ಇತರೆ

ಬೈಂದೂರು: ಯಡ್ತರೆಯಲ್ಲಿ ಕಟ್ಟಿಗೆ ತರಲೆಂದು ಹೋದ ವ್ಯಕ್ತಿ ಹೊಳೆಯಲ್ಲಿ ಮೃತದೇಹ ಪತ್ತೆ

Views: 101

ಕನ್ನಡ ಕರಾವಳಿ ಸುದ್ದಿ: ಕಟ್ಟಿಗೆ ತರಲೆಂದು ಹೋದ ವ್ಯಕ್ತಿ ಮೃತಪಟ್ಟ ಸ್ಥಿತಿಯಲ್ಲಿ ಹೊಳೆಯಲ್ಲಿ ಪತ್ತೆಯಾಗಿದ್ದಾರೆ.

ಬೈಂದೂರಿನ ಯಡ್ತರೆ ನಿವಾಸಿ ನರಸಿಂಹ ಯಾನೆ ಸುರೇಶ್ (45) ನ.1ರಂದು ಸಂಜೆ ಕಟ್ಟಿಗೆ ತರಲೆಂದು ಹೊರ ಹೋಗಿದ್ದು ಕತ್ತಲಾದರೂ ಮನೆಗೆ ವಾಪಸಾಗಿರಲಿಲ್ಲ. ಹುಡುಕಾಡುವಾಗ ಯಡ್ತರೆ ಗ್ರಾಮದ ಕಲ್ಲ ಹೊಳೆಯಲ್ಲಿ ತೇಲುತ್ತಿರುವ ರೀತಿಯಲ್ಲಿ ಅವರ ದೇಹ ಪತ್ತೆಯಾಗಿದ್ದು, ಕೂಡಲೇ ಅವರನ್ನು ಹೊಳೆಯಿಂದ ಮೇಲಕ್ಕೆತ್ತಿ ಬೈಂದೂರು ಸರಕಾರಿ ಆಸ್ಪತ್ರೆಗೆ ಕರೆತರಲಾಗಿತ್ತು. ಅವರು ಮೃತಪಟ್ಟಿರುವುದಾಗಿ ಪರೀಕ್ಷಿಸಿದ ವೈದ್ಯರು ಘೋಷಿಸಿದ್ದಾರೆ.

Related Articles

Back to top button
error: Content is protected !!