ಇತರೆ

ಕೋಟ ಮಣೂರಿನಲ್ಲಿ ಕ್ರಿಕೆಟ್ ಬೆಟ್ಟಿಂಗ್ ಅಕ್ರಮ ದಂಧೆ: ಆರೋಪಿ ಬಂಧನ

Views: 67

ಕನ್ನಡ ಕರಾವಳಿ ಸುದ್ದಿ: ಕೋಟ ಮಣೂರು ಗ್ರಾಮದ ಬಾಳೆಬೆಟ್ಟು ಬಸ್ಸು ನಿಲ್ದಾಣದ ಬಳಿ ಕ್ರಿಕೆಟ್ ಬೆಟ್ಟಿಂಗ್ ಅಕ್ರಮ ದಂಧೆಯಲ್ಲಿ ತೊಡಗಿಸಿಕೊಂಡ ಆರೋಪಿಯನ್ನು ಬಂಧಿಸಲಾಗಿದೆ.

ಸಂದೀಪ ಗಾಣಿಗ ನೂಜಿ, ಆದಿತ್ಯ ಶೆಟ್ಟಿ ಬೇಳೂರು ಇವರು ಜೊತೆಯಾಗಿ ಸೇರಿಕೊಂಡು  ಕೊಲ್ಕತ್ತದ ಈಡನ್ ಗಾರ್ಡನ್ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ KKR ಮತ್ತು SRH ತಂಡಗಳ ನಡುವೆ ನಡೆಯುವ IPL T20ಕ್ರಿಕೆಟ್ ಮ್ಯಾಚ್ ಗೆ ಸಂಬಂಧಪಟ್ಟ ಸಾರ್ವಜನಿಕರಿಂದ ಹಣಸಂಗ್ರಹ ಮಾಡುತ್ತ ಕ್ರಿಕೆಟ್ ಬೆಟ್ಟಿಂಗ್ ಅಕ್ರಮ ದಂಧೆಯಲ್ಲಿ ತೊಡಗಿರುವ ಮಾಹಿತಿ ಮೇರೆಗೆ  ಬಾಳೆಬೆಟ್ಟು ಬಸ್ಸು ನಿಲ್ದಾಣದ ಸಮೀಪ  ಓರ್ವ ವ್ಯಕ್ತಿ ನಿಂತುಕೊಂಡು ಕೈಯಲ್ಲಿ ಮೊಬೈಲ್  ಹಿಡಿದುಕೊಂಡು ಬಾಜಿ ಕಟ್ಟುತ್ತಿರುವುದು ಕಂಡು ಬಂದ್ದಿದ್ದು, ಅಕ್ರಮ ದಂಧೆಯಲ್ಲಿ ತೊಡಗಿರುವ ಆದಿತ್ಯ ಶೆಟ್ಟಿ ಎಂಬುವವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.ಕೋಟ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ

Related Articles

Back to top button
error: Content is protected !!