ಇತರೆ
ಕೋಟ: ಗೂಡ್ಸ್ ರಿಕ್ಷಾ-ಸ್ಕೂಟರ್ ಡಿಕ್ಕಿ- ಸವಾರ ಸಾವು, ಸಹಸವಾರ ಗಂಭೀರ ಗಾಯ

Views: 123
ಕನ್ನಡ ಕರಾವಳಿ ಸುದ್ದಿ: ಸ್ಕೂಟರ್ ಹಾಗೂ ಗೂಡ್ಸ್ ರಿಕ್ಷಾ ಮುಖಾಮುಖಿ ಡಿಕ್ಕಿ ಹೊಡೆದು ಸವಾರ ಮೃತಪಟ್ಟು, ಸಹಸವಾರ ಗಂಭೀರ ಗಾಯಗೊಂಡ ಘಟನೆ ಫೆ. 18 ರಂದು ಮಂಗಳವಾರ ರಾಷ್ಟ್ರೀಯ ಹೆದ್ದಾರಿ 66ರ ಚೇಂಪಿಯ ವಿಶ್ವಕರ್ಮ ಸಭಾ ಭವನ ಬಳಿ ಸಂಭವಿಸಿದೆ.
ಸ್ಕೂಟರ್ ಸವಾರ ಗುಂಡ್ಮಿ ಅನಂತ ಹೆಗ್ಡೆ(40) ಮೃತಪಟ್ಟವರು.
ಡಿಕ್ಕಿಯ ರಭಸಕ್ಕೆ ಸ್ಕೂಟರ್ ಸವಾರ ಅನಂತ ಹೆಗ್ಡೆ ರಸ್ತೆಗೆ ಬಿದ್ದಿದ್ದು ತೀವ್ರವಾಗಿ ಗಾಯಗೊಂಡಿದ್ದಾರೆ. ತಕ್ಷಣ ಸ್ಥಳೀಯರ ಸಹಕಾರದಿಂದ ಟೋಲ್ ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.
ಕೋಟ ಠಾಣಾ ಪೊಲೀಸರು ತಕ್ಷಣ ಸ್ಥಳಕ್ಕಾಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.