ಜನಮನ

“ರಾಷ್ಟ್ರೀಯ ಕೈಮಗ್ಗ ದಿನಾಚರಣೆ” ಅಂಗವಾಗಿ ವಿವಿಧ ಸ್ಪರ್ಧೆಗಳು

Views: 3

ದ. ಕ. ಜಿಲ್ಲಾ ಪದ್ಮಶಾಲಿ ಮಹಾಸಭಾ ಮತ್ತು ವಿದ್ಯಾವರ್ಧಕ ಸಂಘದಿಂದ ಜಂಟಿಯಾಗಿ ಕೇಂದ್ರ ಸರಕಾರವು”ಸ್ವದೇಶಿ ಚಳುವಳಿ “ಯ ಸವಿನೆನಪಿಗಾಗಿ  ಘೋಷಿಸಿರುವ “ರಾಷ್ಟ್ರೀಯ ಕೈಮಗ್ಗ ನೇಕಾರರ  ದಿನಾಚರಣೆ”ಯನ್ನು ದಿನಾಂಕ 07-08-2023ರ ಸೋಮವಾರ   ದ. ಕ.ಜಿಲ್ಲೆಯ ಮುಲ್ಕಿ ತಾಲೂಕಿನ ಕಿನ್ನಿಗೋಳಿಯ “ನೇಕಾರ ಸೌಧ”ದಲ್ಲಿ ತಾಳಿಪಾಡಿ ನೇಕಾರರ ಪ್ರಾಥಮಿಕ ಸೇವಾ ಸಹಕಾರಿ ಸಂಘ ಇದರ ಸಹಯೋಗದೊಂದಿಗೆ ಆಚರಣೆ ಮಾಡುವರೇ ತೀರ್ಮಾನಿಸಲಾಗಿದೆ.

ದಿನಾಂಕ 06-08-2023ರ ರವಿವಾರ ಬಾರಕೂರು ‘ಶ್ರೀಬ್ರಹ್ಮಲಿಂಗವೀರಭದ್ರ ಶ್ರೀ ದುರ್ಗಾಪರಮೇಶ್ವರಿ  ದೇವಸ್ಥಾನದಲ್ಲಿ  ವಿವಿಧ ಸ್ಪರ್ಧೆಗಳನ್ನು ಸಮಾಜ ಬಾಂಧವರಿಗಾಗಿ ಸಂಘದ ವತಿಯಿಂದ ಆಯೋಜಿಸಲಾಗಿದೆ.

ಈ ಕಾರ್ಯಕ್ರಮವನ್ನು ದಕ್ಷಿಣ ಕನ್ನಡ, ಉಡುಪಿ ಮತ್ತು  ಕಾಸರಗೋಡು ಜಿಲ್ಲೆಯಲ್ಲಿ ಪಸರಿಸಿದ ಪದ್ಮಶಾಲಿ/ಶ ಶೆಟ್ಟಿಗಾರರನ್ನು 16 ದೇವಸ್ಥಾನಗಳ 13 ವಲಯ ಸಂಘಟನೆಗಳ ಮತ್ತು7 ನೇಕಾರರ ಸೊಸೈಟಿಗಳನ್ನು ಒಳಗೊಂಡಂತೆ ಕೈಮಗ್ಗ ನೇಕಾರಿಕೆಗೆ ಪ್ರೋತ್ಸಾಹ ನೀಡಿ ನೇಕಾರರನ್ನು  ಒಂದುಗೂಡಿಸುವುದು, ಅವರ ಕಷ್ಟ ಸುಖಕ್ಕೆ ಸ್ಪಂದಿಸುವುದು ನಮ್ಮಉಭಯ ಸಂಘಗಳ (76ವರ್ಷ ಪೂರಿಸಿರುವ ಮಹಾಸಭಾ, 32 ವರ್ಷ ಪೂರೈಸಿರುವ ವಿದ್ಯಾವರ್ಧಕ ಸಂಘ) ಆದ್ಯ ಕರ್ತವ್ಯವಾಗಿದೆ. ಈ ಕಾರ್ಯಕ್ರಮದಲ್ಲಿ 3 ಜಿಲ್ಲೆಯ ಸಮಸ್ತ ನೇಕಾರರು, ಸಮಾಜ ಬಾಂಧವರು ತಪ್ಪದೇ ಉಪಸ್ಥಿತರಿದ್ದು ನಮ್ಮೊಂದಿಗೆ ಕೈಜೋಡಿಸಿ, ಸಂಘದ ಕಾರ್ಯಕ್ರಮವನ್ನು ಸಂಪೂರ್ಣ ಯಶಸ್ವಿ ಗೊಳಿಸಬೇಕೆಂದೂ, ಸಂಘಟನೆಗೆ ಶಕ್ತಿ ತುಂಬಬೇಕೆಂದು ಉಭಯ ಸಂಘದ ಅಧ್ಯಕ್ಷರು        ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related Articles

Back to top button