ಇತರೆ

ಗಂಡೆಂದು ನಂಬಿ ತಾಳಿ ಕಟ್ಟಿಸಿಕೊಂಡ ವಧು; ವರನ ಅಸಲಿ ವಿಚಾರ ಬಹಿರಂಗ !

Views: 56

ಕನ್ನಡ ಕರಾವಳಿ ಸುದ್ದಿ: ಮದುವೆಯ ವಿಧಿವಿಧಾನಗಳು ಮುಗಿದು ಇನ್ನೇನು ಬೀಳ್ಕೊಡುಗೆ ಸಮಾರಂಭ ನಡೆಯಬೇಕಿದ್ದಾಗ ವರನು ತೃತೀಯಲಿಂಗಿ ಎಂಬ ವಿಚಾರ ಬೆಳಕಿಗೆ ಬಂದ ಘಟನೆ ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯಲ್ಲಿ ನಡೆದಿದೆ.

ವರ ರಿಶು ಮತ್ತು ಸ್ಥಳೀಯ ಯುವತಿಯ ಮದುವೆಯ ಮೆರವಣಿಗೆ ಅದ್ದೂರಿಯಾಗಿ ನಡೆದಿತ್ತು. ತಾಳಿ ಕಟ್ಟುವುದು ಸೇರಿದಂತೆ ಸಪ್ತಪದಿಯ ವಿಧಿವಿಧಾನಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಂಡಿದ್ದವು. ಮಾರನೇ ದಿನ ಬೆಳಿಗ್ಗೆ ವಧುವಿನ ಬೀಳ್ಕೊಡುಗೆ ಸಿದ್ಧತೆ ನಡೆಯುತ್ತಿದ್ದಾಗ, ಸಂಪ್ರದಾಯದಂತೆ ಉಡುಗೊರೆ ಪಡೆಯಲು ತೃತೀಯಲಿಂಗಿ ಸಮುದಾಯದವರು ಸ್ಥಳಕ್ಕೆ ಆಗಮಿಸಿದ್ದರು. ಅವರು ವರನನ್ನು ಗುರುತಿಸಿ, ಈತ ಹಿಂದೆ ತಮ್ಮ ತಂಡದಲ್ಲೇ ಇದ್ದ ಎಂದು ಬಹಿರಂಗಪಡಿಸಿದರು.

ಈ ಸುದ್ದಿ ತಿಳಿಯುತ್ತಿದ್ದಂತೆ ವಧುವಿನ ಕಡೆಯವರು ಆಕ್ರೋಶಗೊಂಡು ವರ ಮತ್ತು ಆತನ ಕಡೆಯವರನ್ನು ಬಂಧಿಸಿಟ್ಟಿದ್ದರು. ವರ ಈ ವಿಷಯ ಮುಚ್ಚಿಡಲು ಮಂಗಳಮುಖಿಯರಿಗೆ 25 ಸಾವಿರ ಹಣ ನೀಡಲು ಮುಂದಾಗಿದ್ದರು ಎನ್ನಲಾಗಿದೆ. ಕೊನೆಗೆ ಮದುವೆಗೆ ತಗುಲಿದ ವೆಚ್ಚವನ್ನು ವರನ ಕಡೆಯವರು ನೀಡುತ್ತಿದ್ದಂತೆ ಮಂಗಳಮುಖಿಯರು ರಿಶುವನ್ನು ತಮ್ಮ ಜತೆ ಕರೆದೊಯ್ದಿದ್ದಾರೆ.

ಪ್ರಕರಣ ದಾಖಲಿಸಿದ್ರೆ ಅವಮಾನ ಎನ್ನುವ ಕಾರಣಕ್ಕೆ ವಧು ಕಡೆಯವರು ಯಾವುದೇ ಪ್ರಕರಣ ದಾಖಲಿಸಲಿಲ್ಲ. ಈ ಸುದ್ದಿಯು ಸಾಮಾಜಿಕ ಜಾಲತಾಣಗಳಲ್ಲಿ ಬಹಳ ವೈರಲ್ ಆಗಿದ್ದು, ಮದುವೆಗೂ ಮುನ್ನ ಪರಸ್ಪರರ ಬಗ್ಗೆ ಸರಿಯಾದ ವಿಚಾರಣೆ ಮಾಡಬೇಕೆಂಬ ಚರ್ಚೆಗೆ ಕಾರಣವಾಗಿದೆ.

Related Articles

Back to top button
error: Content is protected !!