ಭೈರವಿ ಯಾಗ ಎದುರಿಸಲು ದಿಗ್ಬಂಧನಕ್ಕೆ ಪುರೋಹಿತರ ಮೊರೆ ಹೋದ ಡಿಕೆಶಿ!

Views: 100
ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ರಾಜಕೀಯದಲ್ಲಿ ಕಂಟಕ ತರಲು ಉದ್ದೇಶಿಸಿ ಕೇರಳದಲ್ಲಿ ʼಶತ್ರು ಭೈರವಿ ಯಾಗ’ ನಡೆಯುತ್ತಿದೆ ಎಂದು ಡಿಕೆ ಶಿವಕುಮಾರ್ ನಿನ್ನೆ ಆರೋಪಿಸಿದ್ದರು. ಇದೀಗ ಪುರೋಹಿತರ ಸೂಚನೆಯಂತೆ, ಈ ಯಾಗದಿಂದ ಉಂಟಾಗಬಹುದಾದ ಹಾನಿಗೆ ರಕ್ಷಣಾ ಕವಚ ಮಾಡಿಸಲು ಡಿಕೆಶಿ ಮುಂದಾಗಿದ್ದಾರೆ.
ಈ ಯಾಗವನ್ನು ಸಾಮಾನ್ಯ ಪುರೋಹಿತರಿಂದ ಮಾಡಲು ಸಾಧ್ಯವಿಲ್ಲ. ಅಘೋರಿಗಳನ್ನು ಕರೆಸಿ ಸ್ಮಶಾನದಲ್ಲಿ ಯಾಗ ನಡೆಸಲಾಗುತ್ತದೆ. ಸ್ಮಶಾನ ಕಾಳಿಯನ್ನು ಪ್ರಧಾನವಾಗಿಟ್ಟು ಅಷ್ಟ ಭೈರವಿಯನ್ನು ಕರೆದು ಯಾಗ ಮಾಡಿಸಲಾಗುತ್ತದೆ. ಮೊದಲು ಪ್ರಾಣಿಯ ಮೇಲೆ ನಡೆಯುತ್ತದೆ.ನಂತರ ಶತ್ರುಗಳ ಮೇಲೆ ಪ್ರಯೋಗಿಸಿಸಲಾಗುತ್ತದೆ.
ಯಾಗದಲ್ಲಿ ಭಾಗಿಯಾದವರಿಂದಲೇ ಡಿಸಿಎಂ ಡಿಕೆಶಿಗೆ ಈ ಬಗ್ಗೆ ಮಾಹಿತಿ ದೊರೆತಿದೆ ಎಂದು ಅವರು ಹೇಳಿದ್ದಾರೆ. ಮಾಹಿತಿ ಸಿಕ್ಕ ಬೆನ್ನಲ್ಲೇ ಅಲರ್ಟ್ ಆಗಿರುವ ಡಿಕೆ ಶಿವಕುಮಾರ್ ಪುರೋಹಿತರ ಮೊರೆ ಹೋಗಿದ್ದು, ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಲು ಮುಂದಾಗಿದ್ದಾರೆ. ಸೂಕ್ತ ದಿಗ್ಬಂಧನಗಳನ್ನು ಮಾಡಿಸಿಕೊಳ್ಳುವುದು ಸೇರಿದಂತೆ ಒಂದಷ್ಟು ಮಹತ್ವದ ಸಲಹೆಗಳನ್ನು ಜ್ಯೋತಿಷಿಗಳು ಅವರಿಗೆ ನೀಡಿದ್ದಾರೆ. ನನ್ನ ರಕ್ಷಣೆಗೆ ನನ್ನ ಶಕ್ತಿ ಇದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.






