ಇತರೆ

ಉಗ್ರರ ದಾಳಿ ಬೆನ್ನಲ್ಲೇ ಭದ್ರತಾ ಪಡೆ ಕಾರ್ಯಾಚರಣೆ: ಮತ್ತೆ ಇಬ್ಬರು ಉಗ್ರರ ಮನೆ ಧ್ವಂಸ

Views: 112

ಕನ್ನಡ ಕರಾವಳಿ ಸುದ್ದಿ:  ಉಗ್ರರ ದಾಳಿ ಬೆನ್ನಲ್ಲೇ ಕಠಿಣ ಕ್ರಮಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರವು ಉಗ್ರ ಸಂಘಟನೆಯಲ್ಲಿ ಭಾಗಿಯಾದವರ ಮನೆ ಧ್ವಂಸಕ್ಕೆ ಮುಂದಾಗಿದೆ. ಟ್ರಾಲ್ ಮತ್ತು ಬಿಜ್‌ಬೆಹರಾ ಉಗ್ರರ ಮನೆ ನೆಲ ಸಮವಾದ ಬಳಿಕ ಇದೀಗ ಪುಲ್ವಾಮಾ ಜಿಲ್ಲೆಯ ಮೋರನ್ ಮತ್ತು ಕಚಿಪೋರಾ ಪ್ರದೇಶದ ಉಗ್ರ ಎಹ್ಸಾನ್ ಅಹ್ಮದ್ ಶೇಖ್ ಮತ್ತು ಹರೀಸ್ ಅಹ್ಮದ್ ಅವರ ಮನೆಗಳನ್ನು ಧ್ವಂಸ ಮಾಡಲಾಗಿದೆ.

2023ರ ಜೂನ್ನಿಂದ ಲಷ್ಕರ್ ಎ ತೊಯ್ಬಾ (ಎಲ್ಇಟಿ) ಉಗ್ರ ಸಂಘಟನೆಯಲ್ಲಿ ಎಹ್ಸಾನ್ ಅಹ್ಮದ್ ಶೇಖ್ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ. ಜಿಲ್ಲೆಯ ಕಚಿಪೋರಾ ಪ್ರದೇಶದ ಹರೀಸ್ ಅಹ್ಮದ್ ಕೂಡ 2023 ರಿಂದ ಎಲ್ಇಟಿ ಭಯೋತ್ಪಾದಕ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದು, ಈತ ಪಹಲ್ಗಾಮ್ ದಾಳಿಯಲ್ಲೂ ಶಂಕಿತನಾಗಿದ್ದಾನೆ ಎಂದು ಹೇಳಲಾಗುತ್ತಿದೆ.

ಇಲ್ಲಿಯವರೆಗೆ ಭದ್ರತಾ ಪಡೆ ನಾಲ್ವರು ಉಗ್ರರ ಮನೆಗಳನ್ನು ಧ್ವಂಸ ಮಾಡಿದ್ದು, ಈ ಪ್ರದೇಶದಲ್ಲಿ ಉಗ್ರರ ಶೋಧ ಕಾರ್ಯ ಮುಂದುವರೆದಿದೆ.

ಇದಕ್ಕೆ ಮುಂಚೆ ಅಂದರೆ ದಕ್ಷಿಣ ಕಾಶ್ಮೀರದ ಟ್ರಾಲ್‌ನ ಮೊಂಘಮಾ ಗ್ರಾಮದಲ್ಲಿ ಭದ್ರತಾ ಪಡೆಗಳು ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಆಸಿಫ್ ಶೇಖ್ ಮನೆಯನ್ನು ಸ್ಫೋಟಿಸಿ, ಧ್ವಂಸಗೊಳಿಸಲಾಗಿತ್ತು. ಆಸಿಫ್ ಶೇಖ್ ಉಗ್ರ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದು, ಪಹಲ್ಗಾಮ್ ದಾಳಿಯಲ್ಲಿ ಈತನ ಹೆಸರೂ ಕೇಳಿಬರುತ್ತಿದೆ. ಈ ಮಧ್ಯೆ, ಅನಂತ್‌ನಾಗ್ ಜಿಲ್ಲೆಯ ಬಿಜ್‌ಬೆಹರಾದಲ್ಲಿ ಆದಿಲ್ ಥೋಕರ್ ಎಂಬ ಉಗ್ರನ ಮನೆಯನ್ನು ಧ್ವಂಸ ಮಾಡಲಾಗಿದೆ.

ಇನ್ನೊಂದೆಡೆ ಗಡಿ ನಿಯಂತ್ರಣ ರೇಖೆಯಲ್ಲಿ ಉದ್ದಟತನ ಮೆರೆದ ಪಾಕ್ ಸೈನಿಕರಿಗೆ ಭಾರತೀಯ ಭದ್ರತಾ ಪಡೆ ತಕ್ಕ ಪ್ರತ್ಯುತ್ತರ ನೀಡಿದೆ. ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ಮಾಡಿದ ಪಾಕ್ಗೆ ನಮ್ಮ ಸೈನಿಕರು ಕೂಡ ಗುಂಡು ಹಾರಿಸಿ ಸೂಕ್ತ ಪ್ರತ್ಯುತ್ತರ ನೀಡಿದ್ದಾರೆ ಎಂದು ಸೇನಾ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

 

Related Articles

Back to top button
error: Content is protected !!