ಚಲಿಸುತ್ತಿದ್ದ ಬಸ್‌ನಲ್ಲೇ ಪತಿ ಸಾವು: ಮಾರ್ಗ ಮಧ್ಯೆಯೇ ಶವ ಇಳಿಸಿ ಹೋದ ಸಿಬ್ಬಂದಿ
Views: 140
ಕನ್ನಡ ಕರಾವಳಿ ಸುದ್ದಿ: ಚಲಿಸುತ್ತಿದ್ದ ಬಸ್‌ನಲ್ಲೇ ಹೃದಯಾಘಾತದಿಂದ ಸಾವನ್ನಪ್ಪಿದ ವ್ಯಕ್ತಿಯ ಮೃತದೇಹವನ್ನು ಬಸ್ ಸಿಬ್ಬಂದಿ ದಾರಿ ಮಧ್ಯೆಯೇ ಇಳಿಸಿ ಮುಂದೆ ಸಾಗಿದ್ದು, ಪತಿಯ ಮೃತದೇಹವನ್ನು ಹೇಗೆ ಸಾಗಿಸುವುದೆಂದು ಗೊತ್ತಾಗದೆ ಪತ್ನಿ ತೀವ್ರ ಸಂಕಟ ಅನುಭವಿಸಿದ ನಡೆಸಿದ ಘಟನೆ ಒಡಿಶಾದಲ್ಲಿ ನಡೆದಿದೆ.
ಪತಿಯ ಮೃತದೇಹವನ್ನು ಸಾಗಿಸುವುದು ಹೇಗೆಂದು ಗೊತ್ತಾಗದೆ ಪತ್ನಿ ಗಂಟೆಗಟ್ಟಲೆ ರಸ್ತೆ ಪಕ್ಕದಲ್ಲೇ ಕುಳಿತಿದ್ದರು. ಯಾರ ಸಹಾಯ ಕೇಳಬೇಕು? ಹೇಗೆ ಸಹಾಯ ಕೇಳಬೇಕು? ರಸ್ತೆ ಮಧ್ಯೆ ನನಗೆ ಯಾರು ಸಹಾಯ ಮಾಡುವರು? ಎಂದೆಲ್ಲ ತನ್ನಷ್ಟಕ್ಕೆ ಹೇಳುತ್ತಾ, ಅಳುತ್ತಾ, ತನ್ನ ಸನಿಹ ಬಂದ ಜನರ ಬಳಿ ಮನಸ್ಸಿನ ತೊಳಲಾಟ ಹೇಳುತ್ತಿದ್ದರಂತೆ. ಆದರೆ, ಜನರು ಈ ದೃಶ್ಯ ನೋಡಿ ಸುಮ್ಮನೆ ಹೋಗುತ್ತಿದ್ದರೇ ವಿನಃ ಯಾರೂ ಮೃತದೇಹವನ್ನು ಸಾಗಿಸಲು ನೆರವಾಗಲಿಲ್ಲ. ಕೊನೆಗೆ ಸನಾತನ್ ಮುದುಲಿ ಎಂಬ ವ್ಯಕ್ತಿಯ ಸಹಾಯದಿಂದ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಲಾಯಿತು ಎಂದು ತಿಳಿದು ಬಂದಿದೆ.
ಪತಿ, ಪತ್ನಿ ಇಬ್ಬರೂ ಬರಿಪಾದ ಎಂಬಲ್ಲಿಗೆ ಹೋಗಲು ಚಾಂಡಿಖೋಲ್‌ಗೆ ಹೋಗುವ ಖಾಸಗಿ ಬಸ್ ಹತ್ತಿದ್ದರು. ದುಹುರಿಯಾ ಚಕ್ ಸಮೀಪ ಪತಿ ಹೃದಯಾಘಾತವಾಗಿ ಮೃತಪಟ್ಟಿದ್ದರು. ಬಸ್ ಸಿಬ್ಬಂದಿ ಮೃತದೇಹದೊಂದಿಗೆ ಪತ್ನಿಯನ್ನು ಬಸ್‌ನಿಂದಿಳಿಸಿ ಮುಂದೆ ಸಾಗಿದ್ದಾರೆ. ಈ ವೇಳೆ ಪತ್ನಿಗೆ ಏನು ಮಾಡಬೇಕೆಂದು ತೋಚದೆ ಅವರಿವರ ಸಹಾಯಕ್ಕೆ ಕಾಯುತ್ತಿದ್ದರು. ರಸ್ತೆ ಪಕ್ಕ ಶವ ಇಟ್ಟುಕೊಂಡು ಹಾಗೆಯೇ ಕಾಯುತ್ತಿದ್ದರು. ಕೆಲವರು ಬಂದು ಏನಾಯಿತೆಂದು ಕೇಳಿದಾಗ, ಮಹಿಳೆ ಸ್ಥಳೀಯ ಭಾಷೆಯಲ್ಲಿ ಉತ್ತರಿಸುತ್ತಿದ್ದರಿಂದ ಅವರಿಗೆ ಅರ್ಥವಾಗುತ್ತಿರಲಿಲ್ಲ. ಆದರೆ, ಈ ಸುದ್ದಿ ತಿಳಿದು ದುಹುರಿಯಾ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಸನಾತನ್ ಮುದುಲಿ ಎಂಬವರು ಸ್ಥಳಕ್ಕೆ ಬಂದು ಮಹಿಳೆಯ ಕಷ್ಟ ಕೇಳಿದ್ದಾರೆ. ಈ ಸಂದರ್ಭದಲ್ಲಿ ಮಹಿಳೆ ತನ್ನ ಅಸಹಾಯಕತೆ ಹಾಗೂ ತೊಳಲಾಟವನ್ನು ಹೇಳಿಕೊಂಡಿದ್ದಾರೆ. ಕೂಡಲೇ ಮೃತ ದೇಹವನ್ನು ಆಸ್ಪತ್ರೆಗೆ ಸಾಗಿಸಲಾಯಿತು.
“






