ಇತರೆ

ಕಾರಿನಲ್ಲಿ ಬೆಂಕಿ: ಲೋಕಾಯುಕ್ತ ಪೊಲೀಸ್ ಅಧಿಕಾರಿ ಸಾವು

Views: 50

ಕನ್ನಡ ಕರಾವಳಿ ಸುದ್ದಿ:  ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಭದ್ರಾಪುರ ಬಳಿಯ (ಗದಗಹುಬ್ಬಳ್ಳಿ ಹೆದ್ದಾರಿ) ಅರೆರಾ ಸೇತುವೆ ಸಮೀಪ ಕಾರು ರಸ್ತೆಯ ವಿಭಜಕಕ್ಕೆ ಡಿಕ್ಕಿಯಾಗಿ ಬೆಂಕಿ ಹೊತ್ತಿಕೊಂಡಿದ್ದು, ಕಾರಿನಲ್ಲಿದ್ದ ಹಾವೇರಿಯ ಲೋಕಾಯುಕ್ತ ಸಿಪಿಐ ಪಂಚಾಕ್ಷರಿ ಸಾಲಿಮಠ (40) ಸಾವಿಗೀಡಾಗಿದ್ದಾರೆ. ರಾತ್ರಿ 7.30ರ ಹೊತ್ತಿಗೆ ಅವಘಡ ಸಂಭವಿಸಿದೆ. ಪಂಚಾಕ್ಷರಿ ಅವರು ಕಾರು ಚಾಲನೆ ಮಾಡುತ್ತಿದ್ದರು. ಅಣ್ಣಿಗೇರಿ ಠಾಣೆ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ ಧಾವಿಸಿ ಅಗ್ನಿ ನಂದಿಸಿದ್ದಾರೆ.

ಮದುವೆ ಕಾರ್ಯಕ್ರಮ ಮುಗಿಸಿ ತೆರಳುತ್ತಿದ್ದ ಸಂದರ್ಭದಲ್ಲಿ ಚಲಿಸುತ್ತಿದ್ದ ಕಾರಿಗೆ ಬೆಂಕಿ ತಗುಲಿ ಲೋಕಾಯುಕ್ತ ಪೊಲೀಸ್ ಅಧಿಕಾರಿ ಪಂಚಾಕ್ಷರಿ ಸಾಲಿಮಠ ಸುಟ್ಟು ಕರಕಲಾಗಿದ್ದಾರೆ. ಜೊತೆಗೆ ಕಾರಿನ ಚಾಲಕ ಕೂಡ ಸುಟ್ಟು ಹೋಗಿದ್ದಾರೆ.

ಪಂಚಾಕ್ಷರಿ ಅವರು ಈ ಹಿಂದೆ ಬೈಲಹೊಂಗಲ, ಗದಗ ಹಾಗೂ ಹುಬ್ಬಳ್ಳಿ ಸೇರಿದಂತೆ ರಾಜ್ಯ ವಿವಿಧ ಭಾಗಗಳಲ್ಲಿ ಕಾರ್ಯ ನಿರ್ವಹಿಸಿದ್ದರು.

 

Related Articles

Back to top button
error: Content is protected !!