಾಲಾ ಶೈಕ್ಷಣಿಕ ಸಲಹೆಗಾರರು ಹಾಗೂ ಆಡಳಿತ ಮಂಡಳಿ ಕೋಶಾಧಿಕಾರಿ ಕಾಳಾವರ ಉದಯ ಕುಮಾರ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಈ ಸಂದರ್ಭದಲ್ಲಿ ಶಾಲಾ ಹಳೆ ವಿದ್ಯಾರ್ಥಿ ಡಾ. ಬಿ ಉದಯಕುಮಾರ ಶೆಟ್ಟಿ ಕೊರ್ಗಿ ಎಡಿಷನಲ್ ಕಮಿಷನರ್, ಕಂದಾಯ ಇಲಾಖೆ ಕರ್ನಾಟಕ ಸರ್ಕಾರ ಇವರನ್ನು ಸನ್ಮಾನಿಸಲಾಯಿತು.ಈ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಸರೋಜಿನಿ, ಕಿರಣಕುಮಾರ, ಬಿ ಸುದಾಕರ ಶೆಟ್ಟಿ ಮತ್ತು ಜಯಲತಾ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಅಲ್ಲದೇ ಈ ಸಂಸ್ಥೆಯಲ್ಲಿ ಗೌರವ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ನೀತಾಶ್ರೀ ಪಿ ಶೆಟ್ಟಿ, ಸಂದೀಪ ಕೊಠಾರಿ, ಒಪ್ತಿ ಪೂರ್ಣಿಮಾ ಹೆಚ್ ಕಾಳಾವರ ರಾಜಶ್ರೀ ಸಳ್ಳಾಡಿ, ಸೀಮಾ ಎಸ್ ಕಛೇರಿ, ಆಶಾ ಯಡಾಡಿ ಇವರನ್ನು ಗೌರವಿಸಿ ಸನ್ಮಾನಿಸಲಾಯಿತು. ಅಡುಗೆ ಸಿಬ್ಬಂದಿಗಳಾದ ಆಶಾ ವಾಸುದೇವ ಆಚಾರ್ಯ, ಚಂದ್ರಾವತಿ ಶೆಟ್ಟಿ, ಅಂಗನವಾಡಿ ಕಾರ್ಯಕರ್ತೆ ವಸುಧಾ, ಅಂಗನವಾಡಿ ಸಹಾಯಕಿ ಸುಶೀಲಾ ಇವರನ್ನು ಗೌರವಿಸಲಾಯಿತು. ಡಾ. ಬಿ ಉದಯ ಕುಮಾರ ಶೆಟ್ಟಿಯವರು ತಾನು ಕಲಿತ ಶಾಲೆ ಉಳಿಯುವಲ್ಲಿ ತನ್ನಿಂದ ಆದ ಸಹಕಾರವನ್ನು ನೀಡುತ್ತೇನೆ ಎಂದರು. ಇನ್ನೋರ್ವ ಮುಖ್ಯ ಅತಿಥಿ ಶಾಲಾ ಹಳೆ ವಿದ್ಯಾರ್ಥಿ ಖ್ಯಾತ ವೈದ್ಯರಾದ ಡಾ. ರಂಜನ ಕುಮಾರ ಶೆಟ್ಟಿ ನ್ಯೂ ಮೆಡಿಕಲ್ ಸೆಂಟರ್ ಕುಂದಾಪುರ ತನ್ನ ವಿದ್ಯಾರ್ಥಿ ಜೀವನವನ್ನು ನೆನಪಿಸಿಕೊಂಡರು. ಸಭೆಯ ಅಧ್ಯಕ್ಷತೆ ವಹಿಸಿದ ಶಾಲಾ ಸಂಚಾಲಕರಾದ ಎಸ್ ಕಿಶೋರ ಕುಮಾರ ಶೆಟ್ಟಿ ಶಾಲೆಯನ್ನು ಉಳಿಸುವಲ್ಲಿ ಎಲ್ಲರ ಸಹಕಾರವನ್ನು ನೀಡಿದರು. ಬೆಳಗಿನ ಧ್ವಜಾರೋಹಣ ಕಾರ್ಯಕ್ರಮವನ್ನು ಪಂಚಾಯತ್ ಅಧ್ಯಕ್ಷರಾದ ಜಯಂತಿ ಶೆಟ್ಟಿ ನೆರವೇರಿಸಿದರು. ಶಾಲಾ ಮಕ್ಕಳಿಗೆ ಯಡ್ತಾಡಿ ಪಂಚಾಯತ್ ಅಧ್ಯಕ್ಷರು, ಉದ್ಯಮಿಯಾದ ಪ್ರಕಾಶ ಶೆಟ್ಟಿ ಬಹುಮಾನ ವಿತರಿಸಿದರು. ಪಂಚಾಯತ್ ಸದಸ್ಯರಾದ ಗಣೇಶ ಶೆಟ್ಟಿ ಕೊರ್ಗಿ ಸನ್ಮಾನ ಪತ್ರ ವಾಚಿಸಿದರು. ಸಂಜೆಯ ಕಾರ್ಯಕ್ರಮದ ವೇದಿಕೆಯಲ್ಲಿ ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರಾದ ವಿ ಚಂದ್ರಶೇಖರ ಹೆಗ್ಡೆ, ಅಧ್ಯಕ್ಷರಾದ ಪ್ರಸನ್ನ ಶೆಟ್ಟಿ ಸುಣಾರಿ, ಕಾರ್ಯದರ್ಶಿ ರವಿ ದಬ್ಬೆಕಟ್ಟೆ, ಆಡಳಿತ ಮಂಡಳಿ ಸದಸ್ಯರಾದ ಡಾ. ಉತ್ತಮ ಶ್ರೀ ಶೆಟ್ಟಿ ಸಂಜೀವ ಶೆಟ್ಟಿ, ಮಂಡಾಡಿ ಲಕ್ಷಣ ಶೆಟ್ಟಿ, ಮಂಜುಳಾ ಡಿ ಶೆಟ್ಟಿ, ಮಂಜು ಎಸ್. SDMC ಅಧ್ಯಕ್ಷರಾದ ಶ್ರೀಮತಿಯವರು ಉಪಸ್ಥಿತರಿದ್ದರು. ಶಾಲಾ ಪ್ರಬಾರ ಮುಖ್ಯ ಶಿಕ್ಷಕರಾದ ಸುಜಾತ ಶೆಟ್ಟಿ ವಂದಿಸಿದರು. ಉಪನ್ಯಾಸಕರಾದ ಕಾಳಾವರ ಉದಯ ಕುಮಾರ ಶೆಟ್ಟಿ, ರಘು ದಬೈಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ನಂತರ ಶಾಲಾ ವಿದ್ಯಾರ್ಥಿಗಳಿಂದ ಮತ್ತು ಹಳೆ ವಿದ್ಯಾರ್ಥಿಗಳಿಂದ ವಿವಿಧ ವಿನೋದಾವಳಿಗಳು ಮತ್ತು ನಾಟಕಗಳು ನಡೆಯಿತು.






