ಆರ್ಥಿಕ

ನಕಲಿ ನೋಟು ನೋಟು ಪ್ರಿಂಟ್‌ ಮಾಡುತ್ತಿದ್ದ ತಂದೆ – ಮಗನ ಬಂಧನ

Views: 93

ಕನ್ನಡ ಕರಾವಳಿ ಸುದ್ದಿ: ಮೈಸೂರು ಜಿಲ್ಲೆಯ ಮಾದಾಪುರ ಬಳಿ ದನದ ಕೊಟ್ಟಿಗೆಯಲ್ಲಿ ಖೋಟಾ ನೋಟು ಪ್ರಿಂಟ್‌ ಮಾಡುತ್ತಿದ್ದ ಖಚಿತ ಮಾಹಿತಿಯ ಮೇರೆಗೆ ಟಿ.ನರಸೀಪುರ ಪೊಲೀಸರು ದಾಳಿ ಮಾಡಿ ಕೃತ್ಯದಲ್ಲಿ ತೊಡಗಿದ್ದ ತಂದೆ ಮತ್ತು ಮಗನನ್ನು ಬಂಧಿಸಿರುವ ಘಟನೆ ಟಿ. ನರಸೀಪುರ ತಾಲ್ಲೂಕಿನ ಹಿರಿಯೂರು ಗ್ರಾಮದಲ್ಲಿ ನಡೆದಿದೆ.

ಹಿರಿಯೂರು ಗ್ರಾಮದ ನಾಗೇಶ್ (25) ಹಾಗೂ ಶಿವಪ್ರಸಾದ್ (48) ಬಂಧಿತ ಆರೋಪಿಗಳು.

ಟಿ. ನರಸೀಪುರ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ನೇತೃತ್ವದ ತಂಡ ದಾಳಿ ನಡೆಸಿದಾಗ ಅರೋಪಿಗಳು ತಾವು ಮಲಗಲು ಹಾಸಿಕೊಂಡಿದ್ದ ಹಾಸಿಗೆ ಪಕ್ಕದಲ್ಲಿ ರಟ್ಟಿನ ಬಾಕ್ಸ್ನಲ್ಲಿ ಎಪ್ಸನ್ ಕಲರ್ ಪ್ರಿಂಟರ್ ಕಂಡುಬಂದಿದೆ‌‌. ಪೊಲೀಸರು ಇನ್ನಷ್ಟು ಪರಿಶೀಲನೆ ನಡೆಸಿದಾಗ ಈ ಕೃತ್ಯಕ್ಕೆ ಬಳಸುತ್ತಿದ್ದ‌‌ ಎಲ್ಲ ವಸ್ತುಗಳನ್ನು ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿದ್ದಾರೆ.

25,500 ರೂ. ಮೌಲ್ಯದ 51 ಖೋಟಾ ನೋಟುಗಳನ್ನು ಕೂಡ ಪ್ರಿಂಟ್ ಮಾಡಿದ್ದರು. ಖೋಟಾ ನೋಟು, 2 ಮೊಬೈಲ್ ಮತ್ತು ಅಡಾಪ್ಟರ್, ಕಪ್ಪು ಬಣ್ಣದ 16 ಜಿಬಿ ಪೆನ್ಡ್ರೈವ್, ಎಟಿಎಂ ಕಾರ್ಡ್‌ ಸೇರಿದಂತೆ ಪ್ರಿಂಟಿಂಗ್ಗೆ ಬಳಸುತ್ತಿದ್ದ ಎಲ್ಲ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು,‌ ತನಿಖೆಯನ್ನು ನಡೆಸಲಾಗುತ್ತಿದೆ. ಈ ಸಂಬಂಧ ಟಿ. ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Related Articles

Back to top button