ಶಿಕ್ಷಣ

ಬ್ರಹ್ಮಾವರ :ಬೈಕಾಡಿ- ಗಾಂಧಿನಗರದಲ್ಲಿ  ಇದ್ದೂ.. ಇಲ್ಲದಂತಾಗಿದೆ.. ಅಂಗನವಾಡಿಯ ಗೋಳು ! 

Views: 13

ಬ್ರಹ್ಮಾವರ:ಮಗುವಿನ ಕಲಿಕಾ ಆರಂಭದ ಮೊದಲ ದೇಗುಲವೆಂದೇ ಕರೆಯಲ್ಪಡುವ ಅಂಗನವಾಡಿ, ಪ್ರಾಥಮಿಕ ಪೂರ್ವ ಶಿಕ್ಷಣ ನೀಡುವ ಮೂಲಕ ಎಳೆಯ ಮಕ್ಕಳ ಆರೈಕೆ ಮಾಡುವ,ಇಡೀ ಊರಿಗೆ ಮಕ್ಕಳು, ಗರ್ಭಿಣಿ, ಬಾಣಂತಿಯರಿಗೆ ಪೌಷ್ಟಿಕ ಆಹಾರ ವಿತರಣೆ, ಆರೋಗ್ಯ ತಪಾಸಣೆ, ಚುಚ್ಚುಮದ್ದು, ಮಹಿಳೆ ಮತ್ತು ಮಕ್ಕಳ ಆರೋಗ್ಯದ ಬಗ್ಗೆ ತರಬೇತಿ ನೀಡುತ್ತಿರುವ ಬ್ರಹ್ಮಾವರ ತಾಲೂಕಿನ ಬೈಕಾಡಿ ಗ್ರಾಮದ ಗಾಂಧಿನಗರದ ಅಂಗನವಾಡಿಯಲ್ಲಿ ಪಾಠಮಾಡುವ ಕಾರ್ಯಕರ್ತೆಯೇ ಇಲ್ಲದ ಮಕ್ಕಳ ಮತ್ತು ಪೋಷಕರ ಗೋಳು ಕೇಳುವವರಿಲ್ಲದಂತಾಗಿದೆ.

ಬೈಕಾಡಿ ಗ್ರಾಮದ ಗಾಂಧಿನಗರ ಬಡಾವಣೆಯಲ್ಲಿ 500 ರಿಂದ 600 ಮನೆಗಳಿದ್ದು, ಈ ವಠಾರದಲ್ಲಿ ಕಳೆದ ಹಲವಾರು ವರ್ಷಗಳಿಂದ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯಿಂದ ಈ ಕೇಂದ್ರದಲ್ಲಿ ಒಳ್ಳೆಯ ಕಾರ್ಯಚಟುವಟಿಗಳಿಂದ ನಡೆಯುತ್ತಿತ್ತು. ಆದರೆ ಇತ್ತೀಚಿಗೆ ಎರಡು ಮೂರು ವರ್ಷಗಳಿಂದ ಅಂಗನವಾಡಿ ಕಾರ್ಯಕರ್ತೆಗೆ ಹಠಾತ್ ಆರೋಗ್ಯ ಸಮಸ್ಯೆಯಿಂದಾಗಿ ಅವರು ಗೈರಾಗಿದ್ದು, ಮಕ್ಕಳಿಗೆ ಪಾಠವನ್ನು ಮುನ್ನೆಡಸಲು ಯಾರೂ ಇಲ್ಲದೆ ಇರುವುದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಭಾರೀ ತೊಂದರೆಯಾಗಿದೆ.

ಕಾರ್ಯಕರ್ತೆಯ ಅನುಪಸ್ಥಿತಿಯಲ್ಲಿ ಸಹಾಯಕಿಯೇ ಅಂಗನವಾಡಿಯ ಎಲ್ಲಾ ಉಸ್ತುವಾರಿಯನ್ನು ನಡೆಸಿಕೊಂಡು ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.ಆದರೆ, ಇಲಾಖೆಯ ಎಲ್ಲಾ ಚಟುವಟಿಕೆಗಳನ್ನು ನಡೆಸಲು ಅನುಭವದ ಕೊರತೆಯಿಂದ ಇವರಿಂದ ಅಸಾಧ್ಯ.

ಆದರೆ, ಇತ್ತೀಚಿಗೆ ಪಕ್ಕದ ಅಂಗನವಾಡಿ ಕಾರ್ಯಕರ್ತೆಯೊಬ್ಬರು ವಾರಕ್ಕೆ ಎರಡು ದಿನ ಬಂದು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಎರಡು ದಿನಗಳಿಂದ ಮಕ್ಕಳಿಗೆ ಏನು ಪಾಠ ಹೇಳಿಕೊಡಲು ಸಾಧ್ಯ..? ಮಕ್ಕಳಿಗೆ ಪೂರ್ವಾಭ್ಯಾಸವಿಲ್ಲದೆ ಮುಂದೆ ಪ್ರಾಥಮಿಕ ಶಾಲೆಗೆ ಸೇರಲು ಹೇಗೆ ಸಾಧ್ಯ..? ಎಂಬುವುದನ್ನು ಅರಿತ  ಈ ಅಂಗನವಾಡಿಯನ್ನೇ ನಂಬಿಕೊಂಡ ಪೋಷಕರು ತಮ್ಮ ಮಕ್ಕಳ ಭವಿಷ್ಯದ ಚಿಂತೆಯಲ್ಲಿದ್ದಾರೆ.

ಈ ಅಂಗನವಾಡಿಯ ಸಮಸ್ಯೆ ಕುರಿತು ಸಂಬಂಧಪಟ್ಟ ಇಲಾಖೆಯವರಿಗೆ ಸ್ಥಳೀಯರು ಮತ್ತು ಪೋಷಕರು ಇಲ್ಲಿಯವರೆಗೆ  ಮನವಿ ಮಾಡುತ್ತಾ ಬಂದಿದ್ದಾರೆ.

ಇಷ್ಟೆಲ್ಲ ಸಮಸ್ಯೆ ಇರುವಾಗ ಸ್ಥಳೀಯ ಜನಪ್ರತಿನಿಧಿ, ಗ್ರಾಮ ಪಂಚಾಯತ್, ಜಿಲ್ಲಾ ಪಂಚಾಯತ್ ನವರಾಗಲಿ, ಸಂಬಂಧಪಟ್ಟ ಇಲಾಖೆ ಯಾಗಲಿ ಈ ಅಂಗನವಾಡಿ ಬಗ್ಗೆ ಗಮನಹರಿಸುತ್ತಿಲ್ಲ ಯಾಕೆ.? ಎನ್ನುವುದು ಯಕ್ಷಪ್ರಶ್ನೆಯಾಗಿ ಉಳಿದಿದೆ.ಹೆತ್ತವರಿಗೆ ಮಾತ್ರ ತಮ್ಮ ಮಕ್ಕಳ ಭವಿಷ್ಯಕ್ಕೆ ಇಲ್ಲಿನ ಅಂಗವನವಾಡಿ ಇದ್ದೂ.. ಇಲ್ಲದಂತಾಗಿದೆ ಎಂಬ ಚಿಂತೆಯಾಗಿದೆ.

ಈ ಕಾರಣಕ್ಕೆ ಇಲ್ಲಿನ ಪೋಷಕರು ಅಂಗನವಾಡಿ ಬಗ್ಗೆ ಬೇಸತ್ತು ತಮ್ಮ ಮಕ್ಕಳನ್ನು ಹತ್ತಿರದ ಖಾಸಗಿ ಶಾಲೆಗಳಿಗೆ ಕಳುಹಿಸುವ ಚಿಂತನೆಯಲ್ಲಿದ್ದಾರೆ.

ಈ ಅಂಗನವಾಡಿ ಕುರಿತು ಇಲ್ಲಿನ ಸ್ಥಳೀಯ ಸಂಘ ಸಂಸ್ಥೆ ಸೂಪರ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ (ರಿ )ಹೆಚ್ಚಿನ ನಿಗಾ ತೆಗೆದುಕೊಳ್ಳುತ್ತಿದ್ದು, ಇನ್ನು ಮುಂದಾದರೂ ಮಕ್ಕಳ ಹಿತ ದೃಷ್ಟಿಯಿಂದ ಧಯೆ ತೋರಿ  ಒಳ್ಳೆಯ ಕಾರ್ಯಕರ್ತೆಯನ್ನು ನೇಮಿಸಿಕೊಳ್ಳುವಂತೆ ಸ್ಥಳೀಯ ಜನಪ್ರತಿನಿಧಿಗಳಿಗೆ, ಸಂಬಂಧಪಟ್ಟ ಇಲಾಖೆಯವರಿಗೆ ಅಂಗನವಾಡಿ ಉಳಿಸಿಕೊಳ್ಳುವಲ್ಲಿ ಒತ್ತಡ ತಂದು ಮೊದಲಿನಂತೆ ಈ ಅಂಗನವಾಡಿ ನಡೆಸುವವರೇ ಪೋಷಕರು, ಸ್ಥಳೀಯರು ವಿನಂತಿ ಮಾಡಿಕೊಂಡಿದ್ದಾರೆ.

Related Articles

Back to top button