ಇತರೆ
ಪ್ರಿವೆಡ್ಡಿಂಗ್ ಶೂಟ್ ಮುಗಿಸಿಕೊಂಡು ವಾಪಾಸು ಬರುವಾಗ ಜೋಡಿ ಸಾವು
Views: 154
ಕನ್ನಡ ಕರಾವಳಿ ಸುದ್ದಿ: ಗಂಗಾವತಿ ತಾಲೂಕಿನ ಚಿಕ್ಕಬೆಣಕಲ್ ಗ್ರಾಮದ ಬಳಿ ಬೈಕ್ ಮತ್ತು ಲಾರಿ ನಡುವೆ ನಡೆದ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಭಾನುವಾರ ಮೃತಪಟ್ಟಿದ್ದಾರೆ. ಮೃತರು ಕೊಪ್ಪಳ ತಾಲೂಕು ಇರಕಲ್ಲಗಡ ಗ್ರಾಮದ ಕರಿಯಪ್ಪ ಮಡಿವಾಳ (26) ಕಾರಟಗಿ ತಾಲೂಕು ಮುನ್ನೂರು ಗ್ರಾಮದ ಕವಿತಾ ( 19) ಎಂದು ಗುರುತಿಸಲಾಗಿದೆ. ಇಬ್ಬರಿಗೂ ಡಿ.21 ರಂದು ಮದುವೆ ನಿಶ್ಚಯವಾಗಿದ್ದು, ಪ್ರಿವೆಡ್ಡಿಂಗ್ ಶೂಟಿಂಗ್ ಮಾಡಿಸಲು ಮುನಿರಾ ಬಾದ್ ಕಡೆಗೆ ಹೋಗಿದ್ದರು. ಪ್ರೀ ವೆಡ್ಡಿಂಗ್ ಶೂಟ್ ಮುಗಿಸಿಕೊಂಡು ವಾಪಸ್ಸು ವಾಪಸ್ಸು ಗಂಗಾವತಿ ಮಾರ್ಗವಾಗಿ ಮುನ್ನೂರು ಗ್ರಾಮಕ್ಕೆ ಬೈಕ್ ಮೂಲಕ ಹೋಗುವಾಗ ಘಟನೆ ನಡೆದಿದೆ. ಚಿಕ್ಕಬೆಣಕಲ್ ಗ್ರಾಮದ ಸಮೀಪ ಲಾರಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತ ಪಟ್ಟಿದ್ದಾರೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






