ಧಾರ್ಮಿಕ

ಧರ್ಮಸ್ಥಳ ತಲೆ ಬುರುಡೆ ರಹಸ್ಯ..! ಮಾಜಿ ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದೇನು?

Views: 417

ಕನ್ನಡ ಕರಾವಳಿ ಸುದ್ದಿ: ಧರ್ಮಸ್ಥಳದ ತಲೆಬುರುಡೆ ರಹಸ್ಯದತ್ತ ಇಡೀ ಕರ್ನಾಟಕದ ಚಿತ್ತ ನೆಟ್ಟಿದೆ. ಧರ್ಮಸ್ಥಳದ ನೇತ್ರಾವತಿ ಸ್ನಾನ ಘಟ್ಟದ ಸುತ್ತಮುತ್ತಲಿನ ಕಾಡುಪ್ರದೇಶದಲ್ಲಿ ಶವಗಳನ್ನು ಹೂತಿಟ್ಟಿರುವ ಆರೋಪದಡಿ ‘ವಿಶೇಷ ತನಿಖಾ ತಂಡ (ಎಸ್‌ಐಟಿ) ನಡೆಸುತ್ತಿರುವ ತನಿಖೆಯಲ್ಲಿ ಅನಾಮಧೇಯ ವ್ಯಕ್ತಿ ಗುರುತಿಸಿರುವ ಸ್ಥಳಗಳಲ್ಲಿ ಕಳೇಬರ ಹುಡುಕಾಟ ನಡೆಸಿದ್ದಾರೆ. ಸದ್ಯ ಈ ವಿಷಯದ ಕುರಿತು ಮಾಜಿ ಸಂಸದೆ ಸುಮಲತ ಪ್ರತಿಕ್ರಿಯಿಸಿದ್ದಾರೆ.

ಧರ್ಮಸ್ಥಳದಲ್ಲಿ ಮಹಿಳೆಯರು ಹಾಗೂ ಯುವತಿಯರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ತನಿಖೆ ನಡೆಯುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದೆ ಸುಮಲತಾ ಅಂಬರೀಶ್ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.

ಯಾವುದನ್ನೇ ಆಗಲಿ ಆರೋಪ ಮಾಡುವುದು ಸುಲಭ. ಆದರೆ ಅದನ್ನು ಪ್ರೂ ಮಾಡೋದು ಮುಖ್ಯ. ಯಾರೋ ಒಬ್ಬರು ಹೇಳಿದ ತಕ್ಷಣ ಅದನ್ನು ನಿಜ ಆಗಬೇಕು ಅಂತ ಏನೂ ಇಲ್ಲ. ತನಿಖೆ ಮಾಡುತ್ತಿದ್ದಾರೆ ಜವಾಬ್ದಾರಿ ಇರುವಂತವರು ಎಸ್ಐಟಿ ತನಿಖೆ ಮಾಡುತ್ತಿದೆ. ಎಲ್ಲ ಮಾಹಿತಿ ಬಂದ ಮೇಲೆ ಅವರು ಏನು ಅಂತ ಹೇಳುತ್ತಾರೆ. ಆ ವರೆಗೆ ಕಾಯಬೇಕು. ಇದರ ನಡುವೆ ನಾವೇ ಒಬ್ಬೊಬ್ಬರು ಒಂದೊಂದು ಐಡಿಯಾ, ಥಿಯರಿ, ಜರ್ಜ್ಮೆಂಟ್ ಕೊಡಬಾರದು ಎಂದು ಸುಮಲತಾ ಅಂಬರೀಶ್ ಅವರು ಹೇಳಿದ್ದಾರೆ

Related Articles

Back to top button