ಜನಮನ

ತಾಯಿಯ ಜೊತೆಯಲ್ಲಿದ್ದ ಮಗಳ ಕಿಡ್ನ್ಯಾಪ್ ಮುಂದೆ ನಡೆದಿದ್ದೇನು !?

Views: 0

ಶಿವಮೊಗ್ಗದ ಬಡಾವಣೆಯೊಂದರ ಯುವತಿ ತನ್ನ ತಾಯಿಯೊಂದಿಗೆ ಸಾಗರದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದರು. ಇದೇ ವೇಳೆ ಇನ್ನೋವಾ ಕಾರಿನಲ್ಲಿ ಬಂದವರು ಯುವತಿಯನ್ನು ಅಪಹರಿಸಿದ್ದರು.

ಈ ಘಟನೆಯ ಬಗ್ಗೆ ವಿಚಲಿತರಾದ ತಾಯಿ ಮಗಳ ರಕ್ಷಣೆಗಾಗಿ ಕೂಗಿಕೊಂಡಿದ್ದಾರೆ. ಹೀಗಾಗಿ ದೊಡ್ಡ ಸಂಖ್ಯೆಯಲ್ಲಿ ಸುತ್ತಮುತ್ತಲಿನ ಜನ ಜಮಾಹಿಸಿದ್ದರು. ಸೇರಿದ್ದ ಜನರು ಕೂಡಲೇ ದೊಡ್ಡಪೇಟೆ ಪೊಲೀಸರಿಗೆ ಮಾಹಿತಿ ನೀಡಿದರು.

ಕಿಡ್ನಾಪ್ ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಕೂಡಲೇ ಕಾರ್ಯ ಪ್ರವರ್ಥರಾಗಿ ಸಿಸಿಟಿವಿ ಗಳ ಪರಿಶೀಲನೆ ನಡೆಸಿದರು.

ಕೊಪ್ಪದ ಕಡೆಗೆ ತೆರಳುತ್ತಿದ್ದ ಕಾರನ್ನು ಪೊಲೀಸರು ಬೆನ್ನಟ್ಟಿದರು. ಕಾರಿನಲ್ಲಿ ಇದ್ದವರಿಗೆ ತಮ್ಮನ್ನು ಹಿಂಬಾಲಿಸಿಕೊಂಡು ಬರುತ್ತಿದ್ದ ವಿಷಯ ಅರಿವಾಗಿ ನೇರವಾಗಿ ಪೊಲೀಸ್ ಠಾಣೆಗೆ ತೆರಳಿ ನಾವಿಬ್ಬರು ಪರಸ್ಪರ ಪ್ರೀತಿಸಿ ನಾಲ್ಕು ತಿಂಗಳ ಹಿಂದೆ ರಿಜಿಸ್ಟರ್ ಮದುವೆಯಾಗಿದ್ದೇವೆ ಎಂದು ತಿಳಿಸಿದ್ದಾರೆ. ಈ ವಿಷಯ ಪೋಷಕರಿಗೆ ತಿಳಿದಿರಲಿಲ್ಲ ಹಾಗಾಗಿ ಯುವತಿ ಇನ್ನೋವಾ ಕಾರಿನಲ್ಲಿ ತೆರಳಿದ್ದನ್ನು ಕಿಡ್ನಾಪ್ ಎಂದು ತಿಳಿದು ದೊಡ್ಡ ಅವಾಂತರವೇ ನಡೆಯಿತು.

ನಾನು ಪ್ರೀತಿಸಿ ಮದುವೆಯಾಗಿರುವ ಹುಡುಗನ ಜೊತೆ ತೆರಳಿದ್ದಾಗಿ ಯುವತಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾಳೆ .ಪ್ರಕರಣ ಸುಖಾಂತ್ಯಗೊಂಡಿದೆ.

Related Articles

Back to top button