ಬಸ್ರೂರು ಶ್ರೀ ಶಾರದಾ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕ ಪೋಷಕರ ಕ್ರೀಡೋತ್ಸವ ಕಾರ್ಯಕ್ರಮ “ಸಮ್ಮಿಲನ” 2025
Views: 68
ಕನ್ನಡ ಕರಾವಳಿ ಸುದ್ದಿ: ಬಸ್ರೂರು ಶ್ರೀ ಶಾರದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ವಾರ್ಷಿಕ ಪೋಷಕರ ಕ್ರೀಡೋತ್ಸವ ಕಾರ್ಯಕ್ರಮವನ್ನು ಉತ್ಸಾಹಭರಿತ ವಾತಾವರಣದಲ್ಲಿ ಆಚರಿಸಲಾಯಿತು. ವಿದ್ಯಾರ್ಥಿಗಳ ಪೋಷಕರು ಸಕ್ರೀಯವಾಗಿ ಭಾಗವಹಿಸಿ ಕ್ರೀಡಾ ಮನೋಭಾವ ಪ್ರದರ್ಶಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲೆಯ ಸಂಚಾಲಕರಾದ ಶ್ರೀಯುತ ಸಂತೋಷ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಕ್ರೀಡೋತ್ಸವಕ್ಕೆ ಚಾಲನೆ ನೀಡಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಪೋಷಕ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಪ್ರೇಮ ಹಾಗೂ ಸರ್ವ ಸದಸ್ಯರು ಮತ್ತು ಆಡಳಿತ ಅಧಿಕಾರಿಯಾದ ಆಶಾ ಶೆಟ್ಟಿ ಅವರು ಉಪಸ್ಥಿತರಿದ್ದರು . ಶಾಲಾ ಮುಖ್ಯೋಪಾಧ್ಯಯರಾದ ಶ್ರೀಮತಿ ರೇಷ್ಮಾ ಅಡಪ ಪ್ರಾಸ್ತಾವಿಕ ನುಡಿಯನ್ನಾಡಿ ಎಲ್ಲಾ ಪೋಷಕರನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಅಧ್ಯಕ್ಷತೆಯ ನುಡಿಯನ್ನಾಡಿದ ಶ್ರೀಮತಿ ಪ್ರೇಮ ಅವರು ಸಮ್ಮಿಲನ ಎಂದರೆ ಎಲ್ಲಾ ಪೋಷಕರು ಒಟ್ಟಿಗೆ ಸೇರುವ ಕಾರ್ಯಕ್ರಮ .ದಿನನಿತ್ಯ ಮಕ್ಕಳ ಲಾಲನೆ ಪೋಷಣೆ ಹಾಗೂ ಮನೆಯ ಜವಾಬ್ದಾರಿಗಳಲ್ಲಿ ತೊಡಗಿರುವ ಪೋಷಕರು ತಮ್ಮ ಚಿಂತೆಯನ್ನು ಬಿಟ್ಟು ಕ್ರೀಡೆಯಲ್ಲಿ ಭಾಗವಹಿಸಿ ಎಂದು ಪ್ರೋತ್ಸಾಹಿಸಿದರು.
ಪೋಷಕರಿಗಾಗಿ ಓಟ, ಹಗ್ಗ ಜಗ್ಗಾಟ, ಸಂಗೀತ ಕುರ್ಚಿ, ಕಪ್ಪು ಗಳಲ್ಲಿ ನೀರು ತುಂಬುವ ಆಟ, ಹೀಗೆ ಹಗ್ಗಜಗ್ಗಾಟ ದಂತಹ ಗುಂಪು ಆಟಗಳು ಮತ್ತು ಮುಂತಾದ ಮನೋರಂಜನೆ ಆಟಗಳನ್ನು ನಡೆಸಲಾಯಿತು.
“ಈ ಕ್ರೀಡೋತ್ಸವ ಪೋಷಕರು ಮತ್ತು ಶಾಲೆಯ ನಡುವೆ ಹೊಸ ಬಾಂಧವ್ಯ ನಿರ್ಮಿಸಿದೆ ; ಒಟ್ಟಾಗಿ ಸ್ಪರ್ಧಿಸಿದ ಕ್ಷಣಗಳು ಎಲ್ಲರ ಮನಸ್ಸಿನಲ್ಲಿ ಸ್ಮರಣೀಯವಾಗಿ ಉಳಿದಿವೆ”.
ಕ್ರೀಡೋತ್ಸವದಲ್ಲಿ ಶಾಲಾ ಶಿಕ್ಷಕ/ ಶಿಕ್ಷಕೇತರ ವೃಂದದವರು ಉಪಸ್ಥಿತರಿದ್ದರು. ಉಪ ಮುಖ್ಯೋಪಾಧ್ಯಾಯರಾದ ಶ್ರೀಮತಿ ವನಿತಾ ಕಾರ್ಯಕ್ರಮವನ್ನು ನಿರೂಪಿಸಿದರು.









