ಮಗಳಿಗೆ ವಿಚ್ಛೇದನ ಸಿಕ್ಕ ಬೆನ್ನಲ್ಲೇ ತಂದೆ ಡ್ರಮ್ ಬಾರಿಸುತ್ತಾ, ಸಿಹಿ ತಿಂಡಿ ಹಂಚುತ್ತಾ ಸಂಭ್ರಮದ ಮೆರವಣಿಗೆ
Views: 31
ಕನ್ನಡ ಕರಾವಳಿ ಸುದ್ದಿ: ಉತ್ತರ ಪ್ರದೇಶದ ಮೀರತ್‌ನಲ್ಲಿ, ವಿಚ್ಛೇದನ ಪಡೆದ ಮಗಳನ್ನು ತನ್ನ ತಂದೆ ಆಕೆಯ ವಿಚ್ಛೇದನವನ್ನು ವಿಭಿನ್ನ ರೀತಿಯಲ್ಲಿ ಆಚರಣೆ ಮಾಡಿ ಆಕೆಯನ್ನು ಮನೆಗೆ ಕರೆದುಕೊಂಡು ಬಂದಿದ್ದಾರೆ.
ಮೀರತ್‌ನ ಕೌಟುಂಬಿಕ ನ್ಯಾಯಾಲಯವು ಪ್ರಣಿತಾ ಎಂಬ ಮಹಿಳೆಗೆ ವಿಚ್ಛೇದನ ನೀಡಿದ ನಂತರ, ಆಕೆಯ ತಂದೆ ನ್ಯಾಯಾಲಯದ ಸಂಕೀರ್ಣದ ಹೊರಗೆ ಡ್ರಮ್ ಬಾರಿಸುತ್ತ ಎಲ್ಲರಿಗೂ ಸಿಹಿ ತಿಂಡಿ ಹಂಚುತ್ತಾ ಸಂಭ್ರಮಿಸಿದ್ದಾರೆ. ಇನ್ನು ಜೊತೆಗೆ ಬಂದ ಸಂಬಂಧಿಕರು ಡ್ರಮ್ ಬೀಟ್‌ಗಳಿಗೆ ಕುಣಿದು ಸಂತಸ ವ್ಯಕ್ತಪಡಿಸಿದ್ದಾರೆ. ಆಕೆಯ ತಂದೆ ಧರಿಸಿದ ಟಿ-ಶರ್ಟ್ ಮೇಲೆ ಪ್ರಣಿತಾಳ ಛಾಯಾಚಿತ್ರ ಹಾಕಿಸಿ ನಾನು ನನ್ನ ಮಗಳನ್ನು ಪ್ರೀತಿಸುತ್ತೇನೆ. ಮಗಳು ನನ್ನ ಹೃದಯ, ನನ್ನ ಆತ್ಮ ಅಂತ ಬರೆಸಿ ಸಂಭ್ರಮಿಸಿದ್ದಾರೆ.
ವಿಚ್ಛೇದನಕ್ಕೆ ಕಾರಣ ಏನು?
ಮೀರತ್ ನಿವಾಸಿ ಡಾ.ಜ್ಞಾನೇಂದ್ರ ಶರ್ಮಾ ಅವರ ಏಕೈಕ ಪುತ್ರಿ ಪ್ರಣೀತಾ. 2018 ರಲ್ಲಿ ಭಾರತೀಯ ಸೇನೆಯಲ್ಲಿ ಮೇಜರ್ ಆಗಿರುವ ಗೌರವ್ ಅಗ್ನಿಹೋತ್ರಿ ಅವರನ್ನು ವಿವಾಹವಾದರು. ಪ್ರಸ್ತುತ ಪಂಜಾಬ್‌ನ ಜಲಂಧರ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಣಿತಾಳ ತನ್ನ ಸಂಸಾರದಲ್ಲಿ ಅತ್ತೆ ಮಾವಂದಿರ ಕಿರುಕುಳಕ್ಕೆ ಬೇಸತ್ತು ವಿಚ್ಛೇದನ ಪಡೆಯಲು ನಿರ್ಧರಿಸಿದಳು. ಈ ವಿಷಯವು ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿತು. ನಂತರ ಕೋರ್ಟ್ ಸಹ ವಿಚ್ಛೇದನಕ್ಕೆ ಅನುಮೋದಿಸಿತು.
ನ್ಯಾಯಾಲಯದ ಆದೇಶದ ನಂತರ ಡಾ. ಶರ್ಮಾ ಮತ್ತು ಅವರ ಕುಟುಂಬ ಸದಸ್ಯರು ಮೀರತ್ ಜಿಲ್ಲಾ ನ್ಯಾಯಾಲಯದ ಹೊರಗೆ ಡ್ರಮ್ಸ್ ಬಾರಿಸುತ್ತಾ, ಹೂಮಾಲೆ ಧರಿಸಿ ಮತ್ತು ಸಿಹಿತಿಂಡಿಗಳನ್ನ ಹಂಚುವ ಮೂಲಕ ಸಂಭ್ರಮಿಸಿದ್ದಾರೆ. ಕುಟುಂಬವು ಈಗಾಗಲೇ ವೈಯಕ್ತಿಕ ನಷ್ಟವನ್ನು ಎದುರಿಸುತ್ತಿದ್ದು, ಮತ್ತೆ ಆ ನೋವು ಮಗಳಿಗೆ ಬರಬಾರದು ಎಂದು ಸಂಭ್ರಮಿಸಿದ್ದಾರೆ.






