ಇತರೆ
ಕುಂದಾಪುರ: ಬಸ್ ಕಂಡಕ್ಟರ್ ಹೃದಯಾಘಾತದಿಂದ ಸಾವು
Views: 348
ಕನ್ನಡ ಕರಾವಳಿ ಸುದ್ದಿ: ಬಸ್ ನಿರ್ವಾಹಕನಾಗಿದ್ದ ಆನಗಳ್ಳಿ ಗ್ರಾಮದ ಸುರೇಶ್ ಖಾರ್ವಿ (45) ಅವರು ಡಿ. 6ರಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಮೃತರು ಪತ್ನಿ ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.
ನ. 11ರಂದು ಅವರಿಗೆ ಹೃದಯ ಶಸ್ತ್ರಚಿಕಿತ್ಸೆಯಾಗಿದ್ದು ಸ್ಟೆಂಟ್ ಹಾಕಿಸಿ ಕೊಂಡು ಬಂದಿದ್ದರು. ಡಿ. 6ರ ಬೆಳಗ್ಗಿನ ಜಾವ ಅಸ್ವಸ್ಥರಾದ ಅವರನ್ನು ಮನೆಯವರು ಕೂಡಲೇ ಕುಂದಾಪುರದ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದರು. ಪರೀಕ್ಷಿಸಿದ ವೈದ್ಯರು ಅದಾಗಲೇ ಸಾವನ್ನಪ್ಪಿರುವುದಾಗಿ ತಿಳಿಸಿದರು.
ಹೊನ್ನಾವರದ ಕಾಸರಕೋಡು ಮೂಲದವರಾದ ಅವರು ಕುಂದಾಪುರದಲ್ಲಿ ನೆಲೆಸಿದ್ದರು. ಚಿಪ್ಪು ಕಾರ್ಮಿಕನೂ ಆಗಿ ಕೆಲಸ ಮಾಡುತ್ತಿದ್ದರು.






