ಇತರೆ

ಕುಂದಾಪುರ:ಪಿಕ್ ಅಪ್ ವಾಹನದಿಂದ ಆಯತಪ್ಪಿ ಬಿದ್ದು ಸಾವು 

Views: 130

ಕನ್ನಡ ಕರಾವಳಿ ಸುದ್ದಿ:ಪಡುವರಿ ಗ್ರಾಮದ ಮಾಸ್ತಿ ಮನೆ ತಿರುವಿನಲ್ಲಿ ಪಿಕ್ ಅಪ್ ವಾಹನದಿಂದ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ.

ಉಪ್ಪುಂದದ ಮಂಜುನಾಥ (46) ಮೃತಪಟ್ಟವರು.

ವಾಹನದ ಚಾಲಕ ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ ವಾಹನದ ಹಿಂಬದಿ ಕುಳಿತಿದ್ದ ಇವರು ಆಯತಪ್ಪಿ ರಸ್ತೆಗೆ ಬಿದ್ದ ಪರಿಣಾಮ ತಲೆಯ ಹಿಂಭಾಗಕ್ಕೆ ಗಂಭೀರ ಸ್ವರೂಪದ ಗಾಯವಾಗಿ ಪ್ರಜ್ಞೆ ಕಳೆದುಕೊಂಡಿದ್ದರು. ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋದಾಗ ಪರೀಕ್ಷಿಸಿದ ವೈದ್ಯರು ಮಂಜುನಾಥ ಅವರು ಅಷ್ಟರಲ್ಲೇ ಕೊನೆಯುಸಿರೆಳೆದಿರುವುದಾಗಿ ತಿಳಿಸಿದರು. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Related Articles

Back to top button
error: Content is protected !!