ಯುವಜನ

ನಾಪತ್ತೆಯಾಗಿದ್ದ SSLC ವಿದ್ಯಾರ್ಥಿ ಶವ ಭದ್ರಾನದಿಯಲ್ಲಿ ಪತ್ತೆ

Views: 103

ಕನ್ನಡ ಕರಾವಳಿ ಸುದ್ದಿ: ಮಾರ್ಚ್ 16ರಿಂದ ನಾಪತ್ತೆಯಾಗಿದ್ದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಯೋರ್ವ ಭದ್ರಾನದಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.

ಕಳಸ ಪಟ್ಟಣದ ಸರ್ಕಾರಿ ಪಬ್ಲಿಕ್ ಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿ ಶ್ರೇಯಸ್ ಮೃತ ದುರ್ದೈವಿ. ಮಾರ್ಚ್ 16ರಂದು ಬೆಳಿಗ್ಗೆ ಶಾಲೆಗೆ ಹೋದವನು ಮನೆಗೆ ಬಂದಿರಲಿಲ್ಲ. ಪೋಷಕರು ಪೊಲಿಸ್ ಠಾಣೆಯಲ್ಲಿ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲಿಸರು ತೀವ್ರ ಹುಡುಕಾಟ ನಡೆಸಿದರೂ ವಿದ್ಯಾರ್ಥಿ ಪತ್ತೆಯಾಗಿರಲಿಲ್ಲ. ಈಗ ಭದ್ರಾ ನದಿಯಲ್ಲಿ ಶ್ರೇಯಸ್ ಶವವಾಗಿ ಪತ್ತೆಯಾಗಿದ್ದಾನೆ. ವಿದ್ಯಾರ್ಥಿ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.

Related Articles

Back to top button