ಗಂಡನ ಅನೈತಿಕ ಸಂಬಂಧಕ್ಕೆ ಬೇಸತ್ತು ಜಿಮ್‌ನಲ್ಲೇ ನೇಣು ಬಿಗಿದುಕೊಂಡ ಪತ್ನಿ

Views: 252
ಕನ್ನಡ ಕರಾವಳಿ ಸುದ್ದಿ: ಗಂಡನ ಅನೈತಿಕ ಸಂಬಂಧದಿಂದ ಬೇಸತ್ತು ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ಮದ್ದೂರು ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ನಡೆದಿದೆ.
ಪತಿ ನಡೆಸುತ್ತಿದ್ದ ಜಿಮ್‌ನಲ್ಲಿಯೇ ಮಹಿಳೆ ನೇಣಿಗೆ ಶರಣಾಗಿದ್ದಾರೆ. ದಿವ್ಯ (27) ಮೃತ ಮಹಿಳೆ.
ಈಕೆಯ ಪತಿ ಗಿರೀಶ್, ವೈಭವ ಹೆಸರಿನ ಜಿಮ್ ನಡೆಸುತ್ತಿದ್ದ. ಆದರೆ ಆತನಿಗೆ ಬೇರೊಬ್ಬರ ಜತೆ ಅನೈತಿಕ ಸಂಬಂಧ ಹೊಂದಿದ್ದ ಶಂಕೆ ಪತ್ನಿಗೆ ಇತ್ತು. ಹೀಗಾಗಿ ಮನನೊಂದು ಪತಿಯ ಜಿಮ್‌ನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆದರೆ, ಮಗಳನ್ನು ಅಳಿಯನೇ ಹೊಡೆದು ಕೊಂದಿರುವುದಾಗಿ ಗೃಹಿಣಿ ಕುಟುಂಬಸ್ಥರು ಆರೋಪಿಸಿದ್ದಾರೆ. ಪೊಲೀಸರು ಸ್ಥಳ ಪರಿಶೀಲಿಸಿ, ಮಾಹಿತಿ ಕಲೆ ಹಾಕುತ್ತಿದ್ದಾರೆ.
ಕೆಸ್ತೂರು ಗ್ರಾಮದ ಗ್ರಾಮದ ವೈಭವ್ ಜಿಮ್ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಬಗ್ಗೆ ಕುಟುಂಬಸ್ಥರು, ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿ ಜಿಮ್‌ನಲ್ಲಿದ್ದ ಪೀಠೋಪಕರಣಗಳನ್ನು ಧ್ವಂಸಗೊಳಿಸಿದ್ದಾರೆ. ಬಳಿಕ ಸ್ಥಳಕ್ಕೆ ಪೊಲೀಸರು ತೆರಳಿ ಸಂಬಂಧಿಕರನ್ನು ಹೊರಗೆ ಕಳುಹಿಸಿದ್ದಾರೆ. ಈ ವೇಳೆ ದಿವ್ಯಾಳ ಪತಿ ಗಿರೀಶ್, ಗಿರೀಶ್ ತಾಯಿ ವಿರುದ್ಧ ಗೃಹಿಣಿಯ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಮೂರು ತಿಂಗಳಿಂದ ಅಳಿಯ ಕಿರುಕುಳ ನೀಡುತ್ತಿದ್ದ. ಆತನ ಕಿರುಕುಳದಿಂದಲೇ ಮಗಳು ಮೃತಪಟ್ಟಿದ್ದಾಳೆ, ಹೀಗಾಗಿ ಆತನನ್ನು ಬಂಧಿಸುವಂತೆ ಪೋಷಕರು ಒತ್ತಾಯಿಸಿದ್ದಾರೆ.