ತಾಳಿ ಕಟ್ಟುವಂತೆ ದುಂಬಾಲು ಬಿದ್ದ ಮಹಿಳೆಯನ್ನು ಇರಿದು ಹತ್ಯೆಗೈದ ಪ್ರಿಯಕರ
Views: 161
ಕನ್ನಡ ಕರಾವಳಿ ಸುದ್ದಿ: ತಾಳಿ ಕಟ್ಟುವಂತೆ ದುಂಬಾಲು ಬಿದ್ದ ವಿಚ್ಛೇದಿತ ಮಹಿಳೆಯನ್ನು ಚಾಕುವಿನಿಂದ ಇರಿದು ಪ್ರಿಯಕರ ಹತ್ಯೆ ಮಾಡಿರುವ ಘಟನೆ ಕೆಜಿ ಹಳ್ಳಿಯಲ್ಲಿ ನಡೆದಿದೆ.
ಹತ್ಯೆಗೀಡಾದ ಮಹಿಳೆಯನ್ನು ರೇಣುಕಾ ಎನ್ನಲಾಗಿದ್ದು, ಆರೋಪಿಯನ್ನು ಕುಟ್ಟಿ ಎಂದು ಗುರುತಿಸಲಾಗಿದೆ. ಫೈನಾನ್ಸ್ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ
ಮೃತ ಮಹಿಳೆಗೆ ಮದುವೆಯಾಗಿ ಒಂದು ಮಗುವಿತ್ತು. ಆದರೆ ಗಂಡನೊಂದಿಗೆ ವಿಚ್ಛೇದನ ಪಡೆದಿದ್ದರು. ಕೆಜಿ ಹಳ್ಳಿಯ ಪಿಳ್ಳಣ್ಣ ಗಾರ್ಡನ್‌ನಲ್ಲಿ ಮಗುವಿನೊಂದಿಗೆ ಒಬ್ಬಂಟಿಯಾಗಿ ವಾಸಿಸುತ್ತಿದ್ದರು. ಈ ನಡುವೆ ಮೃತ ರೇಣುಕಾಗೆ ಅದೇ ಏರಿಯಾದಲ್ಲಿದ್ದ ಆರೋಪಿ ಕುಟ್ಟಿ ಪರಿಚಯವಾಗಿತ್ತು. ಬಳಿಕ ಇಬ್ಬರ ನಡುವೆ ಪ್ರೀತಿಯೂ ಬೆಳೆದಿತ್ತು.
ಕೆಲ ದಿನಗಳ ಬಳಿಕ ಮೃತ ರೇಣುಕಾ ಕುಟ್ಟಿಯನ್ನು ಮದುವೆಯಾಗು ಎಂದು ದುಂಬಾಲು ಬಿದ್ದಿದ್ದಳು. ನೀನು ಟೈಮ್ ಪಾಸ್‌ಗಾಗಿ ಪ್ರೀತಿ ಮಾಡುವುದೆಲ್ಲ ಬೇಡ, ಮದುವೆಯಾಗು ಎನ್ನುತ್ತಿದ್ದಳಂತೆ. ಇದರಿಂದ ಕುಟ್ಟಿ ರೊಚ್ಚಿಗೆದ್ದಿದ್ದ. ಘಟನೆಯಾದ ದಿನ ರೇಣುಕಾ ಕೆಲಸ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದಳು. ಈ ವೇಳೆ ಕುಟ್ಟಿ ರೇಣುಕಾಳನ್ನು ತಡೆದು, ನಿನ್ನ ಜೊತೆ ಮಾತಾಡಬೇಕು ಬಾ ಎಂದು ಪಿಳ್ಳಣ್ಣ ಗಾರ್ಡನ್‌ನ ಸರ್ಕಾರಿ ಶಾಲೆಯ ಬಳಿ ಕರೆದುಕೊಂಡು ಹೋಗಿದ್ದ. ಅಲ್ಲಿ ಚಾಕುವಿನಿಂದ ಇರಿದು ಸಾರ್ವಜನಿಕವಾಗಿ ಹತ್ಯೆ ಮಾಡಿ, ಪರಾರಿಯಾಗಿದ್ದಾನೆ.
ಕೂಡಲೇ ಸ್ಥಳೀಯರು ರೇಣುಕಾಳನ್ನು ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಿದ್ದರೂ ಕೂಡ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಕೆಜೆ ಹಳ್ಳಿ ಪೊಲೀಸರು ಆರೋಪಿ ಕುಟ್ಟಿಯನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸ್ತಿದ್ದಾರೆ. ಕುಟ್ಟಿ ರೇಣುಕಾಳ ಹಿಂದೆ ಬಿದ್ದಿದ್ದು, ಮದುವೆಯಾಗೋದಕ್ಕೆ ರೇಣುಕಾ ಒಪ್ಪದಿದ್ದಾಗ ಕೊಲೆ ಮಾಡಿರೋದಾಗಿ ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ
.






