ಇತರೆ
ಕುಂದಾಪುರ:ತಾಳೆ ಬೊಂಡ ಮಾರಾಟ ಮಾಡುತ್ತಿರುವಾಲೇ ಹೃದಯಾಘಾತದಿಂದ ಸಾವು
Views: 181
ಕನ್ನಡ ಕರಾವಳಿ ಸುದ್ದಿ: ತಾಳೆ ಬೊಂಡ ಮಾರಾಟ ಮಾಡುತ್ತಿರುವಾಗಲೇ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಸಾವನಪ್ಪಿದ ಘಟನೆ ನಡೆದಿದೆ
ಅಲ್ಪಾಡಿ ಗ್ರಾಮದ ರುದ್ರ (41) ಮೃತಪಟ್ಟವರು.
ಅವರು ಬೆಳ್ವೆ ಗ್ರಾಮದ ತಾರೆಕಟ್ಟೆ ಕ್ರಾಸ್ ಬಳಿ ರಸ್ತೆ ಬದಿಯಲ್ಲಿ ನ. 19ರಂದು ವೃತ್ತಿ ನಿರತರಾಗಿದ್ದ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ರುದ್ರ ಅವರು ಪತ್ನಿ ಲಕ್ಷ್ಮೀ ಜತೆಯಲ್ಲಿ ಎಂದಿನಂತೆ ತಾರೆಕಟ್ಟೆ ಕ್ರಾಸ್ ಬಳಿ ತಾಳೆ ಬೊಂಡ ಮಾರಾಟ ಮಾಡುತ್ತಿದ್ದಾಗ ಒಮ್ಮೆಲೇ ಎದೆ ನೋವು ಕಾಣಿಸಿಕೊಂಡಿತು.ಪತ್ನಿ ತತ್‌ಕ್ಷಣ ಗೋಳಿಯಂಗಡಿಯ ಕ್ಲಿನಿಕ್ ಒಂದಕ್ಕೆ ಕರೆದುಕೊಂಡು ಹೋದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಹಾಲಾಡಿ ಆಸ್ಪತ್ರೆಗೆ ಕರೆದು ಕೊಂಡು ಹೋಗಲಾಯಿತು.
ಪರೀಕ್ಷಿಸಿದ ವೈದ್ಯರು ರುದ್ರ ಅವರು ಅದಾಗಲೇ ಮೃತಪಟ್ಟಿರುವುದ್ದಾಗಿ ತಿಳಿಸಿದರು. ಸಹೋದರ ಸುಜಯ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






