ಇತರೆ
ಬಟ್ಟೆ ತೊಳೆಯಲು ಹೋಗಿದ್ದ ತಾಯಿ ಮಕ್ಕಳಿಬ್ಬರು ನೀರಿನಲ್ಲಿ ಮುಳುಗಿ ದುರ್ಮರಣ

Views: 0
ಬಟ್ಟೆ ತೊಳೆಯಲು ಹೋಗಿದ್ದ ತಾಯಿ ಮಕ್ಕಳಿಬ್ಬರು ನೀರಿನಲ್ಲಿ ಮುಳುಗಿ ದುರ್ಮರಣ
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಕೇಡಗಿ ಗ್ರಾಮದ ಬಳಿಯ ಭೀಮ ನದಿಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದಾಗ ನದಿಯಲ್ಲಿ ಮುಳುಗಿ ತಾಯಿ ಮತ್ತು ಇಬ್ಬರು ಮಕ್ಕಳು ನೀರು ಪಾಲಾದ ಘಟನೆ ಸಂಭವಿಸಿದೆ.
ಮೃತರನ್ನು (38) ವರ್ಷದ ಗೀತಾ( 12) ವರ್ಷದ ಶೋಭಿತ (10 )ವರ್ಷದ ವಾಸುದೇವ ಎಂದು ಗುರುತಿಸಲಾಗಿದೆ.
ತನ್ನಿಬ್ಬರು ಮಕ್ಕಳನ್ನು ನದಿಗೆ ತೆರಳಿದ್ದಾಗ ಈ ಘಟನೆ ಸಂಭವಿಸಿದೆ..
ಬಟ್ಟೆ ತೊಳೆಯುವಾಗ ನೀರಿಗೆ ಇಳಿದಿದ್ದ ವಾಸುದೇವ ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಿದ್ದಾನೆ. ಈ ಸಂದರ್ಭದಲ್ಲಿ ಶೋಬಿತ ರಕ್ಷಣೆಗೆಂದು ತೆರಳಿದಾಗ ದುರ್ಘಟನೆ ಸಂಭವಿಸಿದೆ..
ಮಕ್ಕಳಿಬ್ಬರು ನೀರಿನಲ್ಲಿ ಮುಳುಗುತ್ತಿರುವುದನ್ನು ಕಂಡ ಗೀತಾ ಅವರನ್ನು ರಕ್ಷಿಸಲು ನೀರಿಗೆ ಧುಮುಕಿದ್ದಾಳೆ ಈಜು ಬರದೇ ಇರೋದರಿಂದ ಮೂವರು ನೀರು ಪಾಲಾಗಿದ್ದಾರೆ..