ಕುಂದಾಪುರ:ಕಾಲ್ನಡಿಗೆ ಮೂಲಕ ಸಾಗುತ್ತಿದ್ದಾಗ ಬೈಕ್ ಢಿಕ್ಕಿಯಾಗಿ ಕೋಟೇಶ್ವರದ ಅಯ್ಯಪ್ಪ ಮಾಲಾಧಾರಿ ಸಾವು
Views: 545
ಕನ್ನಡ ಕರಾವಳಿ ಸುದ್ದಿ:ದ್ವಿಚಕ್ರ ವಾಹನ ಢಿಕ್ಕಿಯಾಗಿ ಅಯ್ಯಪ್ಪ ಮಾಲಾಧಾರಿ ಸಾವನಪ್ಪಿದ ಘಟನೆ ಕನ್ನುಕೆರೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಆಭರಣ ಮಳಿಗೆಯ ಸಮೀಪ ನ. 3ರಂದು ಸಂಭವಿಸಿದೆ.
ಕೋಟೇಶ್ವರ ಸಮೀಪದ ಕುಂಬ್ರಿ ನಿವಾಸಿ ಹಾಡಿಮನೆ ಸುರೇಂದ್ರ ಮೊಗವೀರ (35) ಮೃತಪಟ್ಟವರು.ಅವರು ತಂದೆ, ತಾಯಿ ಹಾಗೂ ಸಹೋದರ, ಸಹೋದರಿಯರನ್ನು ಅಗಲಿದ್ದಾರೆ.
ವಿ.3ರಂದು ರವಿವಾರ ಮುಂಜಾನೆ ಸುಮಾರು 15 ಮಂದಿ ಅಯ್ಯಪ್ಪ ಮಾಲಾಧಾರಿಗಳು ಕೋಟೇಶ್ವರದಿಂದ ಹೆದ್ದಾರಿ ಮೂಲಕ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರೀ ದೇಗುಲದೆಡೆಗೆ ಕಾಲ್ನಡಿಗೆ ಮೂಲಕ ಸಾಗುತ್ತಿದ್ದಾಗ ಅತಿ ವೇಗದಿಂದ ಬಂದ ಬೈಕ್ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಅವರ ತಲೆಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು ಸ್ಥಳೀಯರು ಕೂಡಲೇ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅಸುನೀಗಿದ್ದಾರೆ.ಮತ್ತೂಬ್ಬ ಅಯ್ಯಪ್ಪ ವ್ರತಧಾರಿಗೂ ತೀವ್ರ ಸ್ವರೂಪದ ಗಾಯಗಳಾಗಿವೆ.
ಮೃತ ಸುರೇಂದ್ರ ಅವರು ಅವಿವಾಹಿತರಾಗಿದ್ದು, ಕೋಟೇಶ್ವರದಲ್ಲಿ ಬಡಗಿ ವೃತ್ತಿ ನಿವಹಿಸುತ್ತಿದ್ದರು. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






