ಶಿಕ್ಷಣ

ಬಸ್ರೂರು ಶ್ರೀ ಶಾರದಾ ಆಂಗ್ಲ ಮಾಧ್ಯಮ ಶಾಲೆ ವಾರ್ಷಿಕೋತ್ಸವ: “ಬಿಂಬ- 202K” ಬಿಡುಗಡೆ 

Views: 352

ಕುಂದಾಪುರ: ಬ್ರಹ್ಮಶ್ರೀ ಎಜುಕೇಶನ್ ಟ್ರಸ್ಟ್ ಆಡಳಿತದ ಮೊದಲ ವಾರ್ಷಿಕೋತ್ಸವದ ಶೀರ್ಷಿಕೆ ಬಿಂಬ 202K(seeing is believing) ಎಂಬ ಹೆಸರಿನಿಂದ ಶಾಲೆಯಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗಿತ್ತು . ಈ ಸಮಯದಲ್ಲಿ ಶಾಲಾ ಸಂಚಾಲಕರಾದ ಸಂತೋಷ ಶೆಟ್ಟಿಯವರು ಬಿಂಬ ಶೀರ್ಷಿಕೆಯನ್ನು ಅನಾವರಣ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು.

ಎಲ್ಲಾ ತಂಡದ ನಾಯಕ -ನಾಯಕಿಯರು ತಮ್ಮ ತಂಡದ ಬಣ್ಣವನ್ನು ಪ್ರತಿನಿಧಿಸುವ ಪತಾಕೆಯಲ್ಲಿ ಬಿಂಬ202K ಶೀರ್ಷಿಕೆ ಹಾರಿಸಿ ಚಾಲನೆಯನ್ನು ನೀಡಿದರು .ಈ ಸಂದರ್ಭದಲ್ಲಿ ಮಾತನಾಡಿದ ಸಂತೋಷ ಶೆಟ್ಟಿಯವರು ಶೀರ್ಷಿಕೆ ಬಿಂಬ ಎಂದರೆ ತಮ್ಮನ್ನು ತಾವು ನೋಡಿಕೊಳ್ಳುವುದು ಹಾಗೂ ನಿಮ್ಮ ಪ್ರತಿಭೆಯನ್ನು ವ್ಯಕ್ತಪಡಿಸುವುದು ಎಂದು ಹೇಳಿ .ಮಕ್ಕಳಿಗೆ ವಾರ್ಷಿಕೋತ್ಸವದ ದಿನ ಪ್ರತಿಯೊಬ್ಬರು ಭಾಗವಹಿಸಿ ತಮ್ಮನ್ನು ತಾವು ಪ್ರತಿಬಿಂಬಿಸಿಕೊಳ್ಳುವ ಒಂದು ಅತ್ಯದ್ಭುತ ವೇದಿಕೆಯಾಗಿದೆ. ಈ ಒಂದು ವೇದಿಕೆಯನ್ನು ಪ್ರತಿಯೊಬ್ಬರು ಕಡ್ಡಾಯವಾಗಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ಮಕ್ಕಳಿಗೆ ಪ್ರೋತ್ಸಾಹಿಸಿದರು. ಈ ಸಂದರ್ಭದಲ್ಲಿ ಶೈಕ್ಷಣಿಕ ನಿರ್ದೇಶಕರಾದ ಪ್ರಕಾಶ್ ಶೆಟ್ಟಿ ಹಾಗೂ ಪ್ರಾಂಶುಪಾಲರಾದ ಮಮತಾ ಪೂಜಾರಿ, ಆಡಳಿತಾದಿಕಾರಿಯಾದ ಆಶಾ ಶೆಟ್ಟಿ ಇವರು ಉಪಸ್ಥಿತರಿದ್ದರು. ಈ ಸಮಾರಂಭದ ಸಮಯದಲ್ಲಿ ಶಿಕ್ಷಕಿ ಶ್ರೀ ರಾಣಿ ನಿರೂಪಣೆಗೆ ಗೈದರು ಹಾಗೂ ಶಿಕ್ಷಕ ಸುಮಂತ್ ವಂದನಾರ್ಪಣೆ ಸಲ್ಲಿಸಿದರು.

Related Articles

Back to top button