ಕುಂದಾಪುರ: ಕಾರು- ಸ್ಕೂಟರ್ ಡಿಕ್ಕಿ, ಸ್ಕೂಟರ್ ಸಹಸವಾರೆ ಪತ್ನಿ ಸಾವು, ಪತಿಗೆ ಗಂಭೀರ ಗಾಯ
Views: 312
ಕನ್ನಡ ಕರಾವಳಿ ಸುದ್ದಿ.ಬೈಂದೂರು ತಾಲೂಕಿನ ಯಳಜಿತ್ ಗ್ರಾಮದ ರಾ.ಹೆ. ಕ್ರಾಸ್ ಬಳಿ ಕಾರಿಗೆ ಸ್ಕೂಟರ್ ಡಿಕ್ಕಿಯಾಗಿ ಸಹಸವಾರೆ ಮೃತಪಟ್ಟು, ಸವಾರನಿಗೆ ಗಂಭೀರ ಗಾಯಗೊಂಡ ಘಟನೆ ನಡೆದಿದೆ.
ಬ್ರಹ್ಮಾವರದಿಂದ ಕೊಲ್ಲೂರು ಮಾರ್ಗವಾಗಿ ಗೋಳಿಹೊಳೆಯಲ್ಲಿರುವ ಅವರ ಸಂಬಂಧಿಕರ ಮನೆಗೆ ಕುಟುಂಬಿಕರು ಕಾರಿನಲ್ಲಿ ತೆರಳುತ್ತಿದ್ದ ವೇಳೆ, ಕೊಲ್ಲೂರು ಕಡೆಯಿಂದ ಬೈಂದೂರು ಕಡೆಗೆ ಬರುತ್ತಿದ್ದ ಸ್ಕೂಟರ್ ಸವಾರ ಸುಭಾನ್ ಗೋಳಿಮರ ಕ್ರಾಸ್ ಬಳಿ ತನ್ನ ಸ್ಕೂಟರನ್ನು ತೀರ ಬಲ ಬದಿಗೆ ಚಲಾಯಿಸಿ ಫಿರ್ಯಾಧಿದಾರರ ಕಾರಿಗೆ ಎದುರಿನಿಂದ ಗುದ್ದಿದ್ದ ಪರಿಣಾಮ ಸ್ಕೂಟರ್ ಸವಾರ ಮತ್ತು ಸಹಸವಾರ ಇಬ್ಬರು ರಸ್ತೆಗೆ ಬಿದ್ದಿದ್ದರು.
ಸವಾರ ಹೆಲ್ ಮೇಟ್ ಧರಿಸಿದ್ದು ಆತನ ಕಾಲು ಮತ್ತು ಭುಜಕ್ಕೆ ಪೆಟ್ಟಾಗಿದ್ದು ಹಾಗೂ ಸಹ ಸವಾರಳಿಗೆ ರಸ್ತೆಗೆ ಬಿದ್ದ ಪರಿಣಾಮ ತಲೆಗೆ ಮತ್ತು ಕಾಲಿಗೆ ತೀವ್ರ ಪೆಟ್ಟಾಗಿರುತ್ತದೆ. ಇಬ್ಬರನ್ನೂ ಕುಂದಾಪುರ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಗಾಯಗೊಂಡ ತಸ್ಬೀಯಾ ಬೇಗಂ ಕುಂದಾಪುರ ಆಸ್ಪತ್ರೆಗೆ ಸಾಗಿಸುವ ದಾರಿ ಮದ್ಯದಲ್ಲಿ ಮೃತಪಟ್ಟಿರುವುದು ತಿಳಿದುಬಂದಿದೆ.ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






