ಇತರೆ

ಹಾವಂಜೆ 10 ದಿನಗಳ ಆರಿ ಎಂಬ್ರಾಯ್ಡರಿ ಕೌಶಲ್ಯ ತರಬೇತಿ ಸಮಾರೋಪ ಸಮಾರಂಭ

Views: 80

ಕನ್ನಡ ಕರಾವಳಿ ಸುದ್ದಿ: ವಿಜಯ ಗ್ರಾಮೀಣ ಪ್ರತಿಷ್ಠಾನ (ರಿ.), ಮಂಗಳೂರು ಮತ್ತು ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಗ್ರಾಮ ಪಂಚಾಯತ್ ಹಾವಂಜೆ,ಅರಿವು ಕೇಂದ್ರ ಹಾವಂಜೆ,ಸಂಜೀವಿನಿ ಒಕ್ಕೂಟ ಹಾವಂಜೆ ಇವರ ಆಯೋಜನೆಯಲ್ಲಿ ಹಾವಂಜೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ 10 ದಿನಗಳ ಕಾಲ ನಡೆಯುವ ಆರಿ ಎಂಬ್ರಾಯ್ಡರಿ ತರಬೇತಿಯ ಸಮಾರೋಪ ಸಮಾರಂಭ ನೆರವೇರಿತು.

ತರಬೇತಿಯ ಬಗ್ಗೆ ವಿಜಯ ಗ್ರಾಮೀಣ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜ್ಯೋತಿ ರಾಜ್ ಶುಭಹಾರೈಸಿದರು. ಮುಖ್ಯ ಅತಿಥಿಗಳಾಗಿ ಹಾವಂಜೆ ಪಂಚಾಯತ್ ಅಧ್ಯಕ್ಷರಾದ ಆಶಾ.ಡಿ. ಪೂಜಾರಿ, ಡಾ.ಸುರೇಶ್ ನಾಯಕ್ , ಪಿಡಿಓ ಆರುಂಧತಿ ಮೇಡಂ ಬಿವಿಟಿಯ ರಾಘವೇಂದ್ರ ಆಚಾರ್ಯ, ಆರೋಗ್ಯ ಸಹಾಯಕಿ ಆಶಾಲತಾ , ತರಬೇತುದಾರೆ ಶ್ರೀಷ್ಮಾ ಉಪಸ್ಥಿತರಿದ್ದು ಶುಭ ಹಾರೈಸಿದರು. ಶಿಬಿರಾರ್ಥಿಗಳ ಪರವಾಗಿ ಸುಚಿತ್ರ, ಪುಷ್ಪ, ಚೈತ್ರ, ಪವಿತ್ರ ಪ್ರೀತಿ ಅನಿಸಿಕೆ ಹಂಚಿಕೊಂಡರು. ನಳಿನಿ ಪ್ರಾರ್ಥಿಸಿ, ಶ್ರೇಯ ವಂದಿಸಿ, ಸದಾಶಿವ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಅರಿವು ಕೇಂದ್ರದ ಮೇಲ್ವಿಚಾರಕಿ ಸುಮತಿ, ವಿಜಯ ಗ್ರಾಮೀಣ ಪ್ರತಿಷ್ಠಾನ ದ ಸಿಬ್ಬಂದಿ ಪಂಡರಿನಾಥ್, ಪಂಚಾಯತ್ ಸಿಬ್ಬಂದಿ ಪವಿತ್ರ,ಸಂಜೀವಿನಿ ಎಂಬಿಕೆ ವೀಣಾ ಸಹಕರಿಸಿದರು.ಒಟ್ಟು 30 ಮಂದಿ ಫಲಾನುಭವಿಗಳು ಪಾಲ್ಗೊಂಡಿದ್ದರು.

Related Articles

Back to top button
error: Content is protected !!