ಸಾಂಸ್ಕೃತಿಕ

ಹನುಮಂತನ ಪಾತ್ರಕ್ಕೆ ಜೀವ ತುಂಬಲಿದ್ದಾರೆ.. “ಕಾಂತಾರ”ದ ರಿಷಬ್ ಶೆಟ್ಟಿ

Views: 251

ಕನ್ನಡ ಕರಾವಳಿ ಸುದ್ದಿ: ಕಾಂತಾರ ಎಂಬ ಅಮೋಘ ಸಿನಿಮಾ ಮೂಲಕ ಕುಂದಾಪುರದ ಹುಡುಗ ಇಡೀ ಭಾರತೀಯ ಚಿತ್ರರಂಗದಾದ್ಯಂತ ಭಾರಿ ಜನಪ್ರಿಯರಾಗಿರುವ ಡಿವೈನ್ ಸ್ಟಾರ್ ಖ್ಯಾತಿಯ ರಿಷಬ್ ಶೆಟ್ಟಿ ‘ಜೈ ಹನುಮಾನ್’ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಟಾಲಿವುಡ್ ಅಂಗಳದಿಂದ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆದ ಹನುಮಾನ್ ಈಗ ವರ್ಷದಲ್ಲಿ ಸಖತ್ ಸದ್ದು ಮಾಡಿದ ಸಿನಿಮಾ. ಇತ್ತೀಚೆಗೆ ಈ ಚಿತ್ರದ ಸೀಕ್ವೆಲ್ ಅಧಿಕೃತವಾಗಿ ಘೋಷಣೆಯಾಗಿದ್ದು, ಡಿವೈನ್ ಸ್ಟಾರ್ ಹನುಮಾನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಜನಪ್ರಿಯ ನಿರ್ದೇಶಕ ಪ್ರಶಾಂತ್ ವರ್ಮಾ ಆ್ಯಕ್ಷನ್ ಕಟ್ ಹೇಳುತ್ತಿರುವ ಹನುಮಾನ್ ಸಿನಿಮಾದ ಸೀಕ್ವೆಲ್ ಜೈ ಹನುಮಾನ್ನಲ್ಲಿ ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ ಹನುಮನ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ದೀಪಗಳ ಹಬ್ಬದ ಶುಭ ಸಂದರ್ಭ ನಟನ ಫಸ್ಟ್ ಲುಕ್ ಅನಾವರಣಗೊಂಡಿತ್ತು. ಇದೀಗ ಚಿತ್ರದ ನಿರ್ದೇಶಕರು ವಿಶೇಷ ಪೋಸ್ಟ್ವೊಂದನ್ನು ಹಂಚಿಕೊಂಡು ಗಮನ ಸೆಳೆದಿದ್ದಾರೆ.

”ಜೈ ಹನುಮಾನ್ ಫಸ್ಟ್ ಲುಕ್ಗೆ ಬಂದ ಅಪಾರ ಪ್ರೀತಿ ಮತ್ತು ಪ್ರತಿಕ್ರಿಯೆಗಳಿಂದ ಬಹಳ ಸಂತಸವಾಗಿದೆ. ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟ ರಿಷಬ್ ಶೆಟ್ಟಿ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಅವರು ಹನುಮಂತನ ಮೇಲೆ ಹೊಂದಿರುವ ಭಕ್ತಿ ಮತ್ತು ಸಿನಿಮಾಗಳಿಗೆ ಸಂಬಂಧಿಸಿದಂತೆ ಸಾಟಿಯಿಲ್ಲದ ಸಮರ್ಪಣೆ ಈ ಪ್ರಾಜೆಕ್ಟ್ ಅನ್ನು ನಿಜವಾಗಿಯೂ ಜೀವಂತಗೊಳಿಸಿದೆ. ಅವರ ರೂಪಾಂತರ, ಪರಿಪೂರ್ಣತೆ ಮತ್ತು ಅಚಲ ಬದ್ಧತೆಯು ‘ಜೈ ಹನುಮಾನ್’ ಅನ್ನು ನಿಜವಾಗಿಯೂ ಅಸಾಮಾನ್ಯವಾಗಿಸಿದೆ. ಕರ್ನಾಟಕದಿಂದ ಹಿಡಿದು ಪ್ರಪಂಚದಾದ್ಯಂತ, ಅವರು ತಮ್ಮ ಅಭಿಮಾನಿಗಳಿಗೆ ಮರೆಯಲಾಗದ ಅದ್ಭುತ ಅನುಭವವನ್ನು ಸೃಷ್ಟಿಸಲು ಸಜ್ಜಾಗಿದ್ದಾರೆ. ನಿಮಗೆ ನನ್ನ ಅಪಾರ ಧನ್ಯವಾದಗಳು. ನಿಮ್ಮೊಂದಿಗೆ ಈ ಜೈ ಹನುಮಾನ್ ಪ್ರಯಾಣವನ್ನು ಪ್ರಾರಂಭಿಸಲು ಬಹಳ ಉತ್ಸುಕನಾಗಿದ್ದೇನೆ ಸರ್” – ನಿರ್ದೇಶಕ ಪ್ರಶಾಂತ್ ವರ್ಮಾ ಪೋಸ್ಟ್.

ಜೈ ಹನುಮಾನ್ ಶೂಟಿಂಗ್ ಕ್ಷಣದ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದು ಫಸ್ಟ್ ಲುಕ್ ಪೋಸ್ಟರ್ಗಾಗಿ ನಡೆದ ಚಿತ್ರೀಕರಣದಂತೆ ತೋರಿದೆ. ನಿರ್ದೇಶಕರೇ ಹಂಚಿಕೊಂಡಿರುವ ಪೋಸ್ಟ್ ಪ್ರಕಾರ ಸಿನಿಮಾ ಶೂಟಿಂಗ್ ಇನ್ನಷ್ಟೇ ಆರಂಭ ಆಗಬೇಕಿದೆ. ಅದ್ಭುತ ಪೌರಾಣಿಕ ಸಿನಿ ಅನುಭವಕ್ಕಾಗಿ ಅಪಾರ ಸಂಖ್ಯೆಯ ಪ್ರೇಕ್ಷಕರು ಮತ್ತು ಅಭಿಮಾನಿಗಳು ಕಾತರರಾಗಿದ್ದಾರೆ.

 

Related Articles

Back to top button