ಕೋಟ ವಿವೇಕ ವಿದ್ಯಾ ಸಂಸ್ಥೆ: ಮಾದಕ ವಸ್ತುಗಳ ವಿರುದ್ಧ ಜಾಗೃತಿ ಅಭಿಯಾನ “ವಾಗ್ದಾನ”

Views: 31
ಕನ್ನಡ ಕರಾವಳಿ ಸುದ್ದಿ: ಟೀಂ ಅಭಿಮತ ಮತ್ತು ವಿವೇಕ ಪದವಿಪೂರ್ವ ಕಾಲೇಜ್ ಇವರ ಸಂಯುಕ್ತ ಆಶ್ರಯದಲ್ಲಿ ವಿವೇಕ ವಿದ್ಯಾಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮ ‘ವಾಗ್ದಾನ’ ಮಾದಕ ವಸ್ತುಗಳ ಬಗ್ಗೆ ಮಾಹಿತಿ ಮತ್ತು ಅರಿವು ಮೂಡಿಸುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಡಾಕ್ಟರ ವಿರೂಪಾಕ್ಷ ದೇವರಮನೆ, ಎ ವಿ ಬಾಳಿಗ ಸ್ಮಾರಕ ಆಸ್ಪತ್ರೆ ಯ ಖ್ಯಾತ ಮನೋರೋಗ ತಜ್ಞರು, ವಿದ್ಯಾರ್ಥಿಗಳಿಗೆ ತಂಬಾಕು ಸೇವನೆ, ಮದ್ಯಪಾನ ಮತ್ತು ಮಾದಕ ವಸ್ತುಗಳ ಸೇವನೆ ವಿರುದ್ಧ ಜಾಗೃತಿ ಮೂಡಿಸಿದರು. ಇದರ ಸೇವನೆಯಿಂದ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮ ಮತ್ತು ಸಮಾಜಕ್ಕೆ ಆಗುವ ತೊಂದರೆ ಬಗ್ಗೆ ತಿಳಿಸಿದರು.
ವಿವೇಕ ಪದವಿಪೂರ್ವ ಪೂರ್ವ ಕಾಲೇಜಿನ ಪ್ರಾಂಶುಪಾಲ ಜಗದೀಶ್ ನಾವಡ ಸ್ವಾಗತಿಸಿದರು. ಪ್ರಸ್ತಾವನೆಯನ್ನು ಟೀಂ ಅಭಿಮತದ ಸಂಚಾಲಕ, ಖ್ಯಾತ ಪತ್ರಕರ್ತ ಶ್ರೀ ವಸಂತ ಗಿಳಿಯಾರ್ ಪ್ರಸ್ತಾವನೆಗೈದರು. ಸಂಸ್ಥೆಯ ಹಿಂದಿನ ವಿದ್ಯಾರ್ಥಿ, ರಾಷ್ಟ್ರೀಯ ಮಟ್ಟದಲ್ಲಿ ಭಾರ ಎತ್ತುವ ಸ್ಪರ್ಧೆಯಲ್ಲಿ ಮಿಂಚಿದ ಶ್ರೀ ಶರತ್ ಕುಮಾರ್ ಶೆಟ್ಟಿ ವಿದ್ಯಾರ್ಥಿಗಳಿಗೆ ಇದರ ವಿರುದ್ಧ ವಾಗ್ದಾನವನ್ನು ಬೋಧಿಸಿದರು. ಸಂಸ್ಥೆಯ ವಾಣಿಜ್ಯ ಶಾಸ್ತ್ರದ ಉಪನ್ಯಾಸಕ ಶ್ರೀ ಸಂಜೀವ ಕಾರ್ಯಕ್ರಮ ನಿರೂಪಿಸಿದರು. ಟೀಂ ಅಭಿಮತದ ಸದಸ್ಯರಾದ ರಾಘವೇಂದ್ರ ರಾಜ್ ಸಾಸ್ತಾನ ಧನ್ಯವಾದ ಸಮರ್ಪಿಸಿದರು.