ಇತರೆ

ಕುಂದಾಪುರ: ಅಕ್ರಮ ಮರಳು ಸಾಗಾಟ ಪತ್ತೆ, ಟಿಪ್ಪರ್ ವಶಕ್ಕೆ 

Views: 36

ಕನ್ನಡ ಕರಾವಳಿ ಸುದ್ದಿ: ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಮಿನಿ ಟಿಪ್ಪ‌ರ್ ಅನ್ನು ಇಲ್ಲಿನ ಪೊಲೀಸ್ ಠಾಣೆಯ ಸಹಾಯಕ ಉಪನಿರೀಕ್ಷಕ ಧರ್ಮೇಂದ್ರ ಅವರು ರಾತ್ರಿ ಗಸ್ತು ಕರ್ತವ್ಯದಲ್ಲಿದ್ದ ವೇಳೆ ವಶಕ್ಕೆ ಪಡೆದ ಘಟನೆ ವರದಿಯಾಗಿದೆ.

ಹೆಮ್ಮಾಡಿ ನಿವಾಸಿ ಶ್ರೀಧರ್ ‘ಮೂವತ್ತುಮುಡಿ ಕಡೆಯಿಂದ ಹೆಮ್ಮಾಡಿ. ಕಡೆಗೆ ಮಿನಿ ಟಿಪ್ಪರ್ ಚಲಾಯಿಸಿಕೊಂಡು ಬರುತ್ತಿದ್ದ ವೇಳೆ ಪೊಲೀಸರು ಅನುಮಾನಗೊಂಡು ವಾಹನ ನಿಲ್ಲಿಸುವಂತೆ ಸೂಚಿಸಿದ್ದಾರೆ. ಪರಿಶೀಲಿಸಿದಾಗ ಮರಳು ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ.

ಹೊಳೆಯಿಂದ ಕನ್ನಡಕುದ್ರು ಮರಳನ್ನು ಕಳವು ಮಾಡಿಕೊಂಡು ಟಿಪ್ಪರ್‌ನಲ್ಲಿ ತುಂಬಿಸಿ ಪ್ರವೀಣ ದೇವಾಡಿಗರ ಮನೆಗೆ ಸಾಗಿಸುತ್ತಿರುವುದಾಗಿ ಚಾಲಕ ತಿಳಿಸಿದ್ದಾರೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Related Articles

Back to top button
error: Content is protected !!