ಕರಾವಳಿ
ಕುಂದಾಪುರ:ಸಿದ್ದಾಪುರದಲ್ಲಿ ಸಿಡಿಲು ಬಡಿದು ವ್ಯಕ್ತಿ ಸಾವು

Views: 266
ಕುಂದಾಪುರ : ಸಿಡಿಲು ಬಡಿದು ವ್ಯಕ್ತಿಯಯೊಬ್ಬ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸಿದ್ದಾಪುರದಲ್ಲಿ ನಡೆದಿದೆ.
ಸಿದ್ದಾಪುರ ಗ್ರಾಮದ ಸುರೇಶ ಶೆಟ್ಟಿ (38) ಮೃತ ದುರ್ದೈವಿ. ಉಡುಪಿ ಜಿಲ್ಲೆಯ ಹಲವೆಡೆ ಮಂಗಳವಾರ ಧಾರಕಾರ ಮಳೆಯಾಗಿದೆ. ಸಿಡಿಲು ಸಹಿತ ಭಾರಿ ಮಳೆ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಸಂಜೆ 4 ಗಂಟೆ ಹೊತ್ತಿಗೆ ಕುಂದಾಪುರ ತಾಲೂಕಿನಲ್ಲಿ ಗುಡುಗು ಸಹಿತ ಭಾರಿ ಮಳೆ ಆರಂಭವಾಗಿತ್ತು. ಈ ವೇಳೆ ಸಿಡಿಲು ಬಡಿದ ಪರಿಣಾಮ ಸುರೇಶ ಶೆಟ್ಟಿ ತೀವ್ರ ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಗಿತ್ತು. ಆದರೆ, ದುರಾದೃಷ್ಟವಶಾತ್ ಅಷ್ಟರಲ್ಲಾಗಲೇ ಸುರೇಶ ಶೆಟ್ಟಿ ಸಾವನ್ನಪ್ಪಿದ್ದರು.
ಬೆಂಗಳೂರಿನಲ್ಲಿ ಹೋಟೆಲ್ ಉದ್ಯೋಗಿಯಾಗಿದ್ದ ಸುರೇಶ್ ಅವರು ಮಂಗಳವಾರ ಬೆಳಗ್ಗೆ ಊರಿಗೆ ಬಂದಿದ್ದು, ಮೇ16 ರಂದು ಮಗನ ನಾಲ್ಕನೇ ವರ್ಷದ ಹುಟ್ಟುಹಬ್ಬ ನಡೆಯಲಿದ್ದು, ಅದಕ್ಕಾಗಿ ಅವರು ಬೆಂಗಳೂರಿನಿಂದ ಬಂದು ಮನೆಯವರ ಜೊತೆ ಹುಟ್ಟು ಹಬ್ಬದ ತಯಾರಿ ನಡೆಸುತ್ತಿದ್ದರು.






