ಕುಂಭಾಶಿಯಲ್ಲಿ10 ದಿನಗಳ ಆರಿ ಎಂಬ್ರಾಯ್ಡರಿ ಕೌಶಲ್ಯ ತರಬೇತಿ ಉದ್ಘಾಟನೆ
Views: 84
ಕನ್ನಡ ಕರಾವಳಿ ಸುದ್ದಿ: ವಿಜಯ ಗ್ರಾಮೀಣ ಪ್ರತಿಷ್ಠಾನ (ರಿ.), ಮಂಗಳೂರು ಮತ್ತು ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಸ್ಪೂರ್ತಿ ಸಂಜೀವಿನಿ ಒಕ್ಕೂಟ ಕುಂಭಾಶಿ ಇವರ ಆಯೋಜನೆಯಲ್ಲಿ ಕುಂಭಾಶಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ 10 ದಿನಗಳ ಕಾಲ ನಡೆಯುವ ಆರಿ ಎಂಬ್ರಾಯ್ಡರಿ ತರಬೇತಿಯ ಉದ್ಘಾಟನೆ ನೆರವೇರಿತು.
ತರಬೇತಿಯ ಉದ್ಘಾಟನೆಯನ್ನು ವಿಜಯ ಗ್ರಾಮೀಣ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಯೋತಿ ರಾಜ್ ಅವರು ಗಿಡಕ್ಕೆ ನೀರೂಣಿಸುವ ಮೂಲಕ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಬಿವಿಟಿಯ ರಾಘವೇಂದ್ರ ಆಚಾರ್ಯ ಕೆದೂರು, ಪಂಚಾಯತ್ ಕಾರ್ಯದರ್ಶಿ ಚಂದ್ರ, ಸ್ಪೂರ್ತಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷರು ಸುನೀತಾ, ತರಬೇತುದಾರೆ ನಿಶ್ಮಿತಾ ತೆಕ್ಕಟ್ಟೆ ಉಪಸ್ಥಿತರಿದ್ದು ಶುಭ ಹಾರೈಸಿದರು.
ರತ್ನಾ ತುಳಸಿದಾಸ್ ಪ್ರಾರ್ಥಿಸಿ, ಕೃಷಿ ಸಖಿ ಸುಪ್ರೀತಾ ಸ್ವಾಗತಿಸಿ, ಎಂಬಿಕೆ ರೂಪಿಣಿ ನಿರೂಪಿಸಿ ವಂದಿಸಿದರು. ಎಲ್ ಸಿ ಆರ್ ಪಿ ಜಯ, ಜಯಲಕ್ಷ್ಮಿ, ಸುಚಿತ್ರ ಮತ್ತು ಒಕ್ಕೂಟದ ಪದಾಧಿಕಾರಿಗಳು ಮತ್ತು ವಿಜಯ ಗ್ರಾಮೀಣ ಪ್ರತಿಷ್ಠಾನ ದ ಸಿಬ್ಬಂದಿ ಪಂಡರಿನಾಥ್ ಸಹಕರಿಸಿದರು. 30 ಮಂದಿ ಫಲಾನುಭವಿಗಳು ಪಾಲ್ಗೊಂಡಿದ್ದರು.






