ರೈಲ್ವೆ ಇಲಾಖೆಯಲ್ಲಿ SSLC ಆದವರಿಗೆ 32,438 ಭರ್ಜರಿ ಉದ್ಯೋಗ ನೇಮಕಾತಿ
Views: 115
ಕನ್ನಡ ಕರಾವಳಿ ಸುದ್ದಿ: ರೈಲ್ವೆ ನೇಮಕಾತಿ ಮಂಡಳಿ (RRB) ಗ್ರೂಪ್ D ಹುದ್ದೆಗಳನ್ನು ಬೃಹತ್ ಮಟ್ಟದಲ್ಲಿ ದೇಶಾದ್ಯಂತ 32,438 ಗ್ರೂಪ್- ಡಿ ಉದ್ಯೋಗಗಳನ್ನು ಭರ್ತಿ ಮಾಡುತ್ತಿದ್ದು, 33 ವರ್ಷದ ಒಳಗಿನ ಎಲ್ಲ ಅಭ್ಯರ್ಥಿಗಳಿಗೆ ಅವಕಾಶ ಇದೆ.
ರೈಲ್ವೆ ಇಲಾಖೆಯು ದೇಶಾದ್ಯಂತ 32,438 ಗ್ರೂಪ್- ಡಿ ಉದ್ಯೋಗಗಳನ್ನು ಭರ್ತಿ ಮಾಡುತ್ತಿದ್ದು ಆಯ್ಕೆ ಆದ ಅಭ್ಯರ್ಥಿಗಳಿಗೆ ಮಾಸಿಕವಾಗಿ ವೇತನ ಆರಂಭದಲ್ಲಿ 18,000 ರೂಪಾಯಿಗಳನ್ನು ನೀಡಲಾಗುತ್ತದೆ. ಅಭ್ಯರ್ಥಿಗಳು ವಿದ್ಯಾರ್ಹತೆಗೆ ಬಂದರೆ 10ನೇ ತರಗತಿ ಪಾಸ್ ಆಗಿದ್ದರೇ ಸಾಕು. ಇದರ ಜೊತೆ ಐಟಿಐ ಅಥವಾ ಡಿಪ್ಲೋಮಾ ಪೂರ್ಣಗೊಳಿಸಿದ್ದರೇ ನಿಮ್ಮ ಆಯ್ಕೆ ಸುಲಭವಾಗಲಿದೆ. ಅರ್ಜಿ ಸಲ್ಲಿಕೆ ಮಾಡುವ ಜನರಲ್, ಇಡಬ್ಲುಎಸ್, ಒಬಿಸಿ ಆಕಾಂಕ್ಷಿಗಳು 500 ರೂಪಾಯಿ, ಎಸ್ಸಿ, ಎಸ್ಟಿ, ಮಹಿಳೆ, ವಿಶೇಷ ಚೇತನ ಅಭ್ಯರ್ಥಿಗಳು 250 ರೂಪಾಯಿಗಳನ್ನು ಅರ್ಜಿ ಶುಲ್ಕವಾಗಿ ಪಾವತಿಸಬೇಕು.
ಕೊನೆಯ ದಿನಾಂಕ :ಗ್ರೂಪ್ ಡಿ ಉದ್ಯೋಗಗಳಿಗೆ ದೇಶಾದ್ಯಂತ ಅರ್ಜಿ ಸಲ್ಲಿಕೆಯು 23 ಜನವರಿ 2025 ರಿಂದ ಆರಂಭವಾಗಿ 22 ಫೆಬ್ರವರಿ 2025ಕ್ಕೆ ಕೊನೆಗೊಳ್ಳುತ್ತದೆ.
ವಯೋಮಿತಿ:18 ರಿಂದ 33 ವರ್ಷಗಳ ಒಳಗಿನವರಿಗೆ ಮಾತ್ರ ಈ ಕೆಲಸಗಳಿಗೆ ಅರ್ಹರು ಆಗಿರುತ್ತಾರೆ. ಅಲ್ಲದೇ ವರ್ಗವಾರು ವಯೋಮಿತಿ ಸಡಿಲಿಕೆ ನೀಡಲಾಗಿದ್ದು ಎಸ್ಸಿ, ಎಸ್ಟಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ವಿಶೇಷ ಚೇತನರಿಗೆ 10 ವರ್ಷ ಸಡಿಲಿಕೆ ಇದೆ.
ಆಯ್ಕೆ ಪ್ರಕ್ರಿಯೆ:
ಕಂಪ್ಯೂಟರ್ ಬೇಸಡ್ ಟೆಸ್ಟ್ (ಸಿಬಿಟಿ)
ದೈಹಿಕ ದಕ್ಷತೆ ಪರೀಕ್ಷೆ (ಪಿಇಟಿ)
ಪುರುಷರು- 35 ಕೆಜಿ ಭಾರ ಎತ್ತಬೇಕು ಹಾಗೂ 4 ನಿಮಿಷದಲ್ಲಿ 1000 ಮೀಟರ್ ಓಡಬೇಕು
ಮಹಿಳೆಯರು- 20 ಕೆಜಿ ಭಾರ ಎತ್ತಬೇಕು ಹಾಗೂ 5 ನಿಮಿಷದಲ್ಲಿ 1000 ಮೀಟರ್ ಓಡಬೇಕು
ದಾಖಲೆ ಪರಿಶೀಲನೆ
ವೈದ್ಯಕೀಯ ಪರೀಕ್ಷೆ
ಅರ್ಜಿ ಸಲ್ಲಿಕೆ ಮಾಡುವ ಅಭ್ಯರ್ಥಿಗಳಲ್ಲಿ ಈ ದಾಖಲೆ ಇರಬೇಕು
ಯಾವುದಾದರೂ ಸರ್ಕಾರ ನೀಡಿದ ಗುರುತಿನ ಚೀಟಿ
ನಿಮ್ಮ ಶೈಕ್ಷಣಿಕ ಪ್ರಮಾಣ ಪತ್ರಗಳು
ಜಾತಿ ಪ್ರಮಾಣ ಪತ್ರ
ಅಂಗವೈಕಲ್ಯ ಪ್ರಮಾಣಪತ್ರ (ಅನ್ವಯಿಸಿದರೆ)
2 ಪಾಸ್ ಪೋರ್ಟ್ ಸೈಜಿನ ಪೊಟೋಗಳು ಮತ್ತು ಸಹಿ ಹಾಕಿರಬೇಕು.
ಹೆಚ್ಚಿನ ಮಾಹಿತಿಗಾಗಿ: ರೈಲ್ವೆ ನೇಮಕಾತಿ ಮಂಡಳಿ (RRB) ಸಂಪರ್ಕಿಸಿರಿ