ಪತಿ ಜೊತೆ ಅಕ್ರಮ ಸಂಬಂಧ, ಪತ್ನಿ ಭದ್ರಕಾಳಿಯಾಗಿ ಯುವತಿ ಮನೆ ಮೇಲೆ ದಾಳಿ, ಪೀಸ್ಪೀಸ್

Views: 219
ಬೆಂಗಳೂರು: ಪತಿಯ ಜೊತೆ ಯುವತಿಯೊಬ್ಬಳು ಅಕ್ರಮ ಸಂಬಂಧ ಹೊಂದಿದ್ದಾರೆಂದು ಆರೋಪಿಸಿ ಪತ್ನಿ ಗೂಂಡಾಗಿರಿ ಪ್ರದರ್ಶಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ರಾತ್ರೋರಾತ್ರಿ ಯುವತಿ ಮನೆಯ ಮೇಲೆ ದಾಳಿ ಮಾಡಿ ಕಿಟಕಿ, ಪೀಠೋಪಕರಣ, ಕಾರು ಸೇರಿದಂತೆ ಎಲ್ಲಾ ಪೀಸ್ ಪೀಸ್ ಮಾಡಿದ್ದಾರೆ.
ಮನೆಯೊಂದರ ಮೇಲೆ ದಾಳಿ ಮಾಡಿ ಕಿಟಕಿ, 2 ಕಾರುಗಳ ಗ್ಲಾಸ್ಗಳನ್ನು ಪುಡಿ ಮಾಡ್ತಿರೋದಕ್ಕೆ ಕಾರಣ ಪತಿಯ ಅಕ್ರಮ ಸಂಬಂಧ. ಈಕೆ ಹೆಸರು ಸಮಂತಾ, ಉದ್ಯಮಿ ಶರಣ್ ಎಂಬುವವರ ಪತ್ನಿ. ಹಾಗೂ ಇವರು ಶರಣ್ ಜೊತೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದಾರೆನ್ನಲಾದ ಯುವತಿ.
ಪತಿ ಜೊತೆ ಯುವತಿಯೊಬ್ಬಳು ಅಕ್ರಮ ಸಂಬಂಧವಿಟ್ಟುಕೊಂಡಿದ್ದಾರೆ ಅಂತ ಆರೋಪಿಸಿ ಸಮಂತಾ ಕಡೆಯವರು ಯುವತಿಯ ಮನೆ ಮೇಲೆ ದಾಳಿ ಮಾಡಿದ್ದಾರಂತೆ. ಬೆಂಗಳೂರಿನ ಬಿಳೇಶಿವಾಲೆ ಸಮೀಪದ ಮಾರುತಿ ಲೇಔಟ್ನಲ್ಲಿರುವ ಮನೆಯ ಕಿಟಕಿ, ಬಾಗಿಲು, ಎರಡು ಕಾರಿನ ಗಾಜುಗಳನ್ನು ಹೊಡೆದು ಪುಡಿ ಪುಡಿ ಮಾಡಿದ್ದಾರೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಅಂತ ಯುವತಿ ಆರೋಪಿಸಿದ್ದಾರೆ. ಮಾತ್ರವಲ್ಲದೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಯುವತಿ ಕೊತ್ತನೂರು ಠಾಣೆಯಲ್ಲಿ ಸಮಂತಾ, ಕೆಂಪರಾಜು, ಶರತ್ ವಿರುದ್ಧ ದೂರು ನೀಡಿದ್ದಾರೆ.
ಇನ್ನು ಇತ್ತ ಯುವತಿ ವಿರುದ್ಧ ಕಾನೂನಾತ್ಮಕ ಹೋರಾಟ ನಡೆಸುವುದಾಗಿ ಶರಣ್ ಪತ್ನಿ ಸಮಂತ ಹೇಳಿದ್ದಾರೆ. ಮಾತ್ರವಲ್ಲದೆ ಅವಳಿಗೆ ನನ್ನ ಪತಿಯಿಂದ ಒಂದರಿಂದ ಎರಡು ಕೋಟಿವರೆಗೆ ಹಣ ಹೋಗಿದೆ ಅಂತ ಆರೋಪಿಸಿದ್ದಾರೆ. ಸದ್ಯ ಹಾನಿಗೊಳಗಾದ ಯುವತಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು, ನಷ್ಟ ಭರಿಸಬೇಕೆಂದು ಆಗ್ರಹಿಸಿದ್ದಾರೆ