ಇತರೆ

ಆತ್ಮಹತ್ಯೆಗೆಂದು ನೇಣು ಬಿಗಿದು ಮೇಲಿಂದ ಜಿಗಿದು ಕೇಬಲ್ ತುಂಡಾಗಿ ಬಿದ್ದು ಗಂಭೀರ ಗಾಯಗೊಂಡ ವ್ಯಕ್ತಿ ಸಾವು

Views: 66

ಆತ್ಮಹತ್ಯೆಗೆಂದು ನೇಣು ಬಿಗಿದು ಮೇಲಿಂದ ಜಿಗಿದು ಕೇಬಲ್ ತುಂಡಾಗಿ ಬಿದ್ದು ಗಂಭೀರ ಗಾಯಗೊಂಡ ವ್ಯಕ್ತಿ ಸಾವುಆತ್ಮಹತ್ಯೆಗೆಂದು ನೇಣು ಬಿಗಿದು ಮೇಲಿಂದ ಜಿಗಿದು ಕೇಬಲ್ ತುಂಡಾಗಿ ಬಿದ್ದು ಗಂಭೀರ ಗಾಯಗೊಂಡ ವ್ಯಕ್ತಿ ಸಾವು

ಕನ್ನಡ ಕರಾವಳಿ ಸುದ್ದಿ: ಆತ್ಮಹತ್ಯೆಗೆಂದು ನೇಣು ಬಿಗಿದುಕೊಂಡ ವೇಳೆ ಕೇಬಲ್ ತುಂಡಾಗಿ ಕೆಳಗೆ ಬಿದ್ದು, ತಲೆಗೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯೋರ್ವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಕಲ್ಲುಗುಂಡಿಯಲ್ಲಿ ನಡೆದಿದೆ.

ಮೃತರನ್ನು ಐವರ್ನಾಡು ಗ್ರಾಮದ ಮೂಲದ ಮಾಧವ (60) ಎಂದು ಗುರುತಿಸಲಾಗಿದೆ.

ಮಾಧವ ಅವರು ಕಳೆದ ಹಲವು ವರ್ಷಗಳಿಂದ ಕಲ್ಲುಗುಂಡಿಯ ಕೂಲಿಶೆಡ್‌ ಬಳಿ ವಾಸವಿದ್ದು, ಸ್ಥಳೀಯ ಹೋಟೆಲ್ ಒಂದರಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು.

ಘಟನೆಯ ವಿವರ:ಡಿಸೆಂಬರ್ 5ರಂದು ಮಾಧವ ಅವರು ತಮ್ಮ ಬಾಡಿಗೆ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಉದ್ದೇಶದಿಂದ ಕೇಬಲ್ ಬಳಸಿ ನೇಣು ಬಿಗಿದುಕೊಂಡು ಮೇಲಿಂದ ಜಿಗಿದಿದ್ದರು. ಈ ವೇಳೆ ಭಾರ ತಾಳಲಾರದೆ ಕೇಬಲ್ ತುಂಡಾಗಿತ್ತು. ಪರಿಣಾಮವಾಗಿ ಅವರು ನೆಲಕ್ಕೆ ಬಿದ್ದು ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು.

ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣ ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಅವರು ಮೃತಪಟ್ಟಿದ್ದಾರೆ. ಈ ಸಂಬಂಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related Articles

Back to top button
error: Content is protected !!