ಇತರೆ

ತಿಂಡಿ ಹಿಡಿದುಕೊಂಡು ಮನೆಗೆ ಹೋಗುವಾಗ ಕಾರು ಢಿಕ್ಕಿ:3 ವರ್ಷದ ಮಗು ಸಾವು

Views: 91

ಕನ್ನಡ ಕರಾವಳಿ ಸುದ್ದಿ: ಬಿ.ಸಿ.ರೋಡು-ಕಡೂರು ಹೆದ್ದಾರಿಯ ಚಾರ್ಮಾಡಿ ಗ್ರಾಮದ ಬೀಟಿಗೆಯಲ್ಲಿ ಕಾರು ಡಿಕ್ಕಿ ಹೊಡೆದು ರಸ್ತೆ ದಾಟಲು ನಿಂತಿದ್ದ 3 ವರ್ಷದ ಬಾಲಕ ಮೃತಪಟ್ಟ ಘಟನೆ ಬುಧವಾರ ಸಂಜೆ ಸಂಭವಿಸಿದೆ.

ಬೀಟಿಗೆ ನಿವಾಸಿ, ಚಾರ್ಮಾಡಿ ಗ್ರಾ.ಪಂ. ಸದಸ್ಯ ಸಿದ್ದೀಕ್ ಯು.ಪಿ. ಅವರ ಪುತ್ರ ಮಹಮ್ಮದ್ ಹಮ್ರನ್ (3) ಮೃತಪಟ್ಟ ಬಾಲಕ

ಮನೆಯ ಮುಂಭಾಗದಲ್ಲಿ ರಸ್ತೆಯ ಇನ್ನೊಂದು ಭಾಗದ ಅಂಗಡಿಯಿಂದ ಅಜ್ಜ ಖರೀದಿಸಿ ಕೊಟ್ಟ ತಿಂಡಿ ಹಿಡಿದು ಮನೆಗೆ ಹೋಗಲು ರಸ್ತೆ ದಾಟಲು ನಿಂತಿದ್ದ ವೇಳೆ ಮೂಡಿಗೆರೆ ಭಾಗದಿಂದ ಆಗಮಿಸಿದ ಕಾರು ಢಿಕ್ಕಿ ಹೊಡೆಯಿತು.

ದೂರಕ್ಕೆ ಎಸೆಯಲ್ಪಟ್ಟು ಗಂಭೀರ ಸ್ಥಿತಿಯಲ್ಲಿದ್ದ ಬಾಲಕನನ್ನು ಆತನ ಅಜ್ಜ ಪಕೀರಬ್ಬ ಹಾಗೂ ಸ್ಥಳೀಯರು ಕಕ್ಕಿಂಜೆ ಆಸ್ಪತ್ರೆಗೆ ತಂದಿದ್ದು, ಪರೀಕ್ಷಿಸಿದ ವೈದ್ಯರು ಬಾಲಕ ಮೃತಪಟ್ಟಿರುವುದಾಗಿ ತಿಳಿಸಿದರು. ಮೃತದೇಹವನ್ನು ಬೆಳ್ತಂಗಡಿ ಆಸ್ಪತ್ರೆಯ ಶವಾಗಾರಕ್ಕೆ ತರಲಾಯಿತು.

ಶವಾಗಾರಕ್ಕೆ ಬೆಳ್ತಂಗಡಿ ಡಿವೈಎಸ್ಪಿ ಇನ್ಸ್‌ಪೆಕ್ಟರ್ ರೋಹಿಣಿ ಸಿ.ಕೆ., ಸುಬ್ಬಾಪುರ ಮಠ ಮೊದಲಾದವರು ಭೇಟಿ ನೀಡಿದರು.

 

Related Articles

Back to top button
error: Content is protected !!