ಇತರೆ

ಕಾಂತಾರದಲ್ಲಿ ಅದ್ಭುತವಾಗಿ ಅಬಿನಯಿಸಿದ ಬಾಲ ಪ್ರತಿಭೆ ‘ಸಮೀಕ್ಷಾ ಸುರೇಶ್ ಹಕ್ಲಾಡಿ’ಗೆ ಡಾ.ಶಿವರಾಮ ಕಾರಂತ ಬಾಲ ಪುರಸ್ಕಾರ ಪ್ರದಾನ

Views: 243

ಕನ್ನಡ ಕರಾವಳಿ ಸುದ್ದಿ: ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿಷ್ಠಾನ, ಕೋಟತಟ್ಟು ಗ್ರಾಮ ಪಂಚಾಯಿತಿ, ಮಣೂರು ಗೀತಾನಂದ ಫೌಂಡೇಷನ್‌, ಉಸಿರು ಸಂಸ್ಥೆ, ಬಾಳ್ಕುದ್ರು ಕೈಂಡ್ ಹಾರ್ಟ್ಸ್, ಬಾರ್ಕೂರು ಮೂಡುಕೇರಿ ವೇಣುಗೋಪಾಲ ಎಜುಕೇಷನಲ್ ಸೊಸೈಟಿ, ಕೋಟತಟ್ಟು ಅರಿವು ಕೇಂದ್ರ ಡಿಜಿಟಲ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದ ವತಿಯಿಂದ ನ.30ರಂದು ಡಾ.ಶಿವರಾಮ ಕಾರಂತ ಥೀಂ ಪಾರ್ಕ್‌ನಲ್ಲಿ 5ನೇ ವರ್ಷದ ಡಾ.ಶಿವರಾಮ ಕಾರಂತ ಬಾಲ ಪುರಸ್ಕಾರವನ್ನು ಕಾಂತಾರದ ಬಾಲ ಪ್ರತಿಭೆ ಗುಜ್ಜಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ‘ಸಮೀಕ್ಷಾ ಸುರೇಶ್ ಹಕ್ಲಾಡಿ’ಗೆ ಪ್ರದಾನ ಮಾಡಲಾಯಿತು.

ಕುಂದಾಪುರ ತಾಲೂಕಿನ ಸುರೇಶ್ ಹಕ್ಲಾಡಿ ಹಾಗೂ ಗೀತಾ ಅವರ ಪುತ್ರಿ ಸಮೀಕ್ಷಾ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದು, ‘ಕಾಂತಾರ ಚಾಪ್ಟರ್ 1’ ಸಿನಿಮಾದಲ್ಲಿ ಬಾಲ ಪ್ರತಿಭೆಯಾಗಿ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾಳೆ.ಈಕೆ 5ನೇ ತರಗತಿವರೆಗೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹಕ್ಲಾಡಿಯಲ್ಲಿ 7ನೇ ತರಗತಿಯನ್ನು, ಪ್ರಸ್ತುತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಜ್ಜಾಡಿಯಲ್ಲಿ ಕಲಿಯುತ್ತಿದ್ದಾಳೆ.12ರ ವಯಸ್ಸಿನ ಈ ಬಾಲ ಪ್ರತಿಭೆ ಎಳೆ ಪ್ರಾಯದಲ್ಲಿ ಶಿಕ್ಷಣದ ಜೊತೆಗೆ ಇವಳು ತಾಂಡವಂ ಡಾನ್ಸ್ ಸ್ಟುಡಿಯೋದಲ್ಲಿ ಸೀನಿಯರ್ ವಿಭಾಗದಲ್ಲಿ ಡಾನ್ಸ್ ಕಲಿಯುತ್ತಿದ್ದಾಳೆ ಹಾಗೂ ಭರತನಾಟ್ಯವನ್ನು ಸೀನಿಯರ್ ವಿಭಾಗದಲ್ಲಿ ಶ್ರೀಮತಿ ವಿದುಷೀ ಭಾಗೀರಥಿ. ಎಮ್. ರಾವ್ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತ ಜೂನಿಯರ್ ವಿಭಾಗದಲ್ಲಿ ಶ್ರೀಮತಿ ಭಾಗ್ಯೇಶ್ವರಿ ಇವರಲ್ಲಿ ಕಲಿಯುತ್ತಿದ್ದಾಳೆ ಮತ್ತು ಯಕ್ಷಗಾನ ಹಾಗೂ ಇನ್ನಿತರ ಚಟುವಟಿಕೆಯಲ್ಲಿ ತೊಡಗಿರುತ್ತಾಳೆ.ಇತ್ತೀಚಿಗೆ ‘ಕಾಂತಾರ ಚಾಪ್ಟರ್ 1’ ಚಲನಚಿತ್ರ ಬಿಡುಗಡೆಯ ಸಂದರ್ಭದಲ್ಲಿ ಅಭಿಮಾನಿಗಳಿಂದ ವಿಶೇಷ ಸನ್ಮಾನ ಪಡೆದುಕೊಂಡಿದ್ದಾರೆ.

Related Articles

Back to top button
error: Content is protected !!