ಡಾ.ಹೇಮಾವತಿ ಹೆಗ್ಗಡೆ ಹುಟ್ಟು ಹಬ್ಬದ ಪ್ರಯುಕ್ತ ಮಾಶಾಸನ ಫಲಾನುಭವಿಗಳಿಗೆ ಹಣ್ಣು ಹಂಪಲ ವಿತರಣೆ
Views: 118
ಕನ್ನಡ ಕರಾವಳಿ ಸುದ್ದಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಗೌರಿಬಿದನೂರು ತಾಲೂಕು, ಪರಮಪೂಜ್ಯ ರಾಜರ್ಷಿ ಪದ್ಮವಿಭೂಷಣ ಡಾl ಡಿ.ವೀರೇಂದ್ರ ಹೆಗ್ಗಡೆಯವರು ಮತ್ತು ಮಾತಶ್ರೀ ಡಾl ಹೇಮಾವತಿ ವಿ ಹೆಗ್ಡೆ ಅವರ ಮಾರ್ಗದರ್ಶನಗಳೊಂದಿಗೆ ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ವಲಯದ ಮಾತೃಶ್ರೀ ಹೇಮಾವತಿ ವಿ ಹೆಗ್ಗಡೆ ಅವರ 58ನೇ ಜನುಮದಿನದ ಪ್ರಯುಕ್ತ ಸುಮಾರು 100 ಮಂದಿ ಮಾಶಾಸನ ಫಲಾನುಭವಿಗಳಿಗೆ ಹಣ್ಣು ಮತ್ತು ಇತರ ವಸ್ತುಗಳನ್ನು ನೀಡುವುದರ ಮೂಲಕ ಆಚರಿಸಲಾಯಿತು.

ತಾಲೂಕಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಪ್ರತಿ ತಿಂಗಳು ಸುಮಾರು ನೂರು ಮಂದಿಗೆ ಒಂದು ಸಾವಿರ ರೂ.ನೀಡುತ್ತಾ ಬಂದಿದ್ದು ಅಲ್ಲದೆ ತುಂಬಾ ಬಡತನದಲ್ಲಿದ್ದು ಅಂತ ಸದಸ್ಯರಿಗೆ ವಾತ್ಸಲ್ಯ ಮನೆ ಕಟ್ಟಿಸಿ ಕೊಟ್ಟಿದ್ದು ಅಲ್ಲದೆ ಆರೋಗ್ಯ ಸಮಸ್ಯೆ ಇದ್ದವರಿಗೆ ವಾಟರ್ ಬೆಡ್, ವಾಕರ್, ಸ್ಟಿಕ್,ವಿಲ್ ಚೇರ್ ಮುಂತಾದ ಸಾಮಗ್ರಿಗಳನ್ನು ನೀಡುತ್ತಾ ಬಂದಿದ್ದು ಪ್ರತಿ ವರ್ಷ ಪಾತ್ರೆ ಮತ್ತು ಆಹಾರದ ಕಿಟ್ ನೀಡುತ್ತಾ ಬಂದಿರುತ್ತಾರೆ.

ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯರಾದ ಶ್ರೀಯುತ ಪಿ. ಎನ್ ಜಗನ್ನಾಥ್ ವಲಯ ಮೇಲ್ವಿಚಾರಕ ಅಜಿತ್ ಕುಮಾರ್, ಸಿರಿನ್ ತಾಜ್ ಸುಮಿತ್ರ ಗೋಪಾಲ ಗಂಗಾಮಣಿ ಇದ್ದರು.






