ಶಿಕ್ಷಣ

ಕೋಟ ಪದವಿ ಕಾಲೇಜಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆ, ಕೌಶಲ್ಯಾಭಿವೃದ್ಧಿ ತರಬೇತಿಯ ಸಮಾರೋಪ 

Views: 28

ಕೋಟ: ಲಕ್ಷ್ಮೀ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜು ಕೋಟ-ಪಡುಕರೆ ಮತ್ತು ನರೇನ್ಅಕಾಡೆಮಿ ಬ್ರಹ್ಮಾವರ ಇವರ ಸಂಯುಕ್ತಾಶ್ರಯದಲ್ಲಿ ದಿನಾಂಕ: 16.8.2024ರಿಂದ 05.09.2024ರ ವರೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಕೌಶಲ್ಯಾಭಿವೃದ್ಧಿ ತರಬೇತಿಯನ್ನು ಹಮ್ಮಿಕೊಳ್ಳಲಾಗಿದ್ದು, ದಿನಾಂಕ: 05.09.2024 ರಂದು ನಡೆದ ಸಮಾರೋಪ ಸಮಾರಂಭದಲ್ಲಿ ನರೇನ್ಅಕಾಡೆಮಿಯ ಮುಖ್ಯ ನಿರ್ವಹಣಾಧಿಕಾರಿ ಶ್ರೀ ಚಂದ್ರಕಾಂತ್ಅವರು ಮಾತನಾಡಿ, ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಪ್ರಯೋಜನವನ್ನು ಇನ್ನಷ್ಟು ಫಲಕಾರಿಗೊಳಿಸಬೇಕಾದರೆ IAS, KAS ಹಾಗೂ ಇತರ ಸರಕಾರಿ ಹುದ್ದೆಗಳಿಗೆ ಪೂರ್ವ ಸಿದ್ದತೆಯನ್ನು ಪದವಿ ಹಂತದಲ್ಲಿ ಮಾಡಬೇಕಾದ ಅವಶ್ಯಕತೆ ಇದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶ್ರೀ ಚಂದ್ರಕಾಂತ್ಇವರ ಸೇವೆಯನ್ನು ಗುರುತಿಸಿ, ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಂಶುಪಾಲರಾದ ಪ್ರೊ. ಸುನೀತ ವಿರವರು ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗರ್ಶನವನ್ನು ಪದವಿಯ ಆರಂಭದ ಹಂತದಲ್ಲಿ ನೀಡಿದಾಗ ಅವರು ಹೆಚ್ಚು ಹೆಚ್ಚು ಸರಕಾರಿ ಹುದ್ದೆಗಳಿಗೆ ಸ್ಪರ್ಧಿಸುವ ಪ್ರಯತ್ನ ಮಾಡುವಂತೆ ಪ್ರೇರೇಪಿಸಬಹುದೆಂದು ಹೇಳಿದರು.

ಕಾರ್ಯಕ್ರಮದಲ್ಲಿವಿದ್ಯಾರ್ಥಿಕ್ಷೇಮಪಾಲನಾಧಿಕಾರಿ ಪ್ರೊ. ರಮೇಶ ಆಚಾರ್, ಕಾರ್ಯಕ್ರಮದ ಸಂಘಟಕರಾದ ಡಾ. ಸುಬ್ರಮಣ್ಯ ಎ, ಪ್ರಾಧ್ಯಾಪಕರಾದ ಡಾ. ಶಂಕರ ನಾಯ್ಕ ಬಿ, ಶ್ರೀ ಮುರಳಿ ಎಂ. ಜಿ, ಶ್ರೀ ರಾಜಣ್ಣ ಎಂ, ಕು. ಸುಷ್ಮಾ, ಶ್ರೀಮತಿ ಆರತಿ ಹಾಗೂ ಉನ್ನತಿ ತರಬೇತಿದಾರ ಶ್ರೀ ಅರವಿಂದರವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಶಿಕ್ಷಕರ ದಿನಾಚರಣೆಯನ್ನು ಆಚರಿಸಿ, ಗುರುಗಳನ್ನು ವಂದಿಸಿದರು. ಪ್ರಥಮ ಬಿ.ಸಿ.ಎ. ವಿದ್ಯಾರ್ಥಿನಿ ತ್ರಿಶಾ ಮತ್ತು ಬಿ.ಎ ವಿದ್ಯಾರ್ಥಿನಿ ಸಹನಾ ಸ್ಪರ್ಧಾತ್ಮಕ ತರಬೇತಿ ಕಾರ್ಯಕ್ರಮವು ಪರಿಣಾಮಕಾರಿಯಾಗಿದೆ ಎಂದು ಅನಿಸಿಕೆಯಲ್ಲಿ ಹೇಳಿದರು. ಕಾರ್ಯಕ್ರಮವನ್ನು ಪ್ರಥಮ ಬಿ.ಸಿ.ಎ. ಶಮಿತಾರವರು ನಿರೂಪಿಸಿದರು. ಕೀರ್ತನ ಪ್ರಥಮ ಬಿ.ಸಿ.ಎ. ಸ್ವಾಗತಿಸಿ, ಸ್ನೇಹ ಪ್ರಥಮ ಬಿ.ಕಾಂ ವಂದಿಸಿದರು.

Related Articles

Back to top button