ರಾಜಕೀಯ

ಮನೆಯಲ್ಲಿಯೇ ಧ್ಯಾನ ಮಾಡುವುದು ಬಿಟ್ಟು ಕನ್ಯಾಕುಮಾರಿಯಲ್ಲಿ ಮೋದಿ ಡ್ರಾಮಾ ಅಗತ್ಯವಿಲ್ಲ: ಮಲ್ಲಿಕಾರ್ಜುನ ಖರ್ಗೆ

Views: 93

ತಮಿಳುನಾಡಿನ ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ಶಿಲೆ ಸ್ಮಾರಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 45 ಗಂಟೆಗಳ ಧ್ಯಾನ ಆರಂಭಿಸಿದ್ದಾರೆ. ಸುಮಾರು 131 ವರ್ಷಗಳ ಹಿಂದೆ ಸ್ವಾಮಿ ವಿವೇಕಾನಂದರು ಧ್ಯಾನ ಮಾಡಿದ ಧ್ಯಾನ ಮಂಟಪದಲ್ಲಿ ಮೋದಿ ಧ್ಯಾನದಲ್ಲಿ ತೊಡಗಿಕೊಂಡಿದ್ದಾರೆ. ಇದರ ಬೆನ್ನಲ್ಲೇ, ಮೋದಿ ಅವರು ಮನೆಯಲ್ಲಿಯೇ ಧ್ಯಾನ ಮಾಡಬಹುದಿತ್ತು. ಕನ್ಯಾಕುಮಾರಿಯಲ್ಲಿ ಧ್ಯಾನದ ಹೆಸರಿನಲ್ಲಿ ಡ್ರಾಮಾ ಮಾಡುವ ಅವಶ್ಯಕತೆ ಇರಲಿಲ್ಲ ಎಂಬುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಅವರು ಮೋದಿ ಧ್ಯಾನದ ಬಗ್ಗೆ ಮಾತನಾಡಿ, ನರೇಂದ್ರ ಮೋದಿ ಅವರು ಮನೆಯಲ್ಲಿಯೇ 45 ಗಂಟೆ ಧ್ಯಾನ ಮಾಡಬಹುದಿತ್ತು. ಕನ್ಯಾಕುಮಾರಿಗೆ ಹೋಗುವ ಅನಿವಾರ್ಯತೆ ಏನಿತ್ತು? ನರೇಂದ್ರ ಮೋದಿ ಅವರ ಭದ್ರತೆಗೆ 10 ಸಾವಿರ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇಷ್ಟೊಂದು ಡ್ರಾಮಾ ಏಕೆ ಬೇಕಿತ್ತು? ಅವರು ಮನೆಯಲ್ಲಿಯೇ ಪೂಜೆ, ಧ್ಯಾನ ಮಾಡಬಹುದಿತ್ತು” ಎಂಬುದಾಗಿ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ

 

Related Articles

Back to top button
error: Content is protected !!